ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 8, 2007 ರ ಸಂಚಿಕೆಯಲ್ಲಿನ ಲೇಖನ) ಮಹಾಭಾರತದ ಮೇಲಿನ ಆ ಕನ್ನಡ ಕಾದಂಬರಿಯಲ್ಲಿ “ಬೀಜ” ಗಣಿತಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಬೀಜ ಎನ್ನುವ ಪದ ಇಲ್ಲದ ಪ್ಯಾರಾಗಳಾಗಲಿ, ಪುಟಗಳಾಗಲಿ ಅದರಲ್ಲಿ ಅಪರೂಪ. ಅದರಲ್ಲಿ ಸೂರ್ಯ, ಯಮ, ವಾಯು, ಮತ್ತು ಇಂದ್ರರ ಜೊತೆ ಸಂತಾನಕ್ಕಾಗಿ ಕುಂತಿ ಸಂಭೋಗ ಮಾಡುವುದಷ್ಟೇ ಅಲ್ಲ, ಅದನ್ನು ಮನಃಪೂರ್ವಕವಾಗಿ ಆಸ್ವಾದಿಸುತ್ತಾಳೆ ಎಂದು ಲೇಖಕರು ಬರೆಯುತ್ತಾರೆ. ಆದರೆ ಇವತ್ತು ಅಂತಹವರೆ ಮಹಾಭಾರತದ ಬಗ್ಗೆ ಕೇವಲ ಬಹಿರಂಗ ಹೆಮ್ಮೆ ತೊರಿಸುವ ಕೋಮುವಾದಿಗಳ ಆರಾಧ್ಯ [...]

ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ.

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 1, 2007 ರ ಸಂಚಿಕೆಯಲ್ಲಿನ ಲೇಖನ) ಒಲವಿನಾ ಪ್ರಿಯಲತೆ, ಅವಳದೇ ಚಿಂತೆಽಽಅವಳ ಮಾತೆ, ಮಧುರ ಗೀತೆಅವಳೆ ಎನ್ನ ದೇವತೆ… ರೇಡಿಯೋದಲ್ಲಿ ಪಿ.ಬಿ. ಶ್ರೀನಿವಾಸ್‌ರ ಹಾಡು ಬರುತ್ತಿದ್ದರೆ, ಕನ್ನಡದ ಜನತೆ ರಾಜ್‌ಕುಮಾರ್ ಅವರನ್ನು ಕಲ್ಪಿಸಿಕೊಂಡು, ತಮ್ಮ ಇನಿಯಳ ಬಗ್ಗೆ ನವಿರಾದ ಪ್ರೀತಿಯ ಭಾವನೆಗಳನ್ನು, ಆಕೆ ಪಕ್ಕದಲ್ಲಿ ಇರದೆ ಇದ್ದರೆ ಅಗಲಿಕೆಯ ನೋವನ್ನು ಹಾಗೂ ತಮ್ಮ ಜೀವನದಲ್ಲಿ ಆಕೆಯ ಪ್ರಾಮುಖ್ಯತೆಯ ಸತ್ಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಿದ್ದ ಜಮಾನಾ ಒಂದಿತ್ತು. ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಹೈಸ್ಕೂಲಿನ [...]

ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 25, 2007 ರ ಸಂಚಿಕೆಯಲ್ಲಿನ ಲೇಖನ) ಕಳೆದ ವರ್ಷ ಪತ್ರಿಕೆಯನ್ನು ಆರಂಭಿಸುವುದಕ್ಕೆಂದು ಬೆಂಗಳೂರಿನಲ್ಲಿದ್ದಾಗ ನಮ್ಮ ಪತ್ರಿಕೆಯ ಪ್ರಕಾಶಕರಾದ ನನ್ನಣ್ಣ ಸುರೇಶ್ ಮತ್ತು ನಾನು ಕರ್ನಾಟಕದ ರಾಜಕೀಯ ಕುರಿತು ಮಾತನಾಡುತ್ತಿದ್ದೆವು. ವಿಷಯ ಎಲ್ಲೆಲ್ಲೊ ಹೋಗಿ ಮಹಿಮಾ ಪಟೇಲ್ ಹತ್ತಿರ ಬಂತು. ನನ್ನಣ್ಣ ಆಗ ಹೇಳಿದ್ದು, “ಹೇ, ಈ ಮಹಿಮಾ ಪಟೇಲ್ ವಿಚಾರ ಗೊತ್ತೇನೊ? ಆ ಮನುಷ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ನಾನು ಯಾರಿಗೂ ಹೆಂಡ ಹಂಚುವುದಿಲ್ಲ, ದುಡ್ಡೂ ಹಂಚುವುದಿಲ್ಲ. ಹಾಕೋ ಹಾಗಿದ್ರೆ ಹಾಕಿ, [...]

ದೇವರೆ, ಸ್ನೇಹಿತರಿಂದ ನನ್ನನ್ನು ಕಾಪಾಡು!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 18, 2007 ರ ಸಂಚಿಕೆಯಲ್ಲಿನ ಲೇಖನ) ಜನವರಿ 19 ರ ಸಂಚಿಕೆಯಲ್ಲಿ ನಮ್ಮ ಪತ್ರಿಕೆಯ ಅಂಕಣಗಾರರಾದ ಮಂಗಳೂರಿನ ನರೇಂದ್ರ ಪೈ ಹೀಗೆ ಬರೆದಿದ್ದರು: “ಕಾಲ, ದೇಶದ ಪ್ರಜ್ಞೆ ಇಲ್ಲ. ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತೆಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ.” ಕನ್ನಡದ ಪತ್ರಿಕೆಗಳನ್ನು ಮತ್ತು ಬೆಂಗಳೂರಿನಿಂದಲೆ ಪ್ರಕಟವಾಗುವ ಇಂಗ್ಲಿಷ್ ಪತ್ರಿಕೆಗಳನ್ನು ಎದುರಿಗಿಟ್ಟುಕೊಂಡು ಕೂತರೆ [...]