ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ…

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 4,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಲೇಖನ ಸರಣಿಯ ಹಿಂದಿನ ಲೇಖನಗಳು: ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ! ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...] ಪ್ರತಿಭಾವಂತರು ಹೇಗಾಗುತ್ತಾರೆ? ನಾವು ಯಾವುದನ್ನು ಪ್ರತಿಭೆ ಎನ್ನುತ್ತೇವೆಯೋ ಅದು ಮನುಷ್ಯನಿಗೆ ಹುಟ್ಟುತ್ತಲೆ ಇರುತ್ತದೆಯೊ ಅಥವ ಮನುಷ್ಯ ಅದನ್ನು ಕಾಲಾನುಕ್ರಮೇಣ ಸಂಪಾದಿಸಿಕೊಳ್ಳುತ್ತಾನೊ? ಮ್ಯಾಲ್ಕಮ್ ಗ್ಲಾಡ್‌ವೆಲ್ ಪ್ರಕಾರ ಕಲಿಯುವ/ಅಭ್ಯಾಸ ಮಾಡುವ ಹಂಬಲಿಕೆಯೆ ಪ್ರತಿಭೆ. ಒಬ್ಬನಿಗೆ ಯಾವುದೊ ಒಂದು ವಿಷಯ/ಆಟ/ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ. ಅದು [...]

ಹುಟ್ಟಿದ ಘಳಿಗೆ ಸರಿ ಇರಬೇಕು…

[ವಿಕ್ರಾಂತ ಕರ್ನಾಟಕದ ಆಗಸ್ಟ್ 28,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.] ಭಾಗ – 1: “ಹೊರಗಣವರು” – ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ! ’ಮೆಡಿಸಿನ್ ಹ್ಯಾಟ್ ಟೈಗರ್ಸ್’ ಎನ್ನುವುದು ಕೆನಡಾದಲ್ಲಿಯ ಒಂದು ಬಾಲಕರ ಐಸ್ ಹಾಕಿ ತಂಡ. ಅದು ಹಲವಾರು ಚಾಂಪಿಯನ್‌ಷಿಗಳನ್ನು ಗೆದ್ದಿದೆ. ಮ್ಯಾಲ್ಕಮ್ ಗ್ಲಾಡ್‌ವೆಲ್ ತನ್ನ ಹೊರಗಣವರು ಪುಸ್ತಕದಲ್ಲಿ ಈ ತಂಡದ ಬಾಲಕರ ಜನ್ಮದಿನವನ್ನು ವಿಶ್ಲೆಷಿಸುತ್ತಾನೆ. (2007 ರ) ಟೈಗರ್ಸ್ ತಂಡದ 25 ಆಟಗಾರರಲ್ಲಿ 17 ಹುಡುಗರು ನಾಲ್ಕು ತಿಂಗಳ ಅವಧಿಯಲ್ಲಿ, ಅದೂ ಜನವರಿ-ಏಪ್ರಿಲ್ ತಿಂಗಳುಗಳಲ್ಲಿ [...]

ಪೆಜತ್ತಾಯರ “ರಕ್ಷಾ” ಮತ್ತು ರಹಮತರ ನಾಯಿಪುರಾಣ…

ರಹಮತ್ ತರೀಕೆರೆಯವರು “ಕೆಂಡಸಂಪಿಗೆ”ಯಲ್ಲಿ ಬರೆಯುತ್ತಿರುವ “ನಾಯಿಪುರಾಣ” ಮತ್ತೆ ಹಳೆಯ ನೆನಪುಗಳನ್ನು ಎಬ್ಬಿಸುತ್ತಿದೆ. ಈ ವಾರ ನಾಯಿಪುರಾಣದ ಎರಡನೆಯ ಕಂತು ಪ್ರಕಟವಾಗಿದೆ. ಕೆಲವು ಬರಹಗಳನ್ನು ಓದಿದಾಕ್ಷಣ ಮನಸ್ಸು ಅದೆಂತಹುದೊ ಪ್ರಶಾಂತತೆಗೆ ತಲುಪಿಬಿಡುತ್ತದೆ. ಇಂದೂ ಸಹ ಹಾಗೆಯೆ ಆಯಿತು. ನಾಯಿಪುರಾಣದ ಮೊದಲ ಕಂತು ಪೆಜತ್ತಾಯರ ಪುಸ್ತಕದ ಪ್ರಸ್ತಾಪದೊಂದಿಗೆ ಆರಂಭವಾಗುತ್ತದೆ. ಆ ಪುಸ್ತಕವನ್ನು ರಹಮತ್ “ನನಗೆ ತಿಳಿದಂತೆ ನಾಯಿಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಜೀವನ ಚರಿತ್ರೆ” ಎನ್ನುತ್ತಾರೆ. ಅದರ ಹೆಸರು “ನಮ್ಮ ರಕ್ಷಕ ರಕ್ಷಾ”. ಆ ಪುಸ್ತಕಕ್ಕೆ ಮುನ್ನುಡಿ ಬರೆಯುವ [...]

“ಹೊರಗಣವರು” – ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!

["ವಿಕ್ರಾಂತ ಕರ್ನಾಟಕ"ದ ಆಗಸ್ಟ್ 21, 2009ರ ಸಂಚಿಕೆಯಲ್ಲಿನ ಲೇಖನ] ಸಾಧಕರ ಅಥವ ಯಶಸ್ವಿಗಳ ಬಗೆಗಿನ ಮನುಷ್ಯನ ಕುತೂಹಲ ಇಂದುನೆನ್ನೆಯದಲ್ಲ. ಇತಿಹಾಸವಂತೂ ಕೆಲವೊಮ್ಮೆ ಅವರದೇ ಚರಿತ್ರೆಯಿಂದ ತುಂಬಿಹೋಗಿದೆ. ಆರ್ಥಿಕವಾಗಿ ಬಹುಯಶಸ್ವಿಯಾದವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಈಗಿನವರ ದಾಹವೂ ಕಳೆದೆರಡು ಶತಮಾನಗಳ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಅರ್ಥಮಾಡಿಕೊಳ್ಳುವಂತಹುದೆ. ತಮ್ಮ ಜೀವನದಲ್ಲಿ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲು ಜನ ಇಂತಹವರ ಯಶಸ್ಸಿನ ಕತೆಗಳನ್ನು ಓದುತ್ತಾರೆ. ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಾದರಿಯಾಗಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುತ್ತ ಕೆಲವರು ಒಂದು ಹಂತದ ತನಕ ಯಶಸ್ಸನ್ನೂ ಪಡೆಯಬಹುದು. ಹಾಗೆಯೆ, ಬಹುಪಾಲು [...]