"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಇಲ್ಲಿಗೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು. ಕಲಿಯುಗದಿಂದ ಕೃತಯುಗಕ್ಕೆ ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!! ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!! …ಹಾಯ್ -> ಲವ್ ಯು -> ಬೈ–>

ಸ್ವತಂತ್ರ, ನಿರಂಕುಶಮತಿಗಳು…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 7, 2008 ರ ಸಂಚಿಕೆಯಲ್ಲಿನ ಲೇಖನ) ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಅಮಾನುಷ ಕೃತ್ಯಗಳಲ್ಲಿ ಹಾಲೊಕಾಸ್ಟ್ (ನರಮೇಧ) ಒಂದು. ದೇಶದೇಶಗಳ ನಡುವೆ ಯುದ್ಧಗಳಾಗಿವೆ. ಕ್ರೈಸ್ತ ಮತ್ತು ಮುಸಲ್ಮಾನ ಮತೀಯರ ನಡುವೆ ಜೆರೊಸಲೆಮ್ ಅನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ಎರಡು ಶತಮಾನಗಳ ಕಾಲ ನಿರಂತರ ಕ್ರುಸೇಡ್ ಕದನಗಳಾಗಿವೆ. ಲಕ್ಷಲಕ್ಷ ಜನ ನೆಪೊಲಿಯನ್ನನ ಕಾಲದಲ್ಲಿ ಯುದ್ಧದಿಂದ ಸತ್ತಿದ್ದಾರೆ. ಆದರೆ, ಒಂದು ಮತಕ್ಕೆ ಸೇರಿದ ಇಡೀ ಜನಾಂಗವನ್ನು ತೊಡೆದುಹಾಕಲು ಇಷ್ಟು ವ್ಯವಸ್ಥಿತವಾಗಿ, ಕ್ರೂರವಾಗಿ ಈ ಮಟ್ಟದಲ್ಲಿ ಯಾರೂ ತೊಡಗಿಕೊಂಡಿರಲಿಲ್ಲ. ಜರ್ಮನಿಯ [...]

2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು…

ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ. ಇದೇ ಅವಧಿಯಲ್ಲಿ ಬರೆದಿರುವ ಇತರೆ ಒಂದೆರಡು ಲೇಖನಗಳನ್ನು ಇನ್ನೂ [...]