ಅತಿ ದೌರ್ಭಾಗ್ಯದ ಹಾಲಿ ವಿಧಾನಸಭೆ

[ಇದು "ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ..." ಲೇಖನದ ಮುಂದುವರೆದ ಭಾಗ/ಟಿಪ್ಪಣಿ.] ಈ ಸಲದ ವಿಧಾನಸಭಾ ಶಾಸಕರಲ್ಲಿ ಇರುವುದೆ ಮೂರು ಗುಂಪು. ಹಾಲಿ ಆಡಳಿತ ಪಕ್ಷದ ಬಿಜೆಪಿ ಒಂದು ಗುಂಪಾದರೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೆರಡು ಗುಂಪುಗಳು. ಪಕ್ಷೇತರರಲ್ಲಿ ಐದು ಜನ ಬಿಜೆಪಿಯೊಂದಿಗಿದ್ದಾರೆ. ಇನ್ನೊಬ್ಬರನ್ನು ಸದ್ಯಕ್ಕೆ ಕಾಂಗ್ರೆಸ್‌ನೊಂದಿಗೇ ಗುರುತಿಸಬಹುದು. ಅಂದರೆ, ಇರುವ ಈ ಮೂರು ಗುಂಪುಗಳೂ ಕಳೆದ ಹತ್ತು ವರ್ಷಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ಆಡಳಿತ ನಡೆಸಿದವರೆ. ಸಾಧ್ಯವಾದಾಗ ತಮ್ಮತಮ್ಮ ಸಮಯದಲ್ಲಿ ಬಾಚಲು [...]

ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ…

[ಈ ಲೇಖನಕ್ಕೆ "ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ." ಎಂಬ ಶೀರ್ಷಿಕೆ ಕೊಟ್ಟಿದ್ದೆ. ಅದು ಅದೇ ಹೆಸರಿನಲ್ಲಿ ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಷಯದ ಗಾಂಭೀರ್ಯಕ್ಕೆ ಅದು ಸೂಕ್ತವಾದ ಹೆಸರು. ಆದರೆ, ಈ ಶೀರ್ಷಿಕೆ ಸ್ವಲ್ಪ ಕ್ಯಾಚ್ಚಿ ಎನ್ನಿಸಿದ್ದರಿಂದ ಇಲ್ಲಿ ಬ್ಲಾಗ್‌ನಲ್ಲಿ ಬದಲಾಯಿಸಿದ್ದೇನೆ. - ರವಿ...] ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ… ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? [...]

ಗಾಂಧಿ ಜಯಂತಿ ಕಥಾಸ್ಪರ್ಧೆ- 2009

ಕಳೆದ ವರ್ಷ ವಿಕ್ರಾಂತ ಕರ್ನಾಟಕದ ಸಹಯೋಗದೊಂದಿಗೆ ಈ ಕಥಾಸ್ಪರ್ಧೆ ಪ್ರಾಯೋಜಿಸಿದ್ದೆ. ಇದು ಈ ವರ್ಷವೂ ಮುಂದುವರೆಯುತ್ತಿದೆ. ವಿವರಗಳು ಈ ಕೆಳಗಿನ ಚಿತ್ರದಲ್ಲಿದೆ. (ಅದನ್ನು ಕ್ಲಿಕ್ ಮಾಡಿದರೆ ಅದು ದೊಡ್ಡದಾಗಿ ತೆರೆದುಕೊಳ್ಳುತ್ತದೆ.) ಆಸಕ್ತರು ಮತ್ತು ಕತೆಗಾರರು ಗಮನಿಸಬೇಕಾಗಿ ವಿನಂತಿ. ಕಳೆದ ವರ್ಷ ಈ ಪ್ರಯುಕ್ತ ಬರೆದಿದ್ದ ಬ್ಲಾಗ್ ಲೇಖನ ಇಲ್ಲಿದೆ: ಗಾಂಧಿ ಜಯಂತಿ ಕಥಾಸ್ಪರ್ಧೆ – 2008 ಆ ಕಥಾಸ್ಪರ್ಧೆಯಲ್ಲಿ ಗೆದ್ದ ಕತೆಗಳು ಇಲ್ಲಿ (ವಿಚಾರಮಂಟಪ.ನೆಟ್) ಓದಲು ಲಭ್ಯವಿವೆ.