ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 28, 2008 ರ ಸಂಚಿಕೆಯಲ್ಲಿ ಈ ಲೇಖನ “ಐಟಿಗೆ ಬಂತು ಆಪತ್ತು” ಹೆಸರಿನಲ್ಲಿ ಪ್ರಕಟವಾಗಿದೆ.) 90 ರ ದಶಕದ ಆರಂಭದ ಸಮಯ ಅದು. ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳ ಪ್ರಯೋಗ ಎರಡನೇ ಬಾರಿಗೂ ವಿಫಲವಾಗುತ್ತಿದ್ದ ಕಾಲಘಟ್ಟ. ಆ ಸಮಯದಲ್ಲಿ ಭಾರತ ಸರ್ಕಾರದ ಹಣಕಾಸು ಪರಿಸ್ಥಿತಿ ತೀರ ಹದಗೆಟ್ಟು ಚಂದ್ರಶೇಖರ್‌ರವರ ಸರ್ಕಾರ ಚಿನ್ನದ ರಿಸರ್ವ್ ಅನ್ನು ಅಡವಿಡಬೇಕಾಗಿ ಬಂತು. ಅದೇ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ಆ ಸರ್ಕಾರ ಬಿದ್ದು ಹೋಯಿತು. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ [...]

ವಿಜ್ಞಾನ ವಿಶೇಷದ ನಾಗೇಶ್ ಹೆಗಡೆಯವರು…

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 21, 2008 ರ ಸಂಚಿಕೆಯಲ್ಲಿನ ಲೇಖನ) ಕನ್ನಡದ ಇತ್ತೀಚಿನ ಒಂದೆರಡು ದಿನಪತ್ರಿಕೆಗಳ ವಯಸ್ಸೆ ಹತ್ತಿಪ್ಪತ್ತು ವರ್ಷ ಆಗದೆ ಇರುವಾಗ, ೨೬ ವರ್ಷಗಳಿಂದ ಸತತವಾಗಿ ಪ್ರಜಾವಾಣಿಯಲ್ಲಿ ಬರುತ್ತಿರುವ ಅಂಕಣ ವಿಜ್ಞಾನ ವಿಶೇಷ. ಹೌದು, ಈ ಅಂಕಣ ಕಾಲು ಶತಮಾನವನ್ನು ದಾಟಿಯಾಗಿದೆ. ವಿದ್ಯಾರ್ಥಿಗಳಲ್ಲಿ ಮತ್ತು ಓದುಗರಲ್ಲಿ ಕೇವಲ ವಿಜ್ಞಾನದ ವಿಷಯಕ್ಕೆ ಕುತೂಹಲ ಹುಟ್ಟಿಸುವುದಷ್ಟೆ ಅಲ್ಲದೆ, ವಿಜ್ಞಾನದ ಇತ್ತೀಚಿನ ಸಾಧನೆಗಳು, ಅದರಿಂದ ಬದಲಾಗಿರುವ ಸಮಾಜ, ಆಗಲಿರುವ ಆರ್ಥಿಕ-ಸಾಮಾಜಿಕ-ವೈಜ್ಞಾನಿಕ ಸ್ಥಿತ್ಯಂತರಗಳು, ಮುಂತಾದವನ್ನೆಲ್ಲ ವೈಚಾರಿಕ ಮತ್ತು ವೈಜ್ಞಾನಿಕ ಬದ್ಧತೆಯಿಂದ [...]

ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 14, 2008 ರ ಸಂಚಿಕೆಯಲ್ಲಿನ ಲೇಖನ) ನೀವು ಈ ಲೇಖನವನ್ನು ಓದುತ್ತಿರುವ ಹೊತ್ತಿಗೆ ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳು ಯಾರು ಎನ್ನುವುದು ಹೆಚ್ಚೂಕಮ್ಮಿ ತೀರ್ಮಾನವಾಗಿ ಹೋಗಿರುತ್ತದೆ. ಈಗಾಗಲೆ ಇಬ್ಬರು ತೀರ್ಮಾನವಾಗಿದ್ದಾರೆ. ಒಬ್ಬಾತ ರಿಪಬ್ಲಿಕನ್ ಪಕ್ಷದ ಜಾನ್ ಮೆಕೈನ್. ಇನ್ನೊಬ್ಬಾತ ಗ್ರೀನ್ ಪಾರ್ಟಿಯ ಅಭ್ಯರ್ಥಿ ರಾಲ್ಫ್ ನೇಡರ್. ಸದ್ಯದ ಸ್ಥಿತಿಯಲ್ಲಿ ಡೆಮಾಕ್ರಾಟ್ ಪಕ್ಷದ ಹಿಲ್ಲರಿ ಕ್ಲಿಂಟನ್ ಅಥವ ಬರಾಕ್ ಒಬಾಮ, ರಾಲ್ಫ್ ನೇಡರ್‌ನನ್ನು ಕಣದಿಂದ ಹಿಂದೆ ಸರಿದು ತಮ್ಮನ್ನು ಬೆಂಬಲಿಸುವಂತೆ ಕೋರುವ [...]

ಹಾಜರಾಗುವ ಹಜಾರಗಳಲ್ಲಿ ಹಾಕಲಿರುವ ಹಾಜರಿ ….

ಇಲ್ಲಿಯವರೆಗೂ ಯಾವುದೆ ಬ್ಲಾಗುಗಳಲ್ಲಿ ಮತ್ತು ವೆಬ್‌ಸೈಟುಗಳಲ್ಲಿ ಕಾಮೆಂಟು ಬಿಡುತ್ತಿರಲಿಲ್ಲ. ಮುಖ್ಯ ಕಾರಣ, ಯಾವುದಕ್ಕಾದರೂ ತೊಡಗಿಕೊಂಡರೆ passionate ಆಗಿ ತೊಡಗಿಕೊಳ್ಳುವ ನನ್ನ ಗುಣದಿಂದಾಗಿ, ಇಂತಹ ಕಾಮೆಂಟುಗಳು ಮತ್ತು ಚರ್ಚೆಗಳು ನನ್ನ energy ಯನ್ನು ಹೀರಿಬಿಡುತ್ತವೆ ಎನ್ನುವುದು. ಅಷ್ಟೆ ಪ್ರಬಲವಾದ ಇನ್ನೊಂದು ಕಾರಣ, ವಿಷಯವನ್ನು ಎಲ್ಲೆಲ್ಲಿಂದ ಎಲ್ಲೆಲ್ಲಿಗೊ ಕೊಂಡಿಹಾಕಿ, ಅನಾಮಿಕವಾಗಿ ಇಲ್ಲವೆ ಗುಪ್ತನಾಮಗಳಲ್ಲಿ ಕೊಳಕಾಗಿ ಬರೆಯುವವರ ಬಗೆಗಿರುವ ಜಿಗುಪ್ಸೆ. ಅಪ್ರಬುದ್ಧರನ್ನು, ಬೇಜವಬ್ದಾರರನ್ನು, ಅಸಂಬದ್ಧವಾಗಿ ಮಾತನಾಡುವವರನ್ನು, ಕೆಟ್ಟದಾಗಿ ಟೀಕೆ ಮಾಡುವವರನ್ನೂ ಸಹಿಸಿಕೊಳ್ಳಬಲ್ಲೆ. ಆದರೆ, ಈ ಹೇಡಿ, ಕೊಳಕುಕೊಳಕಾಗಿ ಒಂದೆರಡು ಪದಗಳ, ವಾಕ್ಯಗಳ [...]