CNN-IBN ನಲ್ಲಿ – NRI techie joins poll battle to fight for values

ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ. ವಿಡಿಯೊ:

ಧನಸಹಾಯ ಮಾಡುತ್ತಿರುವ "ಮೌಲ್ಯಾಗ್ರಹಿಗಳು"….

http://amerikadimdaravi.blogspot.com/2008/04/blog-post_11.html ಕರ್ನಾಟಕದ ರಾಜಕಾರಣದಲ್ಲಿ ಸಂಪೂರ್ಣ ಮೌಲ್ಯಗಳನ್ನು ಆಗ್ರಹಿಸಿ ನಡೆಸಲಿರುವ ಸಂವಾದ, ಉಪವಾಸ ಸತ್ಯಾಗ್ರಹ, ಮತ್ತು ನ್ಯಾಯಬದ್ಧ ಸ್ಪರ್ಧೆಯನ್ನು ಬೆಂಬಲಿಸಿ ಈಗಾಗಲೆ ಸ್ನೇಹಿತರು ಬೆಂಬಲ ಸೂಚಿಸಿ ಧನಸಹಾಯ ಮಾಡಲು ಆರಂಭಿಸಿದ್ದಾರೆ. ನೆನ್ನೆ ತಾನೆ ವಿಷಯವನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಆರಂಭಿಸಿದ್ದು. ಅಷ್ಟರಲ್ಲಿಯೆ ಸ್ವಯಂಸ್ಫೂರ್ತಿಯಿಂದ ಬೆಂಬಲ ಸೂಚಿಸುತ್ತಿರುವ ಕೆಲವರನ್ನು ಕಂಡಾಗ ಭವಿಷ್ಯದ ಬಗ್ಗೆ ಆಶಾವಾದ ಹೆಚ್ಚುತ್ತಿದೆ. ಅದಕ್ಕಿಂತ ಹೆಚ್ಚಾಗಿ ನಾವೆಲ್ಲ ಒಪ್ಪಿಕೊಂಡಿರುವ ಮತ್ತು ಹೋರಾಡುತ್ತಿರುವ ಆದರ್ಶಗಳು ಮತ್ತು ನೈತಿಕತೆ ಸರಿಯಾದುದು, ಪ್ರಾಮಾಣಿಕವಾದುದು, ಮತ್ತು ಪಾಲಿಸಲೇಬೇಕಾದುದು ಎನ್ನುವುದನ್ನು ಇದು ಪ್ರಮಾಣೀಕರಿಸುತ್ತದೆ. ಇದು [...]

ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು

ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ, ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. [www.ravikrishnareddy.com] ಬೆಂಬಲ? ಯಾಕೆ? “ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ…” ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ [...]

ಮೌಲ್ಯಾಗ್ರಹ… ಸಾಫ್ಟ್‌ವೇರ್ ಇಂಜಿನಿಯರೊಬ್ಬನ ಉಪವಾಸ ಸತ್ಯಾಗ್ರಹ…

ಸ್ನೇಹಿತರೆ, ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ [...]

ಮೌಲ್ಯಾಗ್ರಹ…