ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! –ಸವಿತಾ ನಾಗಭೂಷಣ ಬಹುಶಃ ನನ್ನ Restless ಮನಸ್ಥಿತಿಯಿಂದಾಗಿಯೊ ಅಥವ ಮತ್ತಿನ್ನೆಂತದ್ದಕ್ಕೊ ಪದ್ಯ-ಕವನ ಓದುವುದು ನನಗೆ ಬಹಳ ಕಷ್ಟ. ಅವನ್ನು ಕತೆ-ಕಾದಂಬರಿ ಓದುವಂತೆ ಬಾಯಿ ತೆರೆಯದೆ ಓದಿಕೊಂಡರೆ ಅವನ್ನು ಅರ್ಥ ಮಾಡಿಕೊಳ್ಳುವುದು, ಪದಗಳ ಮತ್ತು ಭಾವದ ಅರಿವು ಮೂಡುವುದು ಕಷ್ಟವೇನೊ. ಜೊತೆಗೆ ಅದನ್ನು ಗದ್ಯ ಓದಿದಂತೆ ನಿಲ್ಲಿಸದೆ ಸುಮ್ಮನೆ ಓದಿಕೊಂಡು ಹೋಗುವುದೂ ಸರಿಯಲ್ಲವೇನೊ. ಏನೇ ಇರಲಿ ನನ್ನ ಕವನಗಳ ಓದು ಬಹಳ ಸೀಮಿತ. [...]

ಮಾನವ(ವೀಯ) ಪಶು ಸಾಗಾಣಿಕೆ !?

ಭಾರತದಲ್ಲಿ ಊಟ ಸಂಪಾದಿಸಿಕೊಳ್ಳುವುದೇ ದೊಡ್ಡ ಸವಾಲು. ಆ ಸವಾಲು ಸ್ವೀಕರಿಸಿದ ಮನುಷ್ಯರು ಕೋಟ್ಯಾಂತರ ಇರುವುದರಿಂದ ಮತ್ತು ಅವರಲ್ಲಿ ಬಹಳಷ್ಟು ಜನ “ನಗಣ್ಯ”ರೂ ಆಗಿರುವುದರಿಂದ ಅವರ ಸಾವು, ನೋವು, ಅಪಘಾತ, ಸುರಕ್ಷೆ, ಸುದ್ದಿಯೂ ಅಲ್ಲ, ಗಮನಹರಿಸಬೇಕಾದ ಸಮಸ್ಯೆಯೂ ಅಲ್ಲ. ಹೌದೆ? ನಿಜವೆ? ಒಂದು ಆಟೋದಲ್ಲಿ 12-13 ಜನ ಕುಳಿತು ಯಾವೊಂದು ಸುರಕ್ಷೆಯೂ ಇಲ್ಲದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾರೆ; ದಿನಗೂಲಿಗೆ. 10-12 ಜನ ಮಾತ್ರ ಕೂಡಬಹುದಾದ ಜೀಪಿನಲ್ಲಿ ಮೇಲೆ-ಕೆಳಗೆ ಎಲ್ಲಾ ಸೇರಿ 20-25 ಜನ ಕಣಿವೆ-ಗುಡ್ಡ-ಬೆಟ್ಟಗಳಲ್ಲಿ ಮಳೆ-ಬಿಸಿಲು-ಗಾಳಿ-ಧೂಳನ್ನು ಅನುಭವಿಸುತ್ತ ಸಾಗುತ್ತಾರೆ. ಆಗಾಗ [...]

ಇದ್ದಿಲು ಮಾಡುತ್ತ ಕುರುಡಾಗುವರು; ದೇವಿಯ ಮೆರವಣಿಗೆಯಲ್ಲಿ ಹೆಂಗಸರಿಲ್ಲ!

ಇದ್ದಿಲು ಮಾಡುತ್ತ ಕಣ್ಣು ಕಳೆದುಕೊಳ್ಳುವವರು ಅಂದು ಮಾಗಡಿಯ ಹಳ್ಳಿಯಿಂದ ಹಾಸನಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಹೆದ್ದಾರಿಗೆ ಹತ್ತಿರದಲ್ಲಿಯೆ ಸುಮಾರು ಹತ್ತಾರು ಎಕರೆ ವಿಸ್ತೀರ್ಣದಲ್ಲಿ ದಟ್ಟ ಬಿಳಿ ಹೊಗೆ ಕಾಣಿಸಿತು. ಪರಿಸರ-ಹೊಗೆ-ತಾಪಮಾನ ಏರಿಕೆ-ಜೀವನ-ದುಡಿಮೆ, ಹೀಗೆ ಓಡಿದ ಮನಸ್ಸು ಅದೇನೆಂದು ನೋಡಲು ಪ್ರಚೋದಿಸಿತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಜಾಗ ಅದು. ಹಾಸನ ಜಿಲ್ಲೆಯ ಗಡಿ ಬಹುಶಃ ಒಂದೆರಡು ಕಿ.ಮೀ. ಅದು ಕೊಬ್ಬರಿ ಚಿಪ್ಪನ್ನು ಇದ್ದಿಲು ಮಾಡುವ ದೇಸೀ ಉದ್ದಿಮೆ! ಕೊಬ್ಬರಿಚಿಪ್ಪನ್ನು ಇದ್ದಿಲು ಮಾಡುತ್ತ ಹೊಟ್ಟೆ ಹೊರೆದುಕೊಳ್ಳುವವರು ಇಲ್ಲಿರುವ ವಿಡಿಯೊ [...]