ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ
ವರ್ತಮಾನದಲ್ಲಿ ಬರೆದಿರುವ ಲೇಖನ: ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…
ವರ್ತಮಾನದಲ್ಲಿ ಬರೆದಿರುವ ಲೇಖನ: ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…
ವರ್ತಮಾನದಲ್ಲಿ ಬರೆದಿರುವ ಲೇಖನ: ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?
ಸ್ನೇಹಿತರೆ, www.vartamaana.com ವರ್ತಮಾನ – ಇಂದಿನ ಸವಾಲು ಮತ್ತು ಭವಿಷ್ಯದ ಕನಸು ಇಂತಹುದೊಂದು ಪ್ರಯತ್ನ ಆರಂಭವಾಗಿದೆ. ಕೇವಲ ನಮ್ಮ ಬದ್ಧತೆ ಮತ್ತು ನಾವು ಒಂದಷ್ಟು ಜನ ಕೊಡಬಹುದಾದ ಬಿಡುವಿನ ಸಮಯದ ಮೇಲೆ ಈ ಪ್ರಯತ್ನ ಸಾಗುತ್ತದೆ. ಇದು ವೈಯಕ್ತಿಕ ನೆಲೆಯಲ್ಲಿ ಆರಂಭವಾದದ್ದೇ ಆದರೂ ಇದು ಅಂತಿಮವಾಗಿ ಸಂಘಟಿತ ಯತ್ನ. ಇದನ್ನು ಆರಂಭಿಸಿದಾಗ ಬರೆದ ಪೀಠಿಕೆ ಇಲ್ಲಿದೆ. ಭೇಟಿ ಕೊಡಿ. ಇನ್ನು ಮೇಲೆ, ನನ್ನ ಲೇಖನಗಳು ವರ್ತಮಾನದಲ್ಲಿಯೇ ಪ್ರಕಟವಾಗಲಿವೆ. ಸಾಧ್ಯವಾದಾಗ ಅದರ ಕೊಂಡಿ ಇಲ್ಲಿ ಕೊಡುತ್ತೇನೆ. ನಮಸ್ಕಾರ, ರವಿ…
ಸ್ನೇಹಿತರೆ, ನಾವು ಒಂದಿಷ್ಟು ಸಮಾನಮನಸ್ಕರು (ಸುಜಾತ ಕುಮಟ, ಸೂರ್ಯ ಮುಕುಂದರಾಜ್, ಶಾಂತವೇರಿ ರಾಮಮನೋಹರ್, ಮುಕುಂದರಾಜ್, ನಾನು, ಮತ್ತು ಇನ್ನೂ ಹಲವರು) “ಕರ್ನಾಟಕ ಪ್ರಜಾ ಮಂಡಲ” ಎಂಬ ವೇದಿಕೆಯೊಂದನ್ನು ಹುಟ್ಟುಹಾಕಿದ್ದೇವೆ. (ಇದರ ಹುಟ್ಟು ಹೇಗಾಯಿತು ಎಂದು ಮುಂದೊಮ್ಮೆ ಬರೆಯುತ್ತೇನೆ.) ಈ ಸಂಘಟನೆಯ ಮೂಲ ಉದ್ದೇಶ, ’ಕರ್ನಾಟಕದ ಸಮಾಜ, ಸಂಸ್ಕೃತಿ, ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ’ ಕಾರ್ಯಕ್ರಮಗಳನ್ನು ರೂಪಿಸುವುದು. ಕರ್ನಾಟಕ ರಾಜಕಾರಣದ ಇತ್ತೀಚಿನ ಕ್ಷುದ್ರ ಪ್ರಹಸನವಾದ ಆಣೆ-ಪ್ರಮಾಣದ ವಿರುದ್ಧವಾಗಿ “ಸಂವಿಧಾನದ ಮೇಲಾಣೆ” ಎಂಬ ಪ್ರತಿಭಟನಾ ಕಾರ್ಯಕ್ರಮ (27/6/2011)ಮಾಡುವುದರ ಮೂಲಕ ನಾವು [...]
ಕಳೆದ ಶನಿವಾರ ಮತ್ತು ಭಾನುವಾರ (ಜೂನ್ 25-26, 2011) ಚಿತ್ರದುರ್ಗದಲ್ಲಿ ’ಮಾಧ್ಯಮ ಕರ್ನಾಟಕ” ಎಂಬ ವಿಚಾರ ಸಂಕಿರಣ ನಡೆಯಿತು. ’ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು’, ಮತ್ತು ’ಗೆಳೆಯರ ಬಳಗ, ಚಿತ್ರದುರ್ಗ’, ’ನಾವು-ನಮ್ಮಲ್ಲಿ’ ಸಹಯೋಗದೊಂದಿಗೆ ಆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದಕ್ಕೆ ಹೆಚ್ಚಾಗಿ ಕನ್ನಡದ ಕೆಲವು ಪ್ರಮುಖ ಪ್ರಗತಿಪರ ವಿಚಾರಧಾರೆಯ ಪತ್ರಕರ್ತರು, ಬರಹಗಾರರು, ಆಸಕ್ತರು ಬಂದಿದ್ದರು. ಆಯೋಜಕರಲ್ಲಿ ಬಹುಪಾಲಿನವರು ಚಿತ್ರದುರ್ಗದ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಯುವಕರೇ ಇದ್ದರು. (ಯುವಕರೇ ಅಂದರೆ ಯುವಕ ಮತ್ತು ಯುವತಿಯರು ಎಂದು ಭಾವಿಸಬೇಕಾಗಿ ವಿನಂತಿ.) [...]
ಕಳೆದ ವಾರ (19/6/11) ನಡೆದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು ಇವು. ಬಿಡುಗಡೆಯಾದ ಪುಸ್ತಕಗಳ ಮುಖಪುಟ ಸಹ ಈ ಪೋಸ್ಟ್‌ಗೆ ಸೇರಿಸಿದ್ದೇನೆ. ಅಂದು ಬಂದಿದ್ದ ಗೆಳೆಯರಿಗೆ, ಹಿತೈಷಿಗಳಿಗೆ, ನೆರವಾದ ಮಿತ್ರರಿಗೆ, ಕವಿಗಳಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು.