(ವಿಕ್ರಾಂತ ಕರ್ನಾಟಕ – ಆಗಸ್ಟ್ ೦೩, ೨೦೦೭ರ ಸಂಚಿಕೆಯಲ್ಲಿನ ಬರಹ) ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. [...]
(ವಿಕ್ರಾಂತ ಕರ್ನಾಟಕ – ಜುಲೈ ೨೭, ೨೦೦೭ರ ಸಂಚಿಕೆಯಲ್ಲಿನ ಬರಹ) ಇತ್ತೀಚಿನ ದಿನಗಳಲ್ಲಿ ಆಫ್ರಿಕಾ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಅಲ್ಲಿಯ ಏಡ್ಸ್ ರೋಗ ಮತ್ತು ಅಂತಃಕಲಹಗಳು; AK-47 ಹಿಡಿದು ಓಡಾಡುತ್ತಿರುವ ಕಪ್ಪು ಹುಡುಗರ ಚಿತ್ರ. ಅನ್ಯ ಬುಡಕಟ್ಟುಗಳಿಗೆ, ಅನ್ಯ ಮತಕ್ಕೆ ಸೇರಿದವರ ಸಂತತಿ ನಿರ್ನಾಮವೆ (Ethnic Cleansing) ಅಲ್ಲಿ ಬಂದೂಕು ಕೈಗೆತ್ತಿಕೊಂಡಿರುವವರ ಪರಮ ಗುರಿ. ಬೋಸ್ನಿಯಾ, ಚೆಚೆನ್ಯ, ಇಸ್ರೇಲ್-ಪ್ಯಾಲೆಸ್ಟೈನ್, ಇಲ್ಲೆಲ್ಲ ಆಗುತ್ತಿರುವುದೂ ಇದೆ. ಪ್ಯಾಲೆಸ್ಟೈನ್‍ನಲ್ಲಿ ಈ ನಡುವೆ ಮುಸ್ಲಿಮ್ ಗುಂಪುಗಳ ಮಧ್ಯೆಯೇ ಹೊಡೆದಾಟ ಆರಂಭವಾಗಿದೆ. [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 20, 2007 ರ ಸಂಚಿಕೆಯಲ್ಲಿನ ಲೇಖನ) ಇದೇ ಜುಲೈ ನಾಲ್ಕರಂದು ಅಮೇರಿಕ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿತು. ಅದರ ಮಾರನೆಯ ದಿನ ಅಮೇರಿಕದ ನ್ಯೂಸ್ ವೆಬ್‌ಸೈಟುಗಳಲ್ಲಿ ಸಾಕಷ್ಟು ಜನಪ್ರಿಯಯವಾದ, ವಿಶ್ವಾಸಾರ್ಹವಾದ CNN.com ಗೆ ಹೋದಾಗ ಆಶ್ಚರ್ಯವಾಯಿತು. ಅಂದಿನ ಅವರ ಮೇಜರ್ ನ್ಯೂಸ್‌ನ ಹೆಡ್ಡಿಂಗ್ ಏನಿತ್ತೆಂದರೆ, ಸಮಾಜದಿಂದ ತಿರಸ್ಕೃತಗೊಂದ ವಿಧವೆಯರು ಸಾಯಲು ಈ ನಗರಕ್ಕೆ ಬರುತ್ತಾರೆ. ಅದರ ಕೆಳಗೆ ಉತ್ತರ ಭಾರತದ ವಯಸ್ಸಾದ ಹಿಂದೂ ವಿಧವೆಯೊಬ್ಬಳ ಚಿತ್ರ. ಜುಲೈ ೫ ರ ಹಗಲಿನ [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 13, 2007 ರ ಸಂಚಿಕೆಯಲ್ಲಿನ ಲೇಖನ) ಬಿಕ್ಕಲು ಚಿಕ್ಕಣ್ಣ ಮತ್ತು ತಿಮ್ಮಕ್ಕ ಎಂಬ ದಂಪತಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾಗಡಿ ತಾಲ್ಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ನೆಟ್ಟು ಬೆಳೆಸಿದ ಸಾಲು ಮರಗಳ ಬಗ್ಗೆ ಸುಮಾರು ಹದಿನೈದು-ಇಪ್ಪತ್ತು ವರ್ಷದ ಹಿಂದೆ ಪತ್ರಿಕೆಗಳ ಮೂಲಕ ಹೊರಪ್ರಪಂಚಕ್ಕೆ ತಿಳಿಯಲಾರಂಭಿಸಿದ್ದು. ಸಾರ್ವಜನಿಕ ಜೀವನದಲ್ಲಿ ನಿಸ್ವಾರ್ಥ ಎನ್ನುವುದೇ ಹುಸಿ ಆಗುತ್ತಿರುವ ಸದ್ಯದ ಭಾರತದಲ್ಲಿ ತಿಮ್ಮಕ್ಕ ಕಾಲಕ್ರಮೇಣ ನಿಸ್ವಾರ್ಥ ಸೇವೆಯ ಚಿಹ್ನೆಯಾಗಿ, ಸ್ಫೂರ್ತಿಯಾಗಿ, ಹೆಮ್ಮೆಯಾಗಿ ಬದಲಾಗುತ್ತ ಹೋದರು. ತಿಮ್ಮಕ್ಕನನ್ನು ನೆನೆಸಿಕೊಂಡಾಗ, ಸಾಲುಮರಗಳು [...]