ವಿಚಾರ ಮಂಟಪ: ಬರೆದ ನಾಲ್ವರಿಗೂ ಬಹುಮಾನಗಳು!

ವರ್ಷದ ಮೊದಲ ದಿನ ಬಂದ ಆಲೋಚನೆಯನ್ನು ಅಂದೇ ವಿಚಾರ ಮಂಟಪದಲ್ಲಿ ಮತ್ತು ನನ್ನ ಬ್ಲಾಗುಗಳಲ್ಲಿ ಪ್ರಕಟಿಸಿ, ಎರಡು ವಿಷಯಗಳಿಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿದ್ದೆ. ಇದಕ್ಕೆ ಸಾಕಷ್ಟು ಪ್ರಚಾರ ಸಿಗಲಿ ಎಂದು ಒಂದೆರಡು ಗ್ರೂಪ್‌ಗಳಿಗೆ, ಸಮುದಾಯ ಬ್ಲಾಗ್‌ಗಳಿಗೆ ಮತ್ತು ಪೋರ್ಟಲ್‌ಗಳಿಗೆ ಕಳುಹಿಸಿದ್ದೆ. ದಟ್ಸ್‌ಕನ್ನಡ.ಕಾಮ್ ಮತ್ತು ಅವಧಿಯವರು ಆಹ್ವಾನವನ್ನು ಪೂರ್ಣವಾಗಿ ಪ್ರಕಟಿಸಿದ್ದರು ಮತ್ತು ಹಲವಾರು ದಿನಗಳ ಕಾಲ ತಮ್ಮ ಮುಖಪುಟದಲ್ಲಿ ಬಿಟ್ಟಿದ್ದರು. ಕೆಂಡಸಂಪಿಗೆಯವರು ದಿನದ ತಾಣದಲ್ಲಿ ಆ ಕುರಿತು ಬರೆದಿದ್ದರು. ಇವರೆಲ್ಲರಿಗೂ ನಾನು ಕೃತಜ್ಞ. ಇದರ ಜೊತೆಗೇ, ಈ ಪ್ರಕಟಣೆಯನ್ನು [...]

ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರೋಲೆ

ಕರ್ನಾಟಕದ ನಕ್ಸಲ್ ನಾಯಕರಿಂದ ಜನವರಿ 4, 2009 ರಂದು ಕರ್ನಾಟಕದ ಹಲವು ಮಾಧ್ಯಮ ಕೇಂದ್ರಗಳಿಗೆ ಮತ್ತು ಕನ್ನಡದ ಹಲವಾರು ಲೇಖಕರಿಗೆ ಇ-ಮೇಯ್ಲ್ ಪತ್ರ ಬಂದಿತ್ತು. ಹಾಗೆ ಅದು ನನಗೂ ಬಂದಿತ್ತು. ಆ ಮೇಯ್ಲ್ ಐಡಿಯಿಂದ ಈ ಮುಂಚೆ ಬಂದಿದ್ದ ಇಂತಹ ಕೆಲವು ಪತ್ರಗಳು ನಕ್ಸಲರಿಂದ ಬಂದ ಅಧಿಕೃತ ಪತ್ರಗಳು ಎಂಬ ರೀತಿಯಲ್ಲಿಯೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಇದು ನಕ್ಸಲರೇ ಕಳುಹಿಸುತ್ತಿರುವ ಪತ್ರಗಳು ಎಂಬ ನಂಬಿಕೆ ನನಗೂ ಬಂದಿತ್ತು. ಹಾಗಾಗಿಯೆ, ಜನವರಿ 4 ರಂದು ಬಂದ ಪತ್ರಕ್ಕೆ ನಾನು [...]

ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು- ಭಾಗ. 2 – ಹಸುವಿನ ಹೂಸು…

2008 ರ ಕೊನೆಯ ದಿನ ನಾನು “ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು” ಎಂಬ ಬ್ಲಾಗ್ ನೋಟ್ ಮಾಡಿದಾಗ ಈ ಮಾರ್ಕ್ ಬಿಟ್ಟ್‌ಮನ್‌ನ ಹೆಸರನ್ನೇ ಕೇಳಿರಲಿಲ್ಲ. ಬ್ಲಾಗ್‌ನಲ್ಲಿ ಅದನ್ನು ಬರೆದ ನಂತರ ನನ್ನ ಈ ಸಸ್ಯಾಹಾರದ ಬಗೆಗಿನ ಚಿಂತನೆಯನ್ನು ಅವತ್ತು ಗೆಳೆಯ ಪ್ರೊ. ಪೃಥ್ವಿ ಜೊತೆ ಹಂಚಿಕೊಂಡಾಗ ಅವರು ತಕ್ಷಣ ನನಗೆ ಬಿಟ್ಟ್‌ಮನ್‌ನ ವಿಡಿಯೋದ ಲಿಂಕ್ ಕಳುಹಿಸಿದರು. ಎಲ್ಲೋ ಒಂದು ಗಂಟೆ ಇದೆ, ಬಿಡುವಾದಾಗ ನೋಡೋಣ ಎಂದುಕೊಂಡವನು ಅವತ್ತಿನಿಂದ ಇವತ್ತಿನ ತನಕ ಅದನ್ನು ನೋಡಿರಲಿಲ್ಲ. ಈಗ ತಾನೆ ನೋಡಿದೆ [...]

ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ

ಪ್ರಿಯ ಗಂಗಾಧರ್, “ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರಿಗೆ” ನೀವು ಸಂಬೋಧಿಸಿ ಬರೆದ “ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ !”ಎಂಬ ಇಮೇಯ್ಲ್‌ಗೆ ಪ್ರತಿಕ್ರಿಯೆಯಾಗಿ ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರೈತ ಹಿನ್ನೆಲೆಯಿಂದ ಬಂದಿರುವುದು, ಜೊತೆಗೆ ಈಗ ಕಾರ್ಮಿಕನಾಗಿ ನನ್ನ ಊಟ ಸಂಪಾದಿಸಿಕೊಳ್ಳುತ್ತಿರುವುದು, ಮತ್ತು ನನಗೆ ಪ್ರೀತಿ ಮತ್ತು ಸ್ನೇಹವನ್ನು ಕೊಡುತ್ತಿರುವವರಲ್ಲಿ ಮಹಿಳೆಯರೂ (ಮುಗ್ಧ ಹೆಣ್ಣುಮಕ್ಕಳೂ ಮತ್ತು ದುಡಿದೇ ತಿನ್ನುವ ವಯಸ್ಕರು) ಇರುವುದು, ತಮಗೆ [...]

ಅಂತರ್ಜಾಲದ ಕನ್ನಡ ಬರಹಗಳಿಗೆ (ಒಟ್ಟು) 15 ಸಾವಿರ ರೂಪಾಯಿಗಳ ಬಹುಮಾನ…

ಗೆಳೆಯರೆ, ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು. ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು. ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ “ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; [...]