…<–>ಹಾಯ್ -> ಲವ್ ಯು -> ಬೈ–><—…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 9, 2007 ರ ಸಂಚಿಕೆಯಲ್ಲಿನ ಲೇಖನ) ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಸ್ವ್ವಾತಂತ್ರ್ಯಗಳಿಂದಾಗಿ ಮುಂದುವರೆದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನ ಒಂಟಿಯಾಗಿ ಜೀವಿಸುವುದು, ಮದುವೆಯಾಗದೆಯೆ ಇನ್ನೊಬ್ಬರ ಜೊತೆ ಜೊತೆಯಾಗಿ ಬದುಕುವುದು, ಮದುವೆಯಾಗಿ ಕೆಲವೆ ಗಂಟೆ, ದಿನ, ವರ್ಷಗಳಲ್ಲಿ ವಿಚ್ಛೇದನ ನೀಡುವುದು, ಇವೆಲ್ಲವೂ ಸಾಮಾನ್ಯ. ಹೌದು, ಕೆಲವೊಮ್ಮೆ ಕೆಲವೇ ಗಂಟೆಗಳಲ್ಲೂ ವಿಚ್ಛೇದನ ನೀಡುತ್ತಾರೆ!! ಇದರಲ್ಲಿ ಬಹಳ ಪ್ರಸಿದ್ಧವಾದದ್ದು ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್‍ಸ್‌ಳ ವಿಚ್ಛೇದನ. ಎರಡು ವರ್ಷಗಳ ಹಿಂದೆ ಆಕೆ ತನ್ನ ಬಾಲ್ಯ ಸ್ನೇಹಿತನನ್ನು ಮದುವೆಯಾಗಿ, [...]

ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 2, 2007 ರ ಸಂಚಿಕೆಯಲ್ಲಿನ ಲೇಖನ) ಕಳೆದ ವಾರ ನಡೆದ ಎರಡು ಘಟನೆಗಳು ಭಾರತದ ಮಿಲಿಟರಿ ಅಸಾಮರ್ಥ್ಯಕ್ಕೆ ಹಿಡಿದ ಎರಡು ಜ್ವಲಂತ ನಿದರ್ಶನಗಳು. ಇಲ್ಲಿ ಮಿಲಿಟರಿ ಅಸಾಮರ್ಥ್ಯ ಎಂದರೆ ಅದನ್ನು ನಮ್ಮ ಸೈನಿಕರ ಅಸಾಮರ್ಥ್ಯ ಎಂದು ಭಾವಿಸಬಾರದು. ಯಾಕೆಂದರೆ, ಅಂತಿಮವಾಗಿ ಮಿಲಿಟರಿಗೆ ಏನು ಬೇಕು, ಏನು ಬೇಡ ಎನ್ನುವುದನ್ನು ತೀರ್ಮಾನಿಸುವವರು ರಾಜಕಾರಣಿಗಳು, ಅಧಿಕಾರಿಗಳು. ಹಾಗಾಗಿ ಇದು ಸಂಪೂರ್ಣವಾಗಿ ನಮ್ಮ ದೇಶದ ಆಡಳಿತಗಾರರ ದೂರದೃಷ್ಟಿಗೆ, ಕನಸಿಗೆ, ಕೆಚ್ಚಿಗೆ, ಇಚ್ಚಾಶಕ್ತಿಗೆ ಸಂಬಂಧಿಸಿದ್ದು. ಇಂದು ಬಹುಶಃ [...]

ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 26, 2007 ರ ಸಂಚಿಕೆಯಲ್ಲಿನ ಲೇಖನ) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರಾದ ದಲಿತಕವಿ ಸಿದ್ದಲಿಂಗಯ್ಯನವರು ತಮ್ಮ ಆತ್ಮಕತೆಯಾದ ಊರುಕೇರಿಯ ‘ಉಡುಪಿಗೆ ಹೋದದ್ದು’ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: “ಉಡುಪಿಯ ಒಂದು ಸಂಘದವರು ವಿಚಾರಸಂಕಿರಣ ಮಾಡಿದ್ದರು. ವಿಚಾರಸಂಕಿರಣದಲ್ಲಿ ನಾವು ವೇದಿಕೆಯ ಮೇಲೆ ಕುಳಿತಿದ್ದೆವು. ಪೇಜಾವರ ಶ್ರೀಗಳು ಆಶೀರ್ವಾದ ಮಾಡಬೇಕಾಗಿತ್ತು. ಅವರು ಬಂದ ಕೂಡಲೇ ಇಡೀ ಸಭೆ ಎದ್ದು ನಿಂತು ಗೌರವ ಸೂಚಿಸಿತು. ವೇದಿಕೆಯಲ್ಲಿದ್ದವರೂ ಎದ್ದು ನಿಂತರು. ಕುಳಿತಿದ್ದವನು ನಾನೊಬ್ಬನೇ. ಈಗ ನನಗೆ ಆ [...]

ಕಲಿಯುಗದಿಂದ ಕೃತಯುಗಕ್ಕೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 19, 2007 ರ ಸಂಚಿಕೆಯಲ್ಲಿನ ಲೇಖನ) ಅವರು ದೆಹಲಿಯ ಹೊರವಲಯದ ಹೈಟೆಕ್ ಸಿಟಿ ನೋಯ್ಡಾದ ಶ್ರೀಮಂತರ ಮನೆಗಳಲ್ಲಿ ಕಸಮುಸುರೆ ತೊಳೆಯುವ, ಬಟ್ಟೆ ಒಗೆಯುವ, ಟಾಯ್ಲೆಟ್, ಚರಂಡಿ ಸ್ವಚ್ಛ ಮಾಡುವ ಬಡವರು. ಅವರ ವಾಸ ನೋಯ್ಡಾದ ಪಕ್ಕದ ನಾಥಾರಿಯಲ್ಲಿ. ಅವರು ಆ ಕ್ಷೇತ್ರದ ಮತದಾರರೂ ಅಲ್ಲ. ಯಾಕೆಂದರೆ, ಅವರಲ್ಲಿ ಬಹುಪಾಲು ಜನ ಬೇರೆ ಕಡೆಗಳಿಂದ ಉದ್ಯೋಗಗಳನ್ನು ಹುಡುಕಿಕೊಂಡು ಬಂದ ಬಡಬಗ್ಗರು. ಅವರಿಗೆ ಮೇಲೆ ಹೇಳಿದ್ದಕ್ಕಿಂತ ಒಳ್ಳೆಯ ಕೆಲಸಗಳು ಸಿಕ್ಕರೆ ಅದು ಲಾಟರಿ ಹೊಡೆದಂತೆ! [...]