ರೋಮ್ ಕಲಿಸುವ ಪಾಠಗಳು – (ಸೋನಿಯಾ ಗಾಂಧಿಯ ತವರಲ್ಲಿ; ಜೂಲಿಯಸ್ ಸೀಸರನ ಸ್ಮರಣೆಯಲ್ಲಿ…)
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 8, 2008 ರ ಸಂಚಿಕೆಯಲ್ಲಿ ಈ ಲೇಖನ “ಸೋನಿಯಾ ಗಾಂಧಿಯ ತವರಲ್ಲಿ; ಜೂಲಿಯಸ್ ಸೀಸರನ ಸ್ಮರಣೆಯಲ್ಲಿ…” ಹೆಸರಿನಲ್ಲಿ ಪ್ರಕಟವಾಗಿದೆ.) ಅದೊಂದು ಅರೆ ಪ್ರಜಾತಂತ್ರ ರಾಜ್ಯ. ಆ ದೇಶದ ರಾಜಕೀಯ ಮತ್ತು ಸೈನ್ಯದ ಮುಖ್ಯಸ್ಥನಾದ ಆತನಿಗೆ ಸಾಮ್ರಾಟನಾಗಬೇಕೆಂಬ ಆಸೆ ಇತ್ತು. ಆದರೆ ಯಾರನ್ನೇ ಆಗಲಿ ದೊರೆ ಎಂದು ಒಪ್ಪಿಕೊಳ್ಳುವುದಕ್ಕೆ ಆ ದೇಶದ ಜನರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆತ “ಆಮರಣ ಸರ್ವಾಧಿಕಾರಿ” ಪಟ್ಟಕ್ಕೆ ಸೀಮಿತವಾದ. ಆದರೂ ಆತನ ಆಸೆ ಇನ್ನೂ ಜೀವಂತವಾಗಿತ್ತು. ಅದನ್ನು ಗಮನಿಸುತ್ತಿದ್ದ [...]