(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) ಆ ಮುದುಕನ ಹೆಸರು ಜಾರ್ಜ್ ವೆಲ್ಲರ್ ಎಂದು. 2003 ನೆ ಇಸವಿಯಲ್ಲಿ ಆತನ ವಯಸ್ಸು 86 ವರ್ಷ. ಆ ಮುಪ್ಪಾತಿಮುಪ್ಪಿನಲ್ಲೂ ತನ್ನ ಕಾರನ್ನು ತಾನೆ ಓಡಿಸುತ್ತಿದ್ದ! ಕ್ಯಾಲಿಫೋರ್ನಿಯ ರಾಜ್ಯದ ಸಾಂಟಾ ಮೋನಿಕ ಅವನ ಊರು. 2003 ರ ಜುಲೈ ತಿಂಗಳ 16 ರಂದು ಆ ಊರಿನಲ್ಲಿ ವಾರಕ್ಕೊಂದು ದಿನ ನಡೆಯುವ ರೈತರ ಸಂತೆ ನಡೆಯುತ್ತಿತ್ತು. ಹೆಚ್ಚು ಕಮ್ಮಿ ನಮ್ಮ ಊರಿನ ಸಂತೆಗಳಂತೆಯೆ ಇರುತ್ತವೆ ಅವು. [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) ಇದೇ ನವೆಂಬರ್ 17 ರಂದು ಹೊಸ ಜೇಮ್ಸ್ ಬಾಂಡ್ ಚಲನಚಿತ್ರ ‘ಕೆಸೀನೊ ರಾಯೇಲ್’ ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರ ಜೇಮ್ಸ್ ಬಾಂಡ್ ಚಿತ್ರಪರಂಪರೆಯಲ್ಲಿ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು. 21 ನೆ ಜೇಮ್ಸ್ ಬಾಂಡ್ ಚಿತ್ರ; ಆದರೆ, ಇಯಾನ್ ಫ್ಲೆಮಿಂಗ್ ಬರೆದ ಜೇಮ್ಸ್ ಬಾಂಡ್ ಕಾದಂಬರಿ ಸರಣಿಯಲ್ಲಿಯ ಮೊಟ್ಟಮೊದಲ ಕಾದಂಬರಿಯ ಮೇಲೆ ಆಧಾರಿತವಾದ ಚಿತ್ರ. ಕಳೆದ ನಾಲ್ಕು ಬಾಂಡ್ ಚಿತ್ರಗಳಲ್ಲಿ ಬಾಂಡ್ ಆಗಿದ್ದ ಪಿಯರ್ಸ್ ಬ್ರಾಸ್ನನ್ [...]
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 24, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) ಕಳೆದ ಹದಿನೈದು ವರ್ಷಗಳಿಂದ ನಾನು ನನ್ನೂರಿನ ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಲೋಕಸಭಾ ಚುನಾವಣೆಗಳ ತನಕ ಅತೀವ ಆಸಕ್ತಿಯಿಂದ, ಭಯದಿಂದ, ಆಶಾವಾದದಿಂದ ನೋಡುತ್ತ ಬಂದಿದ್ದೇನೆ. ಈ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದ ರೌಡಿಗಳಂತಿದ್ದ ಕೆಲವು ಅಭ್ಯರ್ಥಿಗಳನ್ನು, ಅವರ ಪಕ್ಷಗಳನ್ನು, ಅದರ ಮುಖಂಡರುಗಳನ್ನು ನೋಡುತ್ತಿದ್ದಾಗ ಮೊದಮೊದಲು ‘ಇದೇನು ಶಿವನೆ, ಇವರ ಅಧಿಕಾರಾವಧಿಯಲ್ಲಿ ಜನ ಬದುಕಲು ಸಾಧ್ಯವೆ, ಸಹನೀಯ ಜೀವನ ಸಾಧ್ಯವೆ, ಭವಿಷ್ಯವುಂಟೆ’ ಎಂದೆಲ್ಲ ಭಯವಾಗುತ್ತಿತ್ತು. ಆಗೆಲ್ಲ ತಕ್ಷಣದ [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 17, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು) “ಲಂಚ ಕೊಡಬೇಡಿ. ದಯವಿಟ್ಟು RTI ಬಳಸಿ. RTI is more powerful than giving bribe. ಬೇರೆಯವರಿಗೂ ಅದರ ಬಗ್ಗೆ ಹೇಳಿ. ಈಗಿನ RTI ಕಮಿಷನರ್ ಈ ಕಾಯ್ದೆಯನ್ನು ತೆಳುಮಾಡಲು, ಅದರ ಹಲ್ಲು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಬ್ಯೂರೋಕ್ರಾಟ್ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್‌ರ ಬೆಂಬಲವೂ ಅಂತಹ ಪ್ರಯತ್ನಗಳಿಗೆ ಇದ್ದಂತಿದೆ. ನೀವು, ಇಲ್ಲಿರುವ NRI ಗಳು, ಭಾರತದ ಪ್ರಧಾನಿಗೆ, ಸೋನಿಯಾ ಗಾಂಧಿಗೆ, ರಾಷ್ಟ್ರಪತಿ ಕಲಮ್‌ರಿಗೆ [...]