“ಕನಕಪುರ ರಿಪಬ್ಲಿಕ್”ನಲ್ಲಿ ಪ್ರಜಾಪ್ರಭುತ್ವ ಉಳಿಸಲು ಬೆಂಬಲ ಕೋರಿ

ಪತ್ರಿಕಾ ಟಿಪ್ಪಣಿ – 01/04/2014

“ಕನಕಪುರ ರಿಪಬ್ಲಿಕ್”ನಲ್ಲಿ ಪ್ರಜಾಪ್ರಭುತ್ವ ಉಳಿಸಲು ಬೆಂಬಲ ಕೋರಿ

ಮಾನ್ಯರೇ,

ನಮ್ಮ ರಾಜಕೀಯ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ. ಅನರ್ಹರು, ಅಪ್ರಾಮಾಣಿಕರು, ಕ್ರಿಮಿನಲ್ ಹಿನ್ನೆಲೆಯುಳ್ಳ ಜನ ರಾಜಕೀಯವನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿರುವುದನ್ನು ನಾವು ಗಮನಿಸುತ್ತಾ ಬರುತ್ತಿದ್ದೇವೆ. ದೇಶ-ನಾಡು ಕಟ್ಟುವ ಕೆಲಸವಾದ ರಾಜಕಾರಣವನ್ನು ಈಗಿನ ರಾಜಕಾರಣಿಗಳು ಸ್ವಲಾಭಕ್ಕಾಗಿ, ತಮ್ಮ ವ್ಯವಹಾರ ವೃದ್ಧಿಗಾಗಿ ಬಳಸಿಕೊಳ್ಳುತ್ತ ಅಧಿಕಾರ ದುರುಪಯೋಗ ಮಾಡುತ್ತಿರುವುದನ್ನು, ದೇಶವಾಸಿಗಳ ಜೀವನವನ್ನು ಯಾತನಾಮಯವನ್ನಾಗಿ ಮಾಡಿರುವುದನ್ನು ನಾವೆಲ್ಲಾ ನೋವಿನಿಂದ ನೋಡುತ್ತಿದ್ದೇವೆ, ಪವಿತ್ರವಾದ ರಾಜಕಾರಣ ಈಗಿನ ರಾಜಕಾರಣಿಗಳಿಗೆ ಸಮಯ ಕೊಲ್ಲುವ ಚದುರಂಗದ ಆಟವಾಗಿದೆ ಇಲ್ಲವೆ ಕುದುರೆಜೂಜಿನಂತಹ ವ್ಯವಹಾರವಾಗಿದೆ.

ಈ ಸಂದರ್ಭದಲ್ಲಿ ದೇಶದಲ್ಲಿ ಒಂದು ದರ್ಮಯುದ್ಧ ನಡೆಯುತ್ತಿದೆ. ಈ ದುಷ್ಟವ್ಯವಸ್ಥೆಯ ವಿರುದ್ಧ, ನಮ್ಮ ದೇಶದಲ್ಲಿಯ ನೀತಿರಹಿತ ರಾಜಕಾರಣವನ್ನು ಬದಲಿಸುವುದಕ್ಕಾಗಿ ಅರವಿಂದ್ ಕೇಜ್ರಿವಾಲರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಚಳವಳಿಯ ಮೂಲಕ ಈ ಅಹಿಂಸಾತ್ಮಕ, ರಕ್ತರಹಿತ ಕ್ರಾಂತಿ ನಡೆಯುತ್ತಿದೆ. ಈ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ನಾನು ಈ ರಾಜ್ಯದ ಜನರನ್ನು ಆಹ್ವಾನಿಸುತ್ತೇನೆ.

ನಾನು, ರವಿ ಕೃಷ್ಣಾರೆಡ್ಡಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ರಾಜಕಾರಣ ಎನ್ನುವುದು ವ್ಯವಹಾರ-ದಂಧೆಯಾಗಿರುವ ಈ ಸಂದರ್ಭದಲ್ಲಿ ನಾನು ಸಾರ್ವಜನಿಕವಾಗಿ ಈ ಕೆಳಕಂಡಂತೆ ವಚನ ನೀಡಬಯಸುತ್ತೇನೆ:
ನಾನು ಈ ಚುನಾವಣೆ ಗೆದ್ದು ಸಂಸದನಾದಲ್ಲಿ-
• ನನ್ನ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ.
• ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ.
• ನನ್ನ ಮತ್ತು ನನ್ನ ಕುಟುಂಬದ ಖರ್ಚುವೆಚ್ಚಗಳನ್ನೆಲ್ಲ ಸಂಸದನಾಗಿ ನನಗೆ ಬರುವ ಸಂಬಳ ಮತ್ತು ನನ್ನ ಪತ್ನಿಯ ಸಂಬಳ/ಆದಾಯದಲ್ಲಷ್ಟೆ ನಿಭಾಯಿಸುತ್ತೇನೆ.

ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರ ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿದೆ. ರಾಜ್ಯದ ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠರು ಹೇಳುವಂತೆ ಈ ಕ್ಷೇತ್ರ ಈಗ “ಕನಕಪುರ ರಿಪಬ್ಲಿಕ್” ಆಗಿ ಪರಿವರ್ತನೆಗೊಂಡಿದೆ. ಇತ್ತೀಚಿನ ದಶಕಗಳಲ್ಲಿ ಈ ಕ್ಷೇತ್ರ ನಾಡಿನ ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ಮತ್ತು ಗೂಂಡಾಗಿರಿ-ಬಾಹುಬಲದ ರಾಜಕಾರಣಕ್ಕೆ ಕೆಟ್ಟ ಹೆಸರಾಗಿದೆ. ಇದೆಲ್ಲವೂ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡುತ್ತಿರುವದಷ್ಟೇ ಅಲ್ಲದೆ, ಅದಕ್ಕೆ ವಿರುದ್ಧವಾಗಿ ಪಾಳೆಯಗಾರಿಕೆ ಸಂಸ್ಕೃತಿ ಮತ್ತು ಭಯದ ವಾತಾವರಣವನ್ನು ಹರಡುತ್ತಿದೆ. ಈ ಭಾಗದ ಸಂಸದರಾದ ಡಿ.ಕೆ.ಸುರೇಶ್ ಮತ್ತು ಸಚಿವರಾದ ಡಿ.ಕೆ.ಶಿವಕುಮಾರ್ ಈ ಪ್ರಜಾಪ್ರಭುತ್ವದ ಅಣಕದಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪಾಲೂ ಇದರಲ್ಲಿ ಕಮ್ಮಿಯಿಲ್ಲ. ಬಿಜೆಪಿಯವರ ಅನೈತಿಕ ಪಾಲುದಾರಿಕೆ ಮತ್ತು ದುರಾಡಳಿತವೂ ಇದಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ಇಂತಹ ಸಂದರ್ಭದಲ್ಲಿ ಈ ಎಲ್ಲಾ ಪ್ರಜಾಪ್ರಭುತ್ವ-ವಿರೋಧಿ ಶಕ್ತಿಗಳೊಡನೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಪಕ್ಷಗಳ ವಿರುದ್ದ ಹೋರಾಡುವುದರ ಜೊತೆಜೊತೆಗೆ ಪರ್ಯಾಯವನ್ನೂ ನೀಡುವ ಬಗ್ಗೆ ನಾವು ಕಟಿಬದ್ದರಾಗಿದ್ದೇವೆ. ಈ ವಿಚಾರದಲ್ಲಿ ನಮಗೆ ಆಮ್ ಆದ್ಮಿಗಳ (ಜನ ಸಾಮಾನ್ಯರ) ಬೆಂಬಲ ಮತ್ತು ಸಕ್ರಿಯ ಸಹಕಾರ ಬೇಕಿದೆ. ಹಣ-ಹೆಂಡ-ಜಾತಿ-ಕೋಮು ರಾಜಕೀಯ ಮಾಡುತ್ತ, ಓಟು ಕೊಂಡುಕೊಳ್ಳುವ ಅನೀತಿಯ ರಾಜಕಾರಣಿಗಳ ವಿರುದ್ಧ ನಾವೆಲ್ಲಾ ಒಂದಾದರೆ ಮಾತ್ರ ರಾಜ್ಯದ ಮುಂದಿನ ದಿನಗಳ ರಾಜಕೀಯವನ್ನು ಬದಲಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು, ಸಹಾಯ ಮಾಡಲು ನಾವು ಈ ಕ್ಷೇತ್ರದ ಜನತೆಯನ್ನು ವಿನಂತಿಸುತ್ತಿದ್ದೇವೆ. ಈಗಾಗಲೆ ಈ ಕ್ಷೇತ್ರದಲ್ಲಿ ಎಸ್.ಆರ್.ಹಿರೇಮಠರು ನಮ್ಮ ಪಕ್ಷದ ಪರ ಪ್ರಚಾರ ಕೈಗೊಂಡು ನಮ್ಮ ಹೋರಾಟಕ್ಕೆ ಶಕ್ತಿ ತುಂಬಿರುವುದನ್ನು ತಾವೆಲ್ಲರೂ ಗಮನಿಸಿರುತ್ತೀರಿ.

ಹಾಗೆಯೇ, ಈ ಚುನಾವಣೆಯನ್ನು ನಾವು ಜನರ ದೇಣಿಗೆಯ ಹಣದಲ್ಲಿ ನಿಭಾಯಿಸುತ್ತಿದ್ದೇವೆ. ಪ್ರತಿಯೊಂದು ದೇಣಿಗೆಯನ್ನೂ ನಮ್ಮ ವೆಬ್‌ಸೈಟ್‌ನಲ್ಲಿ (http://www.ravikrishnareddy.com/) ಪ್ರಕಟಿಸಲಾಗುತ್ತದೆ, ಮತ್ತು ಎಲ್ಲಾ ಖರ್ಚುಗಳಿಗೂ ಲೆಕ್ಕ ಕೊಡಲಾಗುತ್ತದೆ. ದಯವಿಟ್ಟು ಈ ರಾಜ್ಯದ ಜನತೆ ನಮಗೆ ದೇಣಿಗೆ ನೀಡುವುದರ ಮೂಲಕ ನಮ್ಮ ಹೋರಾಟಕ್ಕೆ ಬಲ ತುಂಬಬೇಕಾಗಿ ವಿನಂತಿಸುತ್ತೇವೆ. ದೇಣಿಗೆ ನೀಡಬಯಸುವವರು ನಮ್ಮ ಪಕ್ಷದ ವೆಬ್‌ಸೈಟ್ ಮೂಲಕ (https://donate.aamaadmiparty.org/) ನೀಡಬಹುದು, ಇಲ್ಲವಾದಲ್ಲಿ ಈ ಕೆಳಗಿನ ಖಾತೆಗ ಹಣ ವರ್ಗಾಯಿಸಬಹುದು.
Account Holder name: Ravi Krishna Reddy
Account Number: 000201663544, SB Account
Bank Name: ICICI Bank
IFSC Code: ICIC0000002

ಹೆಚ್ಚಿನ ವಿವರಗಳಿಗೆ ಈ ಸಂಖ್ಯೆಗಳನ್ನು ಸಂಪರ್ಕಿಸುವುದು: 95911 92073 / 96110 21999 / 95911 90216

ನಮ್ಮ ಪಕ್ಷದ ವತಿಯಿಂದ ಈ ಕ್ಷೇತ್ರದ ಅಭಿವೃದ್ಧಿಗಾಗಿ ಏನೇನು ಮಾಡಬೇಕು ಮತ್ತು ಮಾಡುತ್ತೇವೆ ಎನ್ನುವುದರ ಬಗ್ಗೆ ನಾವು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು ಅದನ್ನು ಬೆಂಗಳೂರಿನಲ್ಲಿ ಮತ್ತು ರಾಮನಗರದಲ್ಲಿ ಈ ವಾರದಲ್ಲಿ ಪ್ರತ್ಯೇಕ ಪತ್ರಿಕಾಗೋಷ್ಟಿಗಳನ್ನು ನಡೆಸಿ ಬಿಡುಗಡೆ ಮಾಡಲಿದ್ದೇವೆ ಎನ್ನುವುದನ್ನು ಈ ಸಮಯದಲ್ಲಿ ಸಾರ್ವಜನಿಕರ ಗಮನಕ್ಕೆ ತರಲಿಚ್ಚಿಸುತ್ತೇವೆ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ

Both comments and pings are currently closed.

Comments are closed.

Powered by WordPress