ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ “GPS” ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ! ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 3, 2008 ರ ಸಂಚಿಕೆಯಲ್ಲಿನ ಲೇಖನ.) ಕಳೆದ ಮೂರು ದಶಕಗಳ ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ನೋಡಿ. 1980 ರ ದಶಕದಲ್ಲಿ ರೊನಾಲ್ಡ್ ರೇಗನ್, ಮಾರ್ಗರೇಟ್ ಥ್ಯಾಚರ್ ಮತ್ತು ಮಿಖಾಯಿಲ್ ಗೋರ್ಬಚೆವ್‌ರ ನಾಯಕತ್ವ ಪ್ರಜಾಪ್ರಭುತ್ವವಾದಿ ಮತ್ತು ಕಮ್ಯುನಿಸ್ಟ್ ದೇಶಗಳ ನಡುವಿನ ಶೀತಲ ಸಮರಕ್ಕೆ ಕೊನೆ ಹಾಡಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮೂರು ದಶಕಗಳ ಕಾಲ ಇಡೀ ವಿಶ್ವವೆ ಮುಕ್ತ ಆರ್ಥಿಕತೆಗೆ, ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮವಾಗಿ ಕಳೆದ ಶತಮಾನದ ಹಲವಾರು ಪ್ರಮುಖ ರಾಷ್ಟ್ರಗಳು [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.) ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ್ತಿದ್ದಾರೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ಮತ್ತು ಇಲ್ಲಿಯ ವೈವಿಧ್ಯತೆಯನ್ನು ಸಹಿಸದ ಕೆಲವು ವಿಕೃತ ಮನಸ್ಸಿನ ಜನ ಕೈಗೊಂಡ ದಾಳಿ ಇದು. ವಿಪರ್ಯಾಸ ಏನೆಂದರೆ, ಮತಾಂಧತೆ ಮತ್ತು ಜನಾಂಗದ್ವೇಷದಿಂದ ನರಳುವ ಈ ಗುಂಪಿನ ಪ್ರತಿ ಕಾರ್ಯವೂ ಅವರಂತಹುದೆ ಆಲೋಚನೆಗಳ ಇನ್ನೊಂದು ಗುಂಪಿಗೆ ಬಲವನ್ನು ನೀಡುತ್ತ್ತಿದೆ. ಆ ಮಟ್ಟಿಗೆ [...]