"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ…

(ವಿಕ್ರಾಂತ ಕರ್ನಾಟಕ – ಸೆಪ್ಟೆಂಬರ್ 7, 2007 ರ ಸಂಚಿಕೆಯಲ್ಲಿನ ಬರಹ) ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು “ವಲಸೆ ಹಕ್ಕಿಯ ಹಾಡು.” 1995 ರಲ್ಲಿ ಮುದ್ರಣಗೊಂಡದ್ದದು. “ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ”ನನ್ನು ಕಥಾನಾಯಕನಾಗಿ [...]

"ನನ್ನ" ಜನ ಮಾತ್ರ ನನ್ನ ಮಾನ ಪ್ರಾಣ ಧನ ???

(ವಿಕ್ರಾಂತ ಕರ್ನಾಟಕ – ಆಗಸ್ಟ್ 31, 2007 ರ ಸಂಚಿಕೆಯಲ್ಲಿನ ಬರಹ) ಚಿಂತಕ ಡಿ. ಆರ್. ನಾಗರಾಜ್ ಕನ್ನಡಪ್ರಭದ ತಮ್ಮ “ವಾಗ್ವಾದ” ಅಂಕಣದಲ್ಲಿ ಬಹುಶಃ ಒಂದೆರಡು ದಶಕದ ಹಿಂದೆ ಬರೆದದ್ದಿದು: “(ಕನ್ನಡ ಸಂಶೋಧನೆಯ) ಈಗಿನ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜತೆಗೆ ಅವರ ಮಾರ್ಗದರ್ಶಕರಿಗೂ ತರಬೇತು ನೀಡಬೇಕಾದ ಅಗತ್ಯ. … ಮಾರ್ಗದರ್ಶಕರ ಅರ್ಹತೆಗಳನ್ನು ನಿಷ್ಠುರವಾಗಿ ಮೌಲ್ಯಮಾಪನ ಮಾಡುವ ಸ್ಥಿತಿಯೇ ಇಲ್ಲ. … ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಇರುವ ಅನೇಕಾನೇಕ ಅಂಗೀಕೃತ ಪಿ‌ಎಚ್.ಡಿ., ಗೈಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ [...]

ಕೈಗೆಟುಕಲಿರುವ ಸಂಜೀವಿನಿಗಳು…

(ವಿಕ್ರಾಂತ ಕರ್ನಾಟಕ – ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ) ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್‌ಪೀಡಿತನಿಂದ ಅವನ ಮುಗ್ಧ ಹೆಂಡತಿಗೆ, ಏಡ್ಸ್‌ಪೀಡಿತೆಯಿಂದ ಅವಳ ಮುಗ್ಧ ಗಂಡನಿಗೆ, ದಾಂಪತ್ಯ ಜೀವನದಲ್ಲಿ ಸಹಜವಾದ ಅಸುರಕ್ಷಿತ (ಕಾಂಡೋಮ್ ಇಲ್ಲದ) ಲೈಂಗಿಕ ಸಂಪರ್ಕದಿಂದಲೂ ಅದು ಬಂದು ಬಿಡುತ್ತದೆ. ಇನ್ನು, ಗೊತ್ತಿದ್ದೊ ಗೊತ್ತಿಲ್ಲದೆಯೊ ಗರ್ಭಿಣಿಯಾಗುವ ಏಡ್ಸ್‌ಪೀಡಿತೆ, ತನ್ನ ನಿಷ್ಪಾಪಿ [...]

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್…

(ವಿಕ್ರಾಂತ ಕರ್ನಾಟಕ – ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ) ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ. ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ. ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ. ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ.ಸಂಕಷ್ಟದೊಂದಿಗೆ ಆರಂಭವಾಗಿ [...]

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಸುನಿಲ್ – ವಿಡಿಯೊ ಸಂದರ್ಶನ

- ಇದೇ ವಿಷಯದ ಕುರಿತಾದ ಲೇಖನ ಬರುವ ಶುಕ್ರವಾರದಂದು.

ಎಂಥವರಿಂದ ಆಳಲ್ಪಡುತ್ತಿದ್ದೇವೆ…

(ವಿಕ್ರಾಂತ ಕರ್ನಾಟಕ – ಆಗಸ್ಟ್ 1೦, ೨೦೦೭ರ ಸಂಚಿಕೆಯಲ್ಲಿನ ಬರಹ) ನೂರಾರು ಜನ ಶಾಸಕರು ಕುಳಿತು ಕೇಳುತ್ತಿದ್ದಾರೆ. ಹತ್ತಾರು ಜನ ವಿರೋಧ ಪಕ್ಷದ ಶಾಸಕರು ಎದ್ದು ನಿಂತು ಗಲಭೆ ಮಾಡುತ್ತಿದ್ದಾರೆ. ಚರ್ಚೆಗೆ ಉತ್ತರ ಕೊಡಲು ಎದ್ದು ನಿಂತ ಮುಖ್ಯಮಂತ್ರಿ, ಬಲಗೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದು, ಎಡಗೈಯನ್ನು ಬೀಡುಬೀಸಾಗಿ ಎಸೆಯುತ್ತ, ಎಡಗೈ ತೋರುಬೆರಳು ತೋರಿಸುತ್ತ, ತಮ್ಮ ಒಂದು ನಿಮಿಷದ ಅಮೋಘ ಸಂಭಾಷಣೆಯನ್ನು, ಎದುರು ಪಾರ್ಟಿಯವರ ಅಡೆತಡೆಗಳ ಮಧ್ಯೆ, ಹೀಗೆ ಒಪ್ಪಿಸುತ್ತಾರೆ: “ಈಗ ನಾನು ಮಾತ್ನಾಡ್ತಿರೋದು ಬರೀ ಪೀಠಿಕೆ [...]