ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌ಡಾಗ್ ಮಿಲ್ಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರ್ಷ ಒಳ್ಳೊಳ್ಳೆಯ ಚಿತ್ರಗಳೇ ರೇಸ್‌ನಲ್ಲಿ ಇದ್ದಂತಿವೆ. ಅಷ್ಟಿದ್ದರೂ ಸ್ಲಮ್‌ಡಾಗ್ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯುವ ಸುದ್ದಿಯೂ ಇದೆ. ಇಲ್ಲಿ, ನನ್ನ ಒಂದು ಸಂಶಯ ಏನೆಂದರೆ, ಅಕಾಡೆಮಿಯವರು ಬೇಕೆಂತಲೆ “ಮಿಲ್ಕ್”ಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಕೊಡಬಹುದು ಎಂದು. ನಾನು ಆ ಸಿನೆಮಾವನ್ನೆ ಅಲ್ಲ, ಆ ಪಟ್ಟಿಯಲ್ಲಿರುವ [...]
ಎಲ್ಲಾ ಹಾಲಿ-ಮಾಜಿ ಪ್ರೇಮಿಗಳಿಗೂ, ವಿರಹಿಗಳಿಗೂ, 2009 ರ “ಪ್ರೇಮಿಗಳ ದಿನ”ದ ಶುಭಾಶಯಗಳು. ರಾಷ್ಟ್ರೀಯ ದಿನಾಚರಣೆಗಳನ್ನು ಬಿಟ್ಟರೆ ಈ ವೈಯಕ್ತಿಕ ದಿನಾಚರಣೆಗಳ ಬಗ್ಗೆ ನನಗೆ ಉತ್ಸಾಹವಾಗಲಿ, ಹೇಳಿಕೊಳ್ಳುವಂತಹ ಗೌರವವಾಗಲಿ ಇಲ್ಲ. ಇನ್ನು ಆಚರಿಸುವುದಂತೂ ದೂರದ ಮಾತು. ಹತ್ತಿರದವರಿಗೆ ಶುಭಾಶಯ ಹೇಳುವುದೂ ಇಲ್ಲವೇ ಇಲ್ಲವೇನೊ. ಆದರೂ, ಕರ್ನಾಟಕದ ಇವತ್ತಿನ ಸಂದರ್ಭದಲ್ಲಿ , ಎಲ್ಲರಿಗೂ, ವಿಶೇಷವಾಗಿ ನನ್ನ ಯುವ ಮಿತ್ರರಿಗೆ, ಈ ಸಲದ ಪ್ರೇಮಿಗಳ ದಿನದ ಶುಭಾಶಯ ಹೇಳುವುದು ಮುಖ್ಯ ಅನ್ನಿಸುತ್ತಿದೆ. ಭಾರತೀಯ ಪರಂಪರೆಯಲ್ಲಿ ಪ್ರೇಮದ ಮತ್ತು ಪ್ರೇಮಿಗಳ ಉಜ್ವಲ ಪರಂಪರೆಯೇ [...]
ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೆ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು. ಕೋಮುವಾದ, ಶ್ರೀಮಂತಿಕೆಯ ಹಪಹಪಿ, ಜಾತಿಶ್ರೇಷ್ಠತೆ ಮತ್ತು ಮತೀಯವಾದವನ್ನೆ ದೇಶಪ್ರೇಮ ಮತ್ತು ಸಂಸ್ಕೃತಿಯ ರಕ್ಷಣೆ ಎಂದುಕೊಂಡ ಅಪಕ್ವ ಮನಸುಗಳ ವ್ಯವಸ್ಥಿತ ಸಂಚುಗಾರಿಕೆ, ಇದನ್ನೆಲ್ಲ ಅರಿಯಲಾರದ ಬಹುಸಂಖ್ಯಾತರ ವೈಚಾರಿಕ ದಾರಿದ್ರ್ಯ; ಇಂತಹ ಹಲವು ಪಿಡುಗುಗಳಿಂದ ಇವತ್ತು ಕರಾವಳಿ ಕಲುಷಿತವಾಗುತ್ತಿದೆ. ಇಡೀ ಕರ್ನಾಟಕದಲ್ಲಿ ಇವತ್ತು ಎಲ್ಲಿಯಾದರೂ ಪ್ರಗತಿಪರರಾಗಿರುವುದು, ಜಾತ್ಯತೀತನಾಗಿರುವುದು, ಒಟ್ಟು ಸಮಾಜದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವುದು ದೊಡ್ಡ ಸವಾಲಾಗಿ ಇದ್ದರೆ ಅದು ಕರಾವಳಿಯಲ್ಲಿ. [...]