ಸ್ನೇಹಿತರೆ, ಮೊದಲಿಗೆ, ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು. ಜನಪರ ವೇದಿಕೆ-ಉಡುಪಿ ಘಟಕ, ಇದರ ಸಹಯೋಗದೊಂದಿಗೆ www.vicharamantapa.net ಇದೇ ಭಾನುವಾರ (29-03-2009), ಮಧ್ಯಾಹ್ನ 3:00 ಗಂಟೆಗೆ “ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ: ನಮ್ಮೆದುರಿನ ಸವಾಲುಗಳು” ಈ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ವಿವರ ಹೀಗಿದೆ: ಸ್ಥಳ: ಮಹಾಜನ ಸಭಾಂಗಣ, ಕಿದಿಯೂರು ಹೋಟೆಲ್, ಬಸ್ ನಿಲ್ದಾಣದ ಬಳಿ, ಉಡುಪಿ. ದಿನ ಮತ್ತು ಸಮಯ: ಭಾನುವಾರ (29-03-2009), ಮಧ್ಯಾಹ್ನ 3:00 ಪ್ರಸ್ತಾವನೆ: ಡಿ.ಎಸ್. ನಾಗಭೂಷಣ್ ವಿಷಯದ ಕುರಿತು [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 20, 09 ರ ಸಂಚಿಕೆಯಲ್ಲಿನ ಲೇಖನ.) ಭಾರತದ ಸಮಾಜದಲ್ಲಿಯ ಜಾತಿವ್ಯವಸ್ಥೆಯಿಂದಾಗಿ “ಸಾಮಾಜಿಕವಾಗಿ ಮುಂದುವರೆದವರು” ಎಂದು ಗುರುತಿಸಲಾಗುವ ಮೇಲ್ಜಾತಿಗಳ ಜನರಿಗೆ ಕೆಲವು ವಿಶೇಷ ಹಕ್ಕು ಮತ್ತು ಸವಲತ್ತುಗಳು ಸುಲಭವಾಗಿ ಬಂದುಬಿಡುತ್ತವೆ. ಒಂದು ಸ್ವಸ್ಥ ಸಮಾಜದಲ್ಲಿ ಆ ಹಕ್ಕು ಮತ್ತು ಸವಲತ್ತುಗಳನ್ನು ಬಳಸಿಕೊಳ್ಳಲು ಜನ ಹೇಸಿಗೆ ಪಟ್ಟುಕೊಳ್ಳಬೇಕು. ಆದರೆ ಹಾಗೆ ಹೇಸಿಗೆ ಪಟ್ಟುಕೊಳ್ಳಲು ಜನಕ್ಕೆ ಅದು ಹೇಸಿಗೆ ಅನ್ನುವುದು ಮೊದಲು ಗೊತ್ತಾಗಬೇಕು. ಅದು ಗೊತ್ತಾಗಬೇಕಾದರೆ ನಾವು ಶತಮಾನಗಳಿಂದ ಪಾಲಿಸಿಕೊಂಡ ಬಂದ ಜಾತಿರಿವಾಜುಗಳನ್ನು, ಅವುಗಳ ನೈತಿಕತೆ/ಅನೈತಿಕತೆಯನ್ನು [...]
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.) ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು “ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು,” ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ [...]