ಸಲಿಂಗ ಕಾಮ ಮತ್ತು ಇತಿಹಾಸ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 9, 2007 ರ ಸಂಚಿಕೆಯಲ್ಲಿನ ಲೇಖನ) ಬಹುಶಃ ಈ ಕಾಮ ಎನ್ನುವುದು ಎಷ್ಟು ಪುರಾತನವೊ ಅಷ್ಟೇ ಪುರಾತನವಾದದ್ದು ಇರಬೇಕು ಸಲಿಂಗ ಕಾಮವೂ. ಯಾವಾಗ ಜನ ಗುಂಪುಗಳಲ್ಲಿ ಜೀವಿಸಲು ಪ್ರಾರಂಭಿಸಿ, ಆಗಾಗ ಊರಿನ, ಬುಡಕಟ್ಟಿನ ಗಂಡುಗಳೆಲ್ಲ ಬೇಟೆಗೊ ಇನ್ನೊಂದಕ್ಕೊ ಹೊರಟು ಹೆಂಗಸರಿಂದ ಬಹಳ ದಿನ ಅಗಲಿ ಇದ್ದ ಸಮಯದಲ್ಲೆ ಇದೂ ಪ್ರಾರಂಭವಾಗಿರಬಹುದೇನೊ! ಯಾಕೆಂದರೆ, ಗ್ರೀಕರ ಕ್ರಿಸ್ತಪೂರ್ವ ಇತಿಹಾಸದಲ್ಲಿ ಗಂಡಸರ ನಡುವಿನ ಸಲಿಂಗಕಾಮ ಪ್ರಚಲಿತದಲ್ಲಿತ್ತು. ಅದಕ್ಕೆ ಮುಖ್ಯ ಕಾರಣ ಅವರಲ್ಲಿ ಬಹುಪಾಲು ಜನ ಸೈನಿಕರಾಗಿದ್ದದ್ದು [...]

ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 2, 2007 ರ ಸಂಚಿಕೆಯಲ್ಲಿನ ಲೇಖನ) ಫರ್ನಿಚರ್ ಅಂಗಡಿಯಲ್ಲಿ ಹೆಂಗಸೊಬ್ಬಳು ಮಗುವನ್ನು ಎಡವಿ ತನ್ನ ಹಿಮ್ಮಡಿ ಮುರಿದುಕೊಳ್ಳುತ್ತಾಳೆ. ಇದಕ್ಕೆ ಅಂಗಡಿಯವರ ಬೇಜವಾಬ್ದಾರಿಯೆ ಕಾರಣ ಎಂದು ಅಂಗಡಿಯವರ ಮೇಲೆ ಕೇಸು ಹಾಕುತ್ತಾಳೆ. ಅವಳ ವಾದವನ್ನು ಪುರಸ್ಕರಿಸಿದ ಜ್ಯೂರಿ, ಅವಳಿಗೆ 7.8 ಲಕ್ಷ ಡಾಲರ್ ಪರಿಹಾರ ನೀಡಬೇಕೆಂದು ಅಂಗಡಿ ಮಾಲೀಕರಿಗೆ ಆದೇಶ ನೀಡುತ್ತದೆ. ಇಷ್ಟಕ್ಕೂ ತಾನು ಎಡವಿದ ಮಗು ಬೇರೆ ಯಾರದ್ದೂ ಆಗಿರದೆ ಆ ಹೆಂಗಸಿನದೆ ಆಗಿರುತ್ತದೆ! ಲಾಸ್ ಏಂಜಲೀಸ್ ನಗರದಲ್ಲಿ ಒಬ್ಬ ಯುವಕ [...]

ನೌಕರರನ್ನು ಲಾಭಕ್ಕೆ ಮಾರಿಕೊಳ್ಳುತ್ತಿರುವ ಇನ್ಫೋಸಿಸ್, ವಿಪ್ರೊ!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 23, 2007 ರ ಸಂಚಿಕೆಯಲ್ಲಿನ ಲೇಖನ) ಇವತ್ತು ಇನ್ಫೋಸಿಸ್, ಟಿಸಿಎಸ್, ವಿಪ್ರೊ, ಸತ್ಯಂ ಅಂತಹ ಭಾರತೀಯ ಕಂಪನಿಗಳು ಬಿ.ಪಿ.ಒ. ದಂತಹ ಕಾಲ್ ಸೆಂಟರ್, ಕಸ್ಟಮರ್ ಸರ್ವಿಸ್ ಕ್ಷೇತ್ರ ಬಿಟ್ಟು ಸಾಫ಼್ಟ್‌ವೇರ್ ರಂಗದಲ್ಲಿ ನಿಜವಾಗಲೂ ಏನು ಮಾಡುತ್ತಿವೆ ಎನ್ನುವುದರ ಬಗ್ಗೆ ಐಟಿ ರಂಗದ ಬಗ್ಗೆ ಅಷ್ಟೇನೂ ಚೆನ್ನಾಗಿ ಗೊತ್ತಿಲ್ಲದ ಓದುಗರಿಗೆ ಸುಲಭವಾಗಿ ಕೊಡಬಹುದಾದ ಹೋಲಿಕೆ ಎಂದರೆ, ಮನೆ ಕಾಂಟ್ರ್ಯಾಕ್ಟರ್‌ಗಳ ಕೆಲಸ ಮಾಡುತ್ತಿವೆ ಎಂದು! ಕಳೆದ ಇಪ್ಪತ್ತು-ಮುವ್ವತ್ತು ವರ್ಷಗಳಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಕಟ್ಟಿಸುವ [...]

ಕಂಪ್ಯೂಟರ್‌ನಲ್ಲಿ ಕನ್ನಡ – ಯಾಹೂ!!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 16, 2007 ರ ಸಂಚಿಕೆಯಲ್ಲಿನ ಲೇಖನ) ಜನವರಿ ತಿಂಗಳ ಕೊನೆಯ ಭಾಗದಲ್ಲಿ ಕನ್ನಡ ಸಾಫ಼್ಟ್‌ವೇರ್ ಕ್ಷೇತ್ರದಲ್ಲಿ ಕೆಲವು ಗಮನಾರ್ಹ ಬೆಳವಣಿಗಗಳಾದವು. ಮೊದಲನೆಯದಾಗಿ, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ (DIT) “ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ” ಸಂಸ್ಥೆಯವರು ಹಲವಾರು ಉಚಿತ ಕನ್ನಡ ತಂತ್ರಾಂಶಗಳನ್ನು ಕನ್ನಡದ ಬಳಕೆದಾರರಿಗೆ ಬಿಡುಗಡೆ ಮಾಡಿದ್ದು. ಅನೇಕ ಕನ್ನಡ ಫಾಂಟ್‌ಗಳು, ಫೈರ್‌ಫ಼ಾಕ್ಸ್, ಥಂಡರ್‌ಬರ್ಡ್‌ನಂತಹ ಇಂಟರ್‌ನೆಟ್ ಬ್ರೌಸರ್, ಇಮೇಯ್ಲ್ ಕ್ಲೈಂಟ್ ತಂತ್ರಾಂಶಗಳಿಗೆ ಕನ್ನಡದ ಮೆನು ಅಳವಡಿಸಿ, ಹಲವಾರು ದೈನಂದಿನ ಕನ್ನಡ [...]