ಅನಾಮಿಕತೆ ಮತ್ತು ಅಮಲಿನಲ್ಲಿ ಕೆಂಡಸಂಪಿಗೆ…

ಹಿಂದೊಮ್ಮೆ ಕೆಂಡಸಂಪಿಗೆಯ ಬಗ್ಗೆ ಬರೆದಿದ್ದೆ. ಕನ್ನಡದ ಅಂತರ್ಜಾಲದಿಂದ ಹೊರಗಿದ್ದ ಅನೇಕ ಅರ್ಹರನ್ನು ಅದು ಪ್ರೀತಿಯಿಂದ ಎಳೆದೆಳೆದುಕೊಂಡು ಬಂದು ಕನ್ನಡ ಅಂತರ್ಜಾಲದಲ್ಲಿ ಕೂರಿಸಿದೆ. ಕೂರಿಸುತ್ತಿದೆ. ಆ ಮೂಲಕ, ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಇಲ್ಲದೆ ಹೋಗಿದ್ದ ಒಂದು ಕರ್ನಾಟಕದ ಪ್ರತಿಬಿಂಬವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಅದನ್ನು ದುಡ್ಡು ಹಾಕಿ ನಡೆಸುತ್ತಿರುವವರು ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಅವರು ಹೂಡುತ್ತಿರುವ ದುಡ್ಡಿಗೆ ಅಲ್ಲಿಂದ ಯಾವ ರೀತಿಯ ಹಣಕಾಸಿನ Returns ಇಲ್ಲ ಎಂದು ಮಾತ್ರ ಖಂಡಿತವಾಗಿ ಹೇಳಬಹುದು. ಕನ್ನಡ ಸೈಟುಗಳಿಗೆ ಜಾಹಿರಾತುಗಳು ಸಿಗುತ್ತವೊ [...]

ಲೋಕ್‌ ಸತ್ತಾದ ಜೇಪಿ, ಚಿತ್ರದುರ್ಗದ ಜನಾರ್ಧನ ಸ್ವಾಮಿ…

ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲಿ Undermine ಮಾಡುವ ರೀತಿಯಲ್ಲೂ ಇತ್ತು. ಆ ಪ್ರಶ್ನೆ ಚುಡಾಯಿಸುವ, ಹಂಗಿಸುವ ರೀತಿಯಲ್ಲಿ ಇರಬಾರದು ಎಂದುಕೊಂಡೆ ಸಾಕಷ್ಟು ಹುಷಾರಿನಲ್ಲಿ ಕೇಳಿದೆ. ಅದು ಅವರಿಗೆ ಮುಜಗರ ಉಂಟು ಮಾಡಿದ್ದನ್ನು ಅವರ ಉತ್ತರ ಹೇಳುತ್ತಿತ್ತು. ನನ್ನನ್ನು ಸ್ವಲ್ಪ ಜಾಡಿಸುವ ರೀತಿಯಲ್ಲಿ, ಒಳ್ಳೆಯದನ್ನು ಕಾಣದ ಅವಿವೇಕಿಯನ್ನು ಬೈಯ್ಯುವ, insult [...]

ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ… ಕ್ಷಮಿಸಿ…

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ ‘ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.’ ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ [...]

“ಅಭಿವೃದ್ಧಿ” ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?

(ವಿಕ್ರಾಂತ ಕರ್ನಾಟಕದ ಮೇ 8, 09 ರ ಸಂಚಿಕೆಗಾಗಿ ಕಳೆದ ಭಾನುವಾರ ಬರೆದದ್ದು.) ನಮ್ಮಲ್ಲಿ ಒಂದಷ್ಟು ಪರಂಪರಾಗತ ಸಮಸ್ಯೆಗಳಿವೆ: ಅನಕ್ಷರತೆ, ಜಾತೀಯತೆ, ಬಡತನ, ಮೌಢ್ಯ, ಇತ್ಯಾದಿ. ನನ್ನ ತಲೆಮಾರು ನಂಬಿಕೊಂಡು ಬಂದ ಅಥವ ನಂಬಿದ ಮಾತು ಏನೆಂದರೆ, ವಿದ್ಯೆ ಮತ್ತು “ಆರ್ಥಿಕ ಅಭಿವೃದ್ಧಿ” ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ ಮತ್ತು ಅವುಗಳನ್ನು ಇಲ್ಲವಾಗಿಸುತ್ತದೆ ಎನ್ನುವುದು. ಆದರೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಸುಮಾರು ಮೂರು ವಾರಗಳ ಕಾಲ ಕರ್ನಾಟಕದ ಬೇರೆಬೇರೆ ಕಡೆ ಸುತ್ತಿದ ನನ್ನ ಅನುಭವಗಳ ಆಧಾರದ [...]