ಏನನ್ನೂ ಕಲಿಸದ ಕನ್ನಡ ಚಿತ್ರಗಳು…

ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ [...]

ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?

(ವಿಕ್ರಾಂತ ಕರ್ನಾಟಕ – ಸೆಪ್ಟೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ) ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ. ಕನ್ನಡದ [...]

ಕದನ ಸೋಲುತ್ತಿರುವ ಜವರಾಯ, ಯುದ್ಧ ಗೆಲ್ಲಲಾಗದ ನರ …

(ವಿಕ್ರಾಂತ ಕರ್ನಾಟಕ – ಸೆಪ್ಟೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ) ಪ್ರತಿದಿನದ ಸಕ್ರಿಯ ಸಮಯದ ಬಹುಪಾಲನ್ನು ಕಂಪ್ಯೂಟರ್‌ನ ಮುಂದೆ ಕಳೆಯುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡದ ಅಶಿಸ್ತಿನಿಂದಾಗಿ ಬಂದಿರುವ ಕುತ್ತಿಗೆ ನೋವಿಗೆ ಕಾರಣ ಹುಡುಕಲು ಅಂದು ನಾನು ಸಿಲಿಕಾನ್ ಕಣಿವೆಯ ಆಸ್ಪತ್ರೆಯಲ್ಲಿ ಕುಳಿತಿದ್ದೆ. ತಾನಿರಬೇಕಾದ ತೂಕಕ್ಕಿಂತ ಜಾಸ್ತಿಯಿದ್ದ ಅರವತ್ತರ ಆಜುಬಾಜಿನ ಬಿಳಿಯ ಧಢೂತಿ ಹೆಂಗಸು ಎಕ್ಸ್-ರೆ ತೆಗೆಯುತ್ತಿದ್ದಳು. ಅದು ಐದ್ಹತ್ತು ನಿಮಿಷಗಳ ಕೆಲಸ. ಅದು ಇದು ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಸುತ್ತಮುತ್ತಲೆಲ್ಲ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು. ಎಕ್ಸ್-ರೆ [...]