(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 6, 2007 ರ ಸಂಚಿಕೆಯಲ್ಲಿನ ಲೇಖನ) “ನೀವು ಏನು ಮಾಡಬೇಕು ಎಂದುಕೊಂಡಿದ್ದೀರೊ ಅದು ಅಸಾಧ್ಯ ಎಂದು ನಿಮಗನ್ನಿಸಿದರೂ, ಅದನ್ನು ಮಾಡಲು ಮುಂದಾಗಿ. ಯಾಕೆಂದರೆ, ನೀವು ಏನೇನು ಸಾಧಿಸಲು ಸಾಧ್ಯ ಎಂದು ಎಷ್ಟೋ ಸಲ ಗೊತ್ತೇ ಇರುವುದಿಲ್ಲ.” ಎರಡು ಮೂರು ವಾರದ ಹಿಂದೆ ಹೀಗೆ ಹೇಳಿದ್ದು ಯಾರೊ ವಯಸ್ಸಾದ ದೊಡ್ಡ ಮನುಷ್ಯರಾಗಲಿ, ಪರ್ಸನಾಲಿಟಿ ಡೆವಲಪ್‌ಮೆಂಟ್ ಗುರುವಾಗಲಿ, ಅಥವ ಆಧ್ಯಾತ್ಮದ ಹುಸಿ ವೇಷಗಳಲ್ಲಿರುವ ದೊಡ್ಡಬುದ್ಧಿಯವರಾಗಲಿ ಅಲ್ಲ! ಆಕೆಯ ಹೆಸರು ಮೇರಿ ಮಾಸ್ಟರ್‌ಮನ್. ಆಕೆಯ ವಯಸ್ಸು [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 23, 2007 ರ ಸಂಚಿಕೆಯಲ್ಲಿನ ಲೇಖನ) ಅದು ಎರಡನೆ ಮಹಾಯುದ್ಧದ ಸರಿಸುಮಾರು. ಯೂರೋಪ್‌ನಲ್ಲಿ ಹಿಟ್ಲರ್‌ನ ನಾಟ್ಜಿಗಳು ಹತ್ಯಾಕಾಂಡ ಮಾಡುತ್ತ, ಜನಾಂಗೀಯ ದ್ವೇಷ ಬಿತ್ತುತ್ತ ವಿಶ್ವವನ್ನೆ ಆಪೋಶನ ತೆಗೆದುಕೊಳ್ಳಲು ರಣರಂಗಕ್ಕೆ ಇಳಿದಿದ್ದ ಸಮಯ. ಅಮೇರಿಕದಲ್ಲಿಯೂ ಹಿಟ್ಲರ್‌ನ ಪ್ರಭಾವ ಅಷ್ಟೊ ಇಷ್ಟೊ ಇಣುಕಲು ಪ್ರಾರಂಭವಾಗಿತ್ತು. ಯಾಕೆಂದರೆ, ಅಮೇರಿಕದಲ್ಲಿನ ಯೂರೋಪಿಯನ್ ವಲಸೆಗಾರರಲ್ಲಿ ಅಷ್ಟೊತ್ತಿಗೆ ಜರ್ಮನ್ ಮೂಲದವರೆ ಅಧಿಕವಾಗಿದ್ದರು. ಹಾಗಾಗಿ, ಅಮೇರಿಕದಲ್ಲಿನ ನಾಟ್ಜಿ ಪ್ರಭಾವವನ್ನು ಕಂಡುಹಿಡಿಯಲು ಮತ್ತು ಹಣಿಯಲು 1938 ರಲ್ಲಿ ಅಮೇರಿಕ ಅಥವ ಅಮೇರಿಕ ಪ್ರತಿಪಾದಿಸುವ [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 16, 2007 ರ ಸಂಚಿಕೆಯಲ್ಲಿನ ಲೇಖನ) ಯಹೂದಿಗಳ ಪೌರಾಣಿಕ ಕತೆಯಲ್ಲಿ ಗಿಡಿಯೆನ್ ಎನ್ನುವವನು ದೇವರ ಆದೇಶದ ಮೇಲೆ ದುಷ್ಟಸಂಹಾರ ಮಾಡುವವನು. ತನ್ನ ಸೈನಿಕರಿಗೆ ಮಣ್ಣಿನ ಮಡಕೆ, ದೊಂದಿ, ಮತ್ತು ಒಂದು ಕಹಳೆಕೊಂಬು ಕೊಟ್ಟು, ರಾತ್ರೋರಾತ್ರಿ ಶತೃಸೈನಿಕರಲ್ಲಿ ಗೊಂದಲವೆಬ್ಬಿಸಿ ಗಿಡಿಯೆನ್ ದುಷ್ಟರನ್ನು ಸೋಲಿಸುತ್ತಾನೆ. ಯಹೂದಿಗಳ ಹೀಬ್ರೂ ಭಾಷೆಯಲ್ಲಿ ಗಿಡಿಯೆನ್ ಎಂದರೆ ನಾಶ ಮಾಡುವವನು ಇಲ್ಲವೆ ಭೀಮಬಲದ ಸೈನಿಕ ಎಂಬ ಅರ್ಥವಿದೆ. ಅಮೇರಿಕದಲ್ಲಿನ ಫ಼್ಲಾರಿಡಾ ರಾಜ್ಯದಲ್ಲಿ 1961 ಜೂನ್ 3 ರಂದು ಕ್ಲಾರೆನ್ಸ್ ಅರ್ಲ್ [...]