ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ವಾರಕ್ಕೆರಡು ದಿನ ಧಾರಾವಾಹಿಯಾಗಿ

ಪ್ರಾಮಾಣಿಕರಾದವರಿಗೂ, ಕ್ರಿಯಾಶೀಲರಾದವರಿಗೂ, ಸ್ವಾರ್ಥವಿಲ್ಲದ ಪರೋಪಕಾರಿ ಗುಣ ಇರುವವರಿಗೂ ಎಲ್ಲಾ ಸಮಯದಲ್ಲೂ ಆಶಾವಾದವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಎಷ್ಟೋ ಬಾರಿ ಈ ಒಳ್ಳೆಯವರು ಸಿನಿಕತನಕ್ಕೆ ಒಳಗಾಗಿ ಎಲ್ಲವನ್ನೂ Negative ಆಗಿ ನೋಡಲು ಆರಂಭಿಸಿಬಿಡುತ್ತಾರೆ. ಅವರಿಗೆ ಹೀಗಾಗುವುದು ಅವರ ಯೋಜನೆಗಳ ವೈಫಲ್ಯದಿಂದ ಅನ್ನುವುದಕ್ಕಿಂತ ಅವರ ಯೋಜನೆ ಅಥವ ಯೋಚನೆ ಅಥವ ಕೆಲಸಗಳನ್ನು ಇತರರು ನೋಡುವ ಮತ್ತು ಮಾತನಾಡುವ ರೀತಿಯಿಂದಾಗಿ. ಬಹಳ ಸೂಕ್ಷ್ಮ ಮನಸ್ಸಿನವರಂತೂ ಒಂದೆರಡು ಸಲಕ್ಕೆಯೇ ತಮ್ಮ ಚಿಪ್ಪು ಸೇರಿಕೊಂಡುಬಿಡುತ್ತಾರೆ. ಆಶಾವಾದವನ್ನೂ, Positive Thinking ಅನ್ನೂ, ರಚನಾತ್ಮಕವಾದ ಆಲೋಚನೆಯನ್ನೂ [...]

ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ

ಡಾ. ಪ್ರಭುಶಂಕರರ “ಹೀಗಿದ್ದರು ಕುವೆಂಪು” ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ? 1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನಾನು, ಕೆಲವೇ ವಾರಗಳಲ್ಲಿ ನನ್ನ ಪತ್ನಿಯಾಗಲಿದ್ದ ಡಾ. ಶಾಂತಾ ಅವರೊಡನೆ ಕುವೆಂಪು ಅವರ ಮನೆಗೆ ಹೋದೆ. ಶಾಂತಿಯು ಕುವೆಂಪು ಅವರ ಮಿತ್ರರಾಗಿದ್ದ ಶ್ರೀ. ಡಿ.ಆರ್. ಚನ್ನೇಗೌಡರ ಮಗಳು. ಮಗುವಾಗಿದ್ದಾಗಿನಿಂದ ಕುವೆಂಪು ದಂಪತಿ ಆಕೆಯನ್ನು ಬಲ್ಲರು. ನಾನು ಶಾಂತಿ ಕುವೆಂಪು ಅವರ ಕಾಲಿಗೆ ನಮಸ್ಕರಿಸಿ [...]

ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ಡಾ. ಪ್ರಭುಶಂಕರ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖಕರು. ಇವರ ಹಾಸ್ಯಪ್ರೀತಿ ಎಷ್ಟಿದೆಯೆಂದರೆ, “ಪ್ರಭು ಜೋಕ್ಸ್” ಎಂಬ ಸಣ್ಣ ಜೋಕು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಹಿಂದಿನ ತಲೆಮಾರಿನ ಲೇಖಕರಲ್ಲಿ ನಾ. ಕಸ್ತೂರಿ ಅಪಾರ ಹಾಸ್ಯಪ್ರಜ್ಞೆಯ, ಅನಾರ್ಥಕೋಶದ ಲೇಖಕರು. ಅವರ ಬಗ್ಗೆ ಪ್ರಭುಶಂಕರರು “ನಾ. ಕಸ್ತೂರಿಯವರು” ಲೇಖನದಲ್ಲಿ ಹೀಗೆ ಹೇಳುತ್ತಾರೆ: “(ನಾ. ಕಸ್ತೂರಿ) ಅವರ ಸಹಸ್ರಾರು ಶಿಷ್ಯರಲ್ಲಿ ನಾನು ಒಬ್ಬ; ಅವರ ಇತಿಹಾಸ ಬೋಧನೆಯ ಸವಿಯನ್ನು ಎರಡು ವರ್ಷಗಳ ಕಾಲ ಉಂಡವನು; ಅವರಿಂದ ಹಾಸ್ಯದ ದೀಕ್ಷೆ ಪಡೆದವನು; ನಕ್ಕು ನಲಿಸುವುದು ಸಾರ್ಥಕ [...]