ಶನಿವಾರದಂದು (22-03-2014) ನಾಮಪತ್ರ ಸಲ್ಲಿಕೆ : ರಾಮನಗರಕ್ಕೆ ಬನ್ನಿ…

ಸ್ನೇಹಿತರೇ,

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ (Returning Officer) ರಾಮನಗರದಲ್ಲಿದೆ. Bangalore-Rural-MP-Constituencyನಾಳೆ (ಶನಿವಾರ, 22-03-2014) ನಾನು ಅಲ್ಲಿಗೆ ಹೋಗಿ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಲಿದ್ದೇನೆ. ಬೆಳಗ್ಗೆ ಹತ್ತೂವರೆಗೆ ರಾಮನಗರದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ “ಕಂದಾಯ ಭವನ”ದ ಬಳಿ ಇರುತ್ತೇವೆ. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು, ಎಲ್ಲರೂ ಬಂದು ಪಾಲ್ಗೊಳ್ಳಬೇಕೆಂದು ಕೋರಿಕೊಳ್ಳುತ್ತೇನೆ.

ನಾವು ಬೆಂಗಳೂರು, ಇತ್ಯಾದಿ ಸ್ಥಳಗಳಿಂದ ಯಾವುದೇ ಸಾರಿಗೆ ವ್ಯವಸ್ಥೆ ಮಾಡುತ್ತಿಲ್ಲ. ದಯವಿಟ್ಟು ಕಾರು, ದ್ವಿಚಕ್ರ ವಾಹನ, ಅಥವ ಬಸ್ಸಿನಲ್ಲಿ ಬನ್ನಿ. ಜೊತೆಗೆ ಸ್ನೇಹಿತರನ್ನು, ಮನೆಯವರನ್ನು ಕರೆತನ್ನಿ. ಇದು ದುಡ್ಡುಕೊಟ್ಟು ಕುರಿಮಂದೆಯಂತೆ ಜನರನ್ನು ತುಂಬಿಸಿಕೊಂದು ಬರುವ ಇತರೆ ಪಕ್ಷಗಳಿಗಿಂತ ಭಿನ್ನವಾಗಿರಬೇಕು, ಘನತೆಯಿಂದ ಕೂಡಿರಬೇಕು.

ನಾಮಪತ್ರ ಸಲ್ಲಿಕೆಯಾದ ನಂತರ ರಾಮನಗರ ಪಟ್ಟಣದಲ್ಲಿ ಇಡೀ ದಿನ ಪ್ರಚಾರ ಕಾರ್ಯ ನಡೆಯುತ್ತದೆ. ಹಾಗಾಗಿ ನೀವು ಯಾವ ಸಮಯದಲ್ಲಾದರೂ ಬಂದು ಜೊತೆಗೂಡಬಹುದು. ಬೆಳಗ್ಗೆಯೇ ಬಂದರೆ ಅನುಕೂಲ.

ಕಾರಿನಲ್ಲಿ ಬರುವವರು ನಿಮ್ಮ ಮನೆಯಿಂದ ಸಾಧ್ಯವಾದರೆ ನಮ್ಮ ಪಕ್ಷದ ಚುನಾವಣಾ ಚಿಹ್ನೆಯಾದ ಪೊರಕೆಯನ್ನು ತೆಗೆದುಕೊಂಡು ಬನ್ನಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ

Both comments and pings are currently closed.

Comments are closed.

Powered by WordPress