(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.) ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು [...]
(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು “ಅಕ್ಕ” ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿದೆ. “ಅಕ್ಕ 2008″ರ ಸಮಯದಲ್ಲಿ “ಅಕ್ಕ-2006″ರ ಸಮಯದಲ್ಲಿ ಬರೆದ ಲೇಖನಗಳು.) ಸದ್ಯದ ಸಂಕೀರ್ಣ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾಡಿನ ಚುಕ್ಕಾಣಿ ಹಿಡಿದಿರುವ ನಮ್ಮ ಉಪ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ವಾರಿಗೆಯ ರಾಜಕಾರಿಣಿಗಳು ಹೇಗೆ ಅಸಮರ್ಥರು ಎಂದು ಯಡಿಯೂರಪ್ಪನವರು ಅಮೆರಿಕದ [...]
- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು. ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ರಂತಹ ತೆಲುಗು ಸೂಪರ್‌ಸ್ಟಾರ್‌ಗಳ ಬಹುಪಾಲು ಚಿತ್ರಗಳಲ್ಲಿ ಹೆಂಗಸು ಸ್ವಂತ ವ್ಯಕ್ತಿತ್ವವೇ ಇಲ್ಲದ ಗ್ಲಾಮರ್ ಬೊಂಬೆ ಅಷ್ಟೆ. ಆಧುನಿಕ ಕಾಲದ ಜೀವನ ನೀತಿಗಳಾಗಲಿ, ಪ್ರಜಾಪ್ರಭುತ್ವದಲ್ಲಿನ ಕಾನೂನು ಪರಿಜ್ಞಾನವಾಗಲಿ, ವಾಸ್ತವಿಕತೆಯಾಗಲಿ, ಈ ಸೂಪರ್‌ಸ್ಟಾರ್‌ಗಳ ಚಿತ್ರಗಳಲ್ಲಿ ಅಪರೂಪವೆಂದರೆ ಅಪರೂಪ. ಅದರಲ್ಲೂ [...]
- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು. ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರುಕರ್ನಾಟಕಲ್ಲಿ ಕಾಣದ ಒಂದು ಸಂಸ್ಕೃತಿ ಆಂಧ್ರದಲ್ಲಿದೆ. ಅದೇನೆಂದರೆ, ಕುಟುಂಬಸಮೇತರಾಗಿ ಸಿನೆಮಾಗಳಿಗೆ ಹೋಗುವುದು. ಸಿನೆಮಾ ಹುಚ್ಚಿನ ಅಪ್ಪಅಮ್ಮಂದಿರು ಮಕ್ಕಳನ್ನೂ ಕರೆದುಕೊಂಡು ಸಿನೆಮಾ ಎಂಜಾಯ್ ಮಾಡಲು ಹೋಗುತ್ತಾರೆ. ವಾರಕ್ಕೆರಡು ಸಿನೆಮಾ ಬಿಡುಗಡೆ ಆಗುವ ತೆಲುಗು ಸಿನೆಮಾ ರಂಗದಲ್ಲಿ ಹೀಗಾಗಿಯೆ ಅನೇಕ ಸೂಪರ್‌ಸ್ಟಾರ್‌ಗಳು. ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಪ್ರಕಾಶ್ ರಾಜ್ ಎಂಬ ನಟ ತಮ್ಮ [...]
(ಜನವರಿ 2008 ರಲ್ಲಿ ಬರೆದ ಲೇಖನ ಇದು. “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ “ಪ್ರಜಾ ರಾಜ್ಯಂ” ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.) -ಮೊದಲ ಭಾಗ — ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?” ಆಂಧ್ರದಿಂದ ಹಾರಿಹೋದ ಶಾಕುಂತಲೆಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, “ಪ್ರಿಯತಮಾ, ಕರುಣೆಯಾ ತೋರೆಯಾ?” ಎಂದು ಕೇಳಿದ ಸುಂದರಿ [...]
(ಜನವರಿ 2008 ರಲ್ಲಿ ಬರೆದ ಲೇಖನ ಇದು. “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ “ಪ್ರಜಾ ರಾಜ್ಯಂ” ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.) 1980 ರಲ್ಲಿ ಇತ್ತ ಕರ್ನಾಟಕದಲ್ಲಿ ಗುಂಡೂರಾವ್ ಎಂಬ ಅರೆ ಜೋಕರ್, ಅರೆ ಗೂಂಡಾ ಮುಖ್ಯಮಂತ್ರಿಯಾದರೆ, ಅತ್ತ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದಾತನ ಹೆಸರು ಅಂಜಯ್ಯ. ಪೂರ್ಣ ಜೋಕರ್. ಯಾವೊಬ್ಬ ಆಂಧ್ರದ ಮುಖ್ಯಮಂತ್ರಿಯೂ ಮುಂದೆ ಸಾಧಿಸಲಾಗದ್ದನ್ನು ಆತ ಮಾಡಿದ. ಏನೆಂದರೆ, [...]