(ವಿಕ್ರಾಂತ ಕರ್ನಾಟಕ – ಫೆಬ್ರವರಿ 08, 2008 ರ ಸಂಚಿಕೆಯಲ್ಲಿನ ಬರಹ) 2002 ನೆ ಇಸವಿ; ಭಾರತದ ನಂಬರ್ 1 ಮುಖ್ಯಮಂತ್ರಿ ಎಂದು ಬಿರುದಾಂಕಿತರಾಗಿದ್ದ ಎಸ್.ಎಂ. ಕೃಷ್ಣರ ಕಾಲ. ಈಗಿನಂತೆಯೆ ಆಗಲೂ ಬೆಂಗಳೂರಿನ ಸುತ್ತಮುತ್ತ ಐಟಿ ಇಂಡಸ್ಟ್ರಿ ತೀವ್ರವಾಗಿ ಬೆಳೆಯುತ್ತಿತ್ತು. ತನ್ನ ಓರಗೆಯವರಿಗಿಂತ ವೇಗವಾಗಿ ಬೆಳೆಯುತ್ತಿದ್ದ ತನ್ನ ಉದ್ದಿಮೆಗೆ ಬೆಂಗಳೂರಿನಲ್ಲಿ 100 ಎಕರೆ ಜಾಗ ಬೇಕಿದೆ ಎಂದು ಇನ್ಫೋಸಿಸ್ ಸರ್ಕಾರವನ್ನು ಕೇಳಿಕೊಂಡಿತು. ತಕ್ಷಣ ಕರ್ನಾಟಕ ಸರ್ಕಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವಿಧಾನಸೌಧದಿಂದ ಕೇವಲ ಹತ್ತು-ಹನ್ನೆರಡು [...]
(ವಿಕ್ರಾಂತ ಕರ್ನಾಟಕ – ಫೆಬ್ರವರಿ 1, 2008 ರ ಸಂಚಿಕೆಯಲ್ಲಿನ ಬರಹ) ಕೋಟ್ಯಾಂತರ ಜನ ಕನ್ನಡಿಗರಿಗೆ ಎನ್ನಲಾಗದಿದ್ದರೂ ಒಂದಷ್ಟು ಲಕ್ಷ ಕನ್ನಡಿಗರಿಗೆ ಪರಿಚಯ ಇರುವವರು ಅವರು. ಹತ್ತಾರು, ಬಹುಶಃ ನೂರಾರು ಕೋಟಿಗಳ ಆಸ್ತಿಯನ್ನೂ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿದ್ದಾರೆ. ಕೆಲವೊಂದು ಸಾಮಾಜಿಕ ಕಾಳಜಿಗಳೂ ಇದ್ದಂತಿವೆ. ಇದೇ ಕಾರಣಕ್ಕೆ ಅವರನ್ನು ನಾನು ಸುಮಾರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಅವರಿಗೂ ಕ್ರೀಡೆಗಳ ಬಗ್ಗೆ ಆಸಕ್ತ್ತಿಯಿತ್ತು. ಹಾಗಾಗಿಯೆ ಅಂದು ಭಾರತದ Pathetic State of Sports ಬಗ್ಗೆ ವಿಷಯ ಬಂತು. [...]
(ವಿಕ್ರಾಂತ ಕರ್ನಾಟಕ – ಜನವರಿ 25, 2008 ರ ಸಂಚಿಕೆಯಲ್ಲಿನ ಬರಹ) ಇಂತಹುದೊಂದು ಸಾಧನೆ ಕೇವಲ ಭಾರತಕ್ಕೇ ಅಲ್ಲ, ಪ್ರಪಂಚಕ್ಕೂ ಬೇಕಾಗಿತ್ತು. ಭಾರತದ ಬಹುಸಂಖ್ಯಾತ ಕೆಳಮಧ್ಯಮವರ್ಗದ ಬಡವರೂ ಕಾರು ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಯಲ್ಲಿ ಕಾರನ್ನು ಒದಗಿಸಬೇಕು ಎಂದುಕೊಂಡ ರತನ್ ಟಾಟಾರ ಕನಸಿನಲ್ಲಿ ವ್ಯಾಪಾರ-ವಹಿವಾಟಿನ ಯೋಚನೆಯೆ ಮೂಲಯೋಚನೆ ಎಂದುಕೊಂಡರೂ, ಟಾಟಾರವರ ನ್ಯಾನೊ ಕಾರಿಗೆ ಅದನ್ನು ಮೀರಿದ ಸಾಧ್ಯತೆಗಳಿವೆ. ಇದು ನಿಜಕ್ಕೂ ಯಶಸ್ವಿಯಾಗಿ ಮಾರಾಟವಾದರೆ, ಜಾಗತಿಕ ಪರಿಸರ, ಭಾರತದ ಆರ್ಥಿಕತೆ, ಭಾರತೀಯರ ಇನ್ನೊವೇಷನ್ ಸ್ಪಿರಿಟ್, ವಿಶ್ವದಾದ್ಯಂತದ ಆಟೊಮೊಬೈಲ್ ಇಂಡಸ್ಟ್ರಿಯ ಸ್ಥಿತಿ [...]