ಗುಪ್ತರು, ನಾಮರಹಿತರು, ಹಂದಿ, ಮತ್ತು ಸಸ್ಯಾಹಾರ

ಈಗೊಂದು ತಿಂಗಳಿನಿಂದ ತುರಿಸಿಕೊಳ್ಳಲೂ ಬಿಡುವಿಲ್ಲ. ಬರೆಯುವುದಿರಲಿ, ಅದರ ಬಗ್ಗೆ ಯೋಚಿಸುವುದೂ ಸಾಧ್ಯವಾಗಿರಲಿಲ್ಲ. ಈ ಒಂದೇ ತಿಂಗಳಿನಲ್ಲಿ Windows 2000, Xp, Vista, 7, Windows CE, Appleನವರ OS X, Linux, QNX, ಹೀಗೆ ಇದ್ದಬದ್ದದ್ದರೆಲ್ಲ ಕೆಲವು ಪಿಸಿಐ ಮತ್ತು ಯುಎಸ್‌ಬಿ drivers ಬರೆಯುವ ಕೆಲಸ. ಇಷ್ಟಿದ್ದರೂ ನಾಲ್ಕು ವಾರದ ಹಿಂದೆ ಒಂದು ವಿಷಯದ ಬಗ್ಗೆ ಪ್ರತಿಕ್ರಿಯಿಸಲೇ ಬೇಕು ಎನ್ನಿಸಿತು. ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್‌ಮಟ್ಟು ಮತ್ತು ಜಿ.ಕೆ.ಗೋವಿಂದ್‌ರಾವ್‌ರವರ ಲೇಖನಕ್ಕೆ ಪ್ರತಿಯಾಗಿ ಶಿವಸುಂದರ್ ಮತ್ತು ಅರವಿಂದ ಚೊಕ್ಕಾಡಿ ಪ್ರತಿಕ್ರಿಯಿಸಿದ್ದರು. [...]