ಅಕ್ಕ ಸಮ್ಮೇಳನದಲ್ಲಿ ನಮ್ಮನ್ನು ಪ್ರತಿನಿಧಿಸುವವರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) ಅದು 1999 ರ ಬೇಸಿಗೆ. ನಾನಾಗ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಜನಪ್ರಿಯ ಇಂಗ್ಲಿಷ್ ದೈನಿಕ “ಡೆಕ್ಕನ್ ಕ್ರಾನಿಕಲ್” ನಮ್ಮ ರಾಜ್ಯದ ಬಾಗೆಪಲ್ಲಿ ತಾಲ್ಲೂಕಿನಲ್ಲಿ ಚಿತ್ರಾವತಿ ನದಿಗೆ ಕರ್ನಾಟಕ ಸರ್ಕಾರ ಕಟ್ಟಲಿರುವ ಬ್ಯಾರೇಜ್‌ನಿಂದ ಆಂಧ್ರದ ಪಾಲಿನ ನೀರಿಗೆ ಮೋಸವಾಗಲಿದೆ, ಇದನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೆ ನಿಲ್ಲಿಸಲು ಪ್ರಯತ್ನಿಸಬೇಕು, ಅದಕ್ಕಾಗಿ ಏನೇನು ಮಾಡಬೇಕು ಎಂದು ದೊಡ್ಡ ವರದಿಯನ್ನೇ ಪ್ರಕಟಿಸಿತ್ತು. ನಮ್ಮಲ್ಲಿ ಕೆಲವು ತಾಲ್ಲೂಕುಗಳು, ಊರುಗಳಿವೆ. [...]

ಎಲ್ಲಾ ಹೆಣ್ಣು ಮಕ್ಕಳಿಗೂ ಸೈಕಲ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) ಪತ್ರಿಕೆಯ ಗುಂಗು ಗಂಭೀರವಾಗುವುದಕ್ಕಿಂತ ಮುಂಚೆ, ಸರಿಸುಮಾರು ಒಂದು ವರ್ಷದಿಂದಲೂ ಇನ್ನೊಂದು ಕನಸು ನನ್ನ ತಲೆಯುಲ್ಲಿ ಯಾವಾಗಲೂ ಅಲೆಯುತ್ತಿತ್ತು. ಅದೇನೆಂದರೆ, ನಮ್ಮ ಪಕ್ಕದ ಊರಿನ ಚಂದಾಪುರದ ಪ್ರೌಢಶಾಲೆಯಿಂದ ಪ್ರಾರಂಭಿಸಿ, ಸುತ್ತಮುತ್ತಲಿನ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡಿಸುವ ಯೋಜನೆ. ಮುಂದಿನ ಸಲ ಬೆಂಗಳೂರಿಗೆ ಬಂದ ತಕ್ಷಣ, ಊರಿನ ಸುತ್ತಮುತ್ತಲಿನ ಸ್ನೇಹಿತರನ್ನು, ಕಾಳಜಿಯುಳ್ಳ ಸ್ಥಿತಿವಂತರನ್ನು ಸೇರಿಸಿ, ಒಂದೆರಡು ಲಕ್ಷ ವಂತಿಗೆ ಶೇಖರಿಸಿ, ದಿಟ್ಟೆ ಎಂಬ ಮಹಿಳಾಪರ ಸಂಸ್ಥೆ [...]

ಪತ್ರಿಕೆ ಬರಬೇಕಿದ್ದರೆ ಹೆಗಲು ಕೊಟ್ಟು ದುಡಿದವರು…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮೊದಲ ಸಂಚಿಕೆಯಲ್ಲಿ (ಆಗಸ್ಟ್ 25, 2006) ಪ್ರಕಟವಾದದ್ದು) ಆತ್ಮೀಯರೇ, ಕಳೆದೆರಡು ದಶಕಗಳಲ್ಲಿ ನನ್ನ ಅರಿವು ಮತ್ತು ತಿಳುವಳಿಕೆಯನ್ನು ಆಪ್ತವಾಗಿ ವಿಸ್ತರಿಸಿದ, ಪ್ರತಿವಾರವೂ ಅನೇಕ ಗಂಟೆಗಳ ಸಹಚರರಾಗಿದ್ದ ಸುಧಾ, ತರಂಗ, ಕರ್ಮವೀರ, ಲಂಕೇಶ್ ಪತ್ರಿಕೆ, ವಾರಪತ್ರಿಕೆ, ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್, ಮತ್ತಿತರ ಕನ್ನಡ ವಾರಪತ್ರಿಕೆಗಳನ್ನು ಶಿಷ್ಯನಂತೆ ಪ್ರೀತಿಯಿಂದ ನೆನೆಯುತ್ತಾ… ಈ ವರ್ಷದ ಆರಂಭದ ದಿನಗಳ ಕ್ಯಾಲಿಫೋರ್ನಿಯಾದ ಚಳಿಗಾಲದ ದೀರ್ಘ ರಾತ್ರಿಗಳಲ್ಲಿ, ಪ್ರಚಲಿತ ವಿದ್ಯಮಾನಗಳನ್ನು ಪ್ರಮುಖವಾಗಿ ಆಧರಿಸಿದ, ಜನಪರ ಕಾಳಜಿಯೇ ಮೂಲೋದ್ದೇಶವಾದ, ಒಂದು ಅತ್ಯುತ್ತಮ [...]