ಒಂದೂವರೆ ಶತಮಾನದಷ್ಟು ಹಿಂದುಳಿದಿರುವ ಕರ್ನಾಟಕ!

ಕರ್ನಾಟಕ ಏಕೀಕರಣದ ನೆನಪಿನ ಶುಭಾಶಯಗಳು… ರಾಜ್ಯದ ಜನತೆ ಇದೇ ಸಂದರ್ಭದಲ್ಲಿ ಬಹುಶಃ ಅವರಿಗೂ ಪ್ರಿಯವಾಗುತ್ತಿರುವ ಒಂದು ರೀತಿಯ ರಾಜಕೀಯ ಮನರಂಜನೆಯನ್ನು ಸವಿಯುತ್ತಿರುವ ಹಾಗಿದೆ. ಇಷ್ಟಕ್ಕೂ ಈ ಮನರಂಜನೆಯ ನಾಟಕದ ಪಾತ್ರಧಾರಿಗಳನ್ನು ಆರಿಸಿಕೊಂಡಿರುವವರು ಅಥವ ಸೃಷ್ಟಿಸಿರುವವರು ಅವರೇ ಅಲ್ಲವೆ? ಮಕ್ಕಳ ಎಂತಹ ಹೀನ ಆಟವೂ ಕೆಲವು ಹೆತ್ತವರಿಗೆ ಪ್ರಿಯವಾಗಬಹುದು; ಹೆತ್ತವರಿಗೆ ಅದರಲ್ಲಿ ದೋಷವೆ ಕಾಣದಾದಾಗ, ಅವರೂ ಅಂತಹವರೆ ಆದಾಗ, ಅಥವ ಮಕ್ಕಳ ಮೇಲೆ ವಿವೇಚನೆಯಿಲ್ಲದ ಕುರುಡು ಪ್ರೀತಿ ಬೆಳೆಸಿಕೊಂಡಾಗ. ಅಥವ, ಇನ್ನೂ ಬೇರೆಯದೆ ಕಾರಣಗಳೂ ಇರಬಹುದು. ಇರಲಿ. ಸದ್ಯದ [...]

“ಹೊರಗಣವರು” – ಈ ವಾದ ಪರಿಪೂರ್ಣವೆ? ನಮಗೆಷ್ಟು ಪ್ರಸ್ತುತ?

[ವಿಕ್ರಾಂತ ಕರ್ನಾಟಕದ ಅಕ್ಟೋಬರ್ 9,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಲೇಖನ ಸರಣಿಯ ಹಿಂದಿನ ಲೇಖನಗಳು: ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ! ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು... ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ... ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ ! ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ ಆರನೆಯದು: ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ? ಏಳನೆಯದು: ನಮ್ಮ ಬಡಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?] [...]