ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 11, 2007 ರ ಸಂಚಿಕೆಯಲ್ಲಿನ ಲೇಖನ) ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ ಇವು ಅಂತರಂಗ ಮತ್ತು ಬಹಿರಂಗ ಶುದ್ಧಿಗಾಗಿ ಬಸವಣ್ಣ ಇತ್ತ ಸಪ್ತ ಸೂತ್ರಗಳು. ಬೈಬಲ್ ಕತೆಗಳ ಪ್ರಕಾರ, ಇದೇ ತರಹದ “ಹತ್ತು ಕಟ್ಟಳೆಗಳು” (Ten Commandments) ಯಹೂದಿ ಮೂಲದ ಮೋಸಸ್‌ಗೆ ದೇವರೇ ಬರೆದು ಕೈಗಿತ್ತನೆಂದು ಪ್ರತೀತಿ. ಅವು ಯಾವುವೆಂದರೆ: ನಿಮ್ಮನ್ನು [...]

ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 4, 2007 ರ ಸಂಚಿಕೆಯಲ್ಲಿನ ಲೇಖನ) ಕಳೆದ ಗಾಂಧಿ ಜಯಂತಿಯಂದು ಮತಿಗೆಟ್ಟವನೊಬ್ಬ ಬಂದೂಕು ಹಿಡಿದು ನಾಗರಿಕ ಸಮಾಜದ ಎಲ್ಲಾ ರೀತಿಯ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಅಮೇರಿಕದಲ್ಲಿನ ಆಮಿಷ್ ಜನರ ಶಾಲೆಯೊಂದಕ್ಕೆ ನುಗ್ಗಿ 6 ರಿಂದ 13 ವರ್ಷ ವಯಸ್ಸಿನ 5 ಜನ ಹೆಣ್ಣು ಮಕ್ಕಳನ್ನು ಕೊಂದ ಬಗ್ಗೆ ಬರೆದ ಲೇಖನದಲ್ಲಿ ಹೀಗೆ ಬರೆದಿದ್ದೆ: “ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು [...]

ಮಂಗಳೂರಿನ ಸಜ್ಜನರೊಡನೆ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 27, 2007 ರ ಸಂಚಿಕೆಯಲ್ಲಿನ ಲೇಖನ) ಕನ್ನಡದ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಮೂಲದ ಆ ಯುವ ಲಾಯರ್ ಮೈಸೂರಿನಲ್ಲಿ “ಸೌತ್ ಕೆನೆರ ಎಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ನಾನೂ ಬಲಪಂಥೀಯ,” ಎಂದಿದ್ದ ಮಾತುಗಳೆ ಮೈಸೂರು ಬಿಟ್ಟು ಮಂಗಳೂರಿನತ್ತ ಹೋಗುತ್ತಿದ್ದಾಗ ನನಗೆ ನೆನಪಾಗುತ್ತಿದ್ದದ್ದು. ಮಂಗಳೂರಿನಲ್ಲಿ ಯುವ ಪತ್ರಕರ್ತ ಹರೀಶ್ ಆದೂರ್ ನಮಗಾಗಿ ಕೆಲವು ಮಿತ್ರರ ಗುಂಪನ್ನು ಸೇರಿಸಿ ಕಾಯುತ್ತಿದ್ದರು. ಮಂಗಳೂರಿನ ಪ್ರಸಿದ್ಧ ಸಾಹಿತ್ಯಿಕ ಗುಂಪಾದ “ದಾಸಜನ” ರ ಗುಂಪದು. [...]

ಜೀವಂತ ರೋಲ್ ಮಾಡೆಲ್ ಇನ್ನಿಲ್ಲ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 20, 2007 ರ ಸಂಚಿಕೆಯಲ್ಲಿನ ಲೇಖನ) ಪತ್ರಿಕೆಯ ಕೆಲಸಕ್ಕೆಂದು ಎರಡು ವಾರದ ಹಿಂದೆ ಅಮೇರಿಕಾದಿಂದ ಬೆಂಗಳೂರಿಗೆ ವಿಮಾನ ಹತ್ತಿದಾಗ ದಾರಿ ಓದಿಗೆಂದು ನನ್ನ ಕೈಯ್ಯಲ್ಲಿದ್ದ ಪುಸ್ತಕ ನಾನು ಈ ಹಿಂದೆಯೆ ಓದಿದ್ದ ‘ಕರ್ವಾಲೊ’. ಆ ಸುದೀರ್ಘ ವಿಮಾನ ಪ್ರಯಾಣದಲ್ಲಿ ನಿದ್ದೆಯಿಂದ ಎಚ್ಚೆತ್ತಾಗಲೆಲ್ಲ 23 ನೆ ಮುದ್ರಣದ ಕರ್ವಾಲೊ ಕೈಯಲ್ಲಿರುತ್ತಿತ್ತು. ಬೆಂಗಳೂರಿಗೆ ಬಂದು ಮೂರು ದಿನ ಮಂಡ್ಯ-ಮೈಸೂರು-ಮಂಗಳೂರು-ಶಿವಮೊಗ್ಗ ಇಲ್ಲೆಲ್ಲ ಸುತ್ತಾಡಿಕೊಂಡು ಬಂದ ಮೇಲೆ ಕಳೆದ ವಾರದ ಲೇಖನ ಬರೆಯಲು ಕುಳಿತಾಗ ಅದರಲ್ಲಿ ತೇಜಸ್ವಿಯವರೂ [...]

ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಏಪ್ರಿಲ್ 13, 2007 ರ ಸಂಚಿಕೆಯಲ್ಲಿನ ಲೇಖನ) ಈ ಸಲ ಶ್ರೀರಾಮನವಮಿ ಮಂಗಳವಾರವಿತ್ತು. ನಾನು ಅಮೇರಿಕದಿಂದ ಬಂದಿಳಿದಿದ್ದು ಅದರ ಹಿಂದಿನ ಭಾನುವಾರದ ರಾತ್ರಿ. ಸೋಮವಾರ ಬೆಳಗ್ಗೆ ಏಳಕ್ಕೆಲ್ಲ ಪತ್ರಿಕೆಯ ಕಚೇರಿಗೆ ಬಂದಾಗ ಗೊತ್ತಾಗಿದ್ದು, ನಮ್ಮ ಗೌರವ ಸಂಪಾದಕರಾದ ರೇಷ್ಮೆಯವರಿಗೆ ಅದರ ಹಿಂದಿನ ದಿನ ಮಾತೃವಿಯೋಗವಾಯಿತೆಂಬ ಸುದ್ದಿ. ಗದಗ್‌ನಲ್ಲಿದ್ದ ಅವರೊಡನೆ ಫೊನಿನಲ್ಲಿ ಮಾತನಾಡಿದೆ. ಅವರ ಸೂಚನೆ-ಆದೇಶದಂತೆ ನಮ್ಮ ಸಂಪಾದಕೀಯ ತಂಡ ಆ ವಾರದ ಸಂಚಿಕೆಯನ್ನು ರೂಪಿಸಿತು. ಮಾರನೆಯ ದಿನ ಬೆಳಗ್ಗೆ ಆರಕ್ಕೆಲ್ಲ ಪತ್ರಿಕೆಯ ಸಂಪಾದಕೀಯ [...]