ಕೋ.ಚೆನ್ನಬಸಪ್ಪರವರ ಪತ್ರ

ಈ ವರ್ಷದ kOche-bookಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೋ.ಚೆನ್ನಬಸಪ್ಪನವರು ನ್ಯಾಯಾಧೀಶರಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರು. ತಮ್ಮ ವೈಚಾರಿಕ ನಿಲುವುಗಳಿಗೆ ಹೆಸರಾದ ಲೇಖಕರು, ಕಾದಂಬರಿಕಾರರು.

ನಾನು ಕಳೆದ ಎರಡು-ಮೂರು ವಾರಗಳಲ್ಲಿ ರಾಜ್ಯದ ಹಲವಾರು ಲೇಖಕರಿಗೆ ಪತ್ರ ಬರೆದಿದ್ದೇನೆ. ನನ್ನ ಕಿರುಪರಿಚಯ, ರಾಜ್ಯದ ಹಾಲಿ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ, ಇಲ್ಲಿಯ ನೈತಿಕ ಅಧಃಪತನ ಮತ್ತು ಭ್ರಷ್ಟಾಚಾರವನ್ನು ನೈತಿಕ ಮಾರ್ಗದ ಚುನಾವಣಾ ರೀತಿಗಳಿಂದ ತಡೆಯುವ ಬಗೆ, ಇತ್ಯಾದಿ ಬರೆದು, ನಾನು ಚುನಾವಣೆಗೆ ನಿಲ್ಲುತ್ತಿರುವ ವಿಷಯ ಪ್ರಸ್ತಾಪಿಸಿ, ಅವರ ಬೆಂಬಲ ಕೋರಿ ಈ ಪತ್ರ ಬರೆದಿದ್ದೇನೆ. ಪತ್ರ ತಲುಪಿದ ಹಲವರು ಕಾಗದ ಬರೆದು, ಹಣ ಕಳುಹಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಮೊನ್ನೆ ಕೋ.ಚೆನ್ನಬಸಪ್ಪರವರ ಪತ್ರ ಬಂದಿತು. ಅದರ ಪ್ರತಿ ಇಲ್ಲಿದೆ:

kOche-letter

ಬಹುಶಃ ಇದಕ್ಕಿಂತ ಉತ್ತಮ ಶುಭಾಶಯಗಳು ಮತ್ತು ಹಾರೈಕೆಗಳು ಇರಲಿಕ್ಕೆ ಸಾಧ್ಯವಿಲ್ಲವೇನೊ. ಈ ದೇಶದಲ್ಲಿ ಎಲ್ಲವೂ ಕಳೆದುಹೋಗಿಲ್ಲ. ಉತ್ತಮ ಪ್ರಜಾಪ್ರಭುತ್ವದ ಕನಸು ಮತ್ತು ಕ್ರಿಯಾಶೀಲ ಆಶಾವಾದದಿಂದ ಸಹನೀಯ ಮತ್ತು ಘನತೆಯುಕ್ತ ಜೀವನ ಇಲ್ಲಿ ಸಾಧ್ಯವಿದೆ. ಈ ದೇಶಕ್ಕೆ ಮತ್ತು ರಾಜ್ಯಕ್ಕೆ ನ್ಯಾಯ, ಸಮಾನತೆ, ಮತ್ತು ಸಹನೀಯ ಜೀವನ ಸಾಧಿಸಿಕೊಳ್ಳುವ ಹೋರಾಟದ ಮತ್ತು ತ್ಯಾಗದ ಒಂದು ದೊಡ್ಡ ಪರಂಪರೆಯೇ ಇದೆ. ಜನ ಹೆಚ್ಚುಹೆಚ್ಚು ಪ್ರಜಾಸತ್ತಾತ್ಮಕವಾಗಿ ಪಾಲ್ಗೊಳ್ಳುತ್ತ, ಸಾಮುದಾಯಿಕವಾಗಿ ಯೋಚಿಸುವ ಸಂದರ್ಭ ಸೃಷ್ಟಿಸಿಕೊಳ್ಳುತ್ತ ಹೋದ ಹಾಗೆ ಈ ದೇಶ ಮತ್ತೊಮ್ಮೆ ಮಾನವೀಯ ಮತ್ತು ಸಾರ್ವಕಾಲಿಕ ಮೌಲ್ಯಗಳಿಗೆ ಗುರುತಾಗುತ್ತದೆ.

ಹಿರಿಯರಾದ ಕೋಚೆಯವರಿಗೆ ಪ್ರೀತಿಪೂರ್ವಕ ಧನ್ಯವಾದಗಳು.

ರವಿ…

Both comments and pings are currently closed.

Comments are closed.

Powered by WordPress