ದೇಶಭಕ್ತರು ಬಾಂಬ್ ಹಿಡಿಯಲೇಬೇಕೆ?

[ನಮ್ಮ ಯುವ ಜನಾಂಗ ದಾರಿ ತಪ್ಪುತ್ತಿರುವುದಾದರೂ ಯಾಕೆ ? ಈ ಅಡ್ಡದಾರಿ ದುರಂತದಲ್ಲಿ ವ್ಯವಸ್ಥೆಯ ಪಾತ್ರವೆಷ್ಟು ? ಮಟ್ಟೆಣ್ಣನವರ್ `ಬಾಂಬ್' ಪ್ರಸಂಗ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಲಿಕ್ಕೊಂದು ಸಂದರ್ಭ ಸೃಷ್ಟಿಸಿದೆ. ಈ ಆತ್ಮಾವಲೋಕನ ನಾಳಿನ ಬೆಳಗು ಹೇಗಿರಬೇಕೆಂದು ನಿರ್ಧರಿಸುವ ನಿರ್ಣಾಯಕ ಸಂದರ್ಭವೂ ಹೌದು. ನವೆಂಬರ್ 20, 2003, ದಟ್ಸ್‌ಕನ್ನಡ.ಕಾಮ್] ಗಿರೀಶ್ ಮಟ್ಟೆಣ್ಣನವರ್; ಕರ್ನಾಟಕದಲ್ಲಿನ ಹೊಸ ಮಿಂಚು, ಜನಸಾಮಾನ್ಯರ ಆಶಾಕಿರಣ. ಮಾಧ್ಯಮಗಳ ಪ್ರಿಯಕರ. ಸಾಹಿತಿಗಳಿಗೆ ನವ ಸ್ಫೂರ್ತಿ. ಬಿಸಿರಕ್ತದ ದೇಶಭಕ್ತರ ಸಮಕಾಲೀನ ಆದರ್ಶ. ಆದರೇನು? ಸಾರ್ವಜನಿಕ ನೆನಪು ಕೆಲಕಾಲ ಮಾತ್ರ [...]