ದೇಶ ಕಟ್ಟುವ ಈ ಕೆಲಸದಲ್ಲಿ ನಿಮ್ಮದೂ ಒಂದು ಪಾಲಿರಲಿ

ಆತ್ಮೀಯರೇ,

ನೆನ್ನೆ (5/4) ಮತ್ತು ಮೊನ್ನೆಯ (5/4) ಚುನಾವಣಾ ಪ್ರಚಾರ ಬಹಳ ಚೆನ್ನಾಗಿ ಆಯಿತು. ಐವತ್ತಕ್ಕೂ ಹೆಚ್ಚು ಜನ ಕಾರ್ಯಕರ್ತರ ಜೊತೆ, aap-6-4-2014-1ಹಲವಾರು ವಾಹನಗಳಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳ ಹಲವು ಸ್ಥಳಗಳಲ್ಲಿ ಭರ್ಜರಿ ಪ್ರಚಾರ ಆಯಿತು. ನೆನ್ನೆ ಇಡೀ ದಿನ ರಾಜರಾಜೇಶ್ವರಿ ನಗರ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ತನಕ ಪ್ರಚಾರ ನಡೆಯಿತು. ಖಂಡಿತವಾಗಿ ಹತ್ತಾರು ಸಾವಿರ ಜನರನ್ನು ಮತ್ತವರ ಮನಸ್ಸನ್ನು ಕಳೆದ ವಾರಾಂತ್ಯ ಮುಟ್ಟಿದ್ದೇವೆ.

ನಮ್ಮ ಎಲ್ಲಾ ಕಾರ್ಯಕರ್ತರು ಬಹಳ ಹುಮ್ಮಸ್ಸು ಮತ್ತು ಬದ್ಧತೆಯಿಂದ ತಮ್ಮ ದೈಹಿಕ ತಾಕತ್ತನ್ನು ಮೀರಿ ಕೆಲಸ ಮಾಡಿದ್ದಾರೆ. ಈಗಾಗಲೆ ಹತ್ತಕ್ಕೂ ಹೆಚ್ಚು ಜನ ಕೆಲಸದಿಂದ ರಜೆ ಪಡೆದುಕೊಂಡು ಬಂದು ಪೂರ್ಣಾವಧಿ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಲ್ಲಿ ಬಹುತೇಕ ಜನ ನನಗೆ ಆಮ್ ಆದ್ಮಿ ಪಾರ್ಟಿಯ ಮೂಲಕವೇ ಪರಿಚಯ ಆದವರು. ಆಮ್ ಆದ್ಮಿ ಪಕ್ಷದ ಹೋರಾಟದಲ್ಲಿ, ಚಳವಳಿಯಲ್ಲಿ ನಂಬಿಕೆ ಇಟ್ಟವರು ಇವರು. ಅವರ ಕಾಳಜಿ, ತತ್ಪರತೆ, ಮತ್ತು ದೇಶಭಕ್ತಿಗೆ, ಒಂದು ಸಲಾಮ್. ಇನ್ನೂ ಅನೇಕ ಜನ ಉಳಿದಿರುವ ಏಳೆಂಟು ದಿನಗಳ ಅವಧಿಗೆ ಬಂದು ತೊಡಗಿಸಿಕೊಳ್ಳಲಿದ್ದಾರೆ. ಮನೆ ಅಥವ ಕಛೇರಿಯ ಕಂಫರ್ಟ್ ಜೋನ್‌ನಲ್ಲಿ ಕುಳಿತು ಇಡೀ ದೇಶದ ಅವ್ಯವಸ್ಥೆಯ ಬಗ್ಗೆ ಮಾತನಾಡುವ ಆಷಾಢಭೂತಿಗಳು ಅಲ್ಲ ಇವರು. ತಮಗೆ ತಾವೇ ಮಾತುಗಾರಿಕೆಯ ಮೂಲಕ ಮೋಸ ಮಾಡಿಕೊಳ್ಳುವ ಮಾನಸಿಕ ದಾರಿದ್ರ್ಯದವರಲ್ಲ ಇವರು. ಇವರ ಸಹವಾಸ ಜೀವನವನ್ನು ಅರ್ಥಪೂರ್ಣ ಮಾಡುತ್ತಿದೆ ಮತ್ತು ಅದಕ್ಕಾಗಿ ನಾನು ಇವರೆಲ್ಲರಿಗೂ ಕೃತಜ್ಞನಾಗಿದ್ದೇನೆ.

ನೀವೂ ಬನ್ನಿ; ದೇಶ ಕಟ್ಟುವ ಈ ಕೆಲಸದಲ್ಲಿ ನಿಮ್ಮದೂ ಒಂದು ಪಾಲಿರಲಿ. ವಿವರಗಳಿಗೆ: 9611021999, 9591190216, 9591192073

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ

aap-6-4-2014-2

Both comments and pings are currently closed.

Comments are closed.

Powered by WordPress