ದುಡ್ಡು-ಸಮಯ-ಪ್ರಭಾವ ಇಲ್ಲದಿದ್ದರೆ ನ್ಯಾಯ ಕೇಳಬಾರದು. ಎಲ್ಲೂ…

ನ್ಯಾಯ ಪಡೆದುಕೊಳ್ಳುವ ಬಗ್ಗೆ ಇನ್ನೊಂದು ಮಾತು. ಹಣ-ಅಧಿಕಾರ-ಪ್ರಭಾವ-ವಶೀಲಿಗಳ ಮೇಲೆ ನಡೆಯುತ್ತಿರುವ ಸಮಾಜಗಳಲ್ಲಿ ಇವು ಇಲ್ಲದ ವ್ಯಕ್ತಿಗಳು ನ್ಯಾಯ ಕೇಳಬಾರದು. ಅವು ದಕ್ಕುವುದಿಲ್ಲ. ಅನ್ಯಾಯಕ್ಕೆ ಒಳಗಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಮನೆ-ಮಕ್ಕಳು ಸುತ್ತ ಓಡಾಡುವುದೆ ಕ್ಷೇಮ. ಅನ್ಯಾಯ ಎಸಗಿದವರು ನಿಮಗಿಂತ ಕಮ್ಮಿ ಬಲಿಷ್ಠರಾಗಿದ್ದರೆ ಮಾತ್ರ ನ್ಯಾಯ ಪಡೆಯಲು ಅವಕಾಶ ಉಂಟು. ಓಪ್ರಾ ವಿನ್‍ಫ್ರೇ ಒಮ್ಮೆ ತನ್ನ ಶೋನಲ್ಲಿ ನಾನು ಬರ್ಗರ್ ತಿನ್ನುವುದಿಲ್ಲ ಎನ್ನುವಂತಹ ಮಾತನ್ನು ಆಡಿದ್ದಕ್ಕೆ ಮಾಂಸಕ್ಕಾಗಿ ದನ ಸಾಕುವ ಅಮೆರಿಕದ ದೊಡ್ಡ ರೈತರುಗಳು ಆಕೆಯನ್ನು ಕೋರ್ಟಿಗೆ ಎಳೆದಿದ್ದರು. ಓಪ್ರಾ [...]

ಗೆಳೆಯ, ನಿನ್ನ ಕೊಲೆಗೆ ನ್ಯಾಯ ಸಿಗದು. ಕ್ಷಮಿಸು. ಆದರೂ…

ಸರಿಯಾಗಿ ಹತ್ತು ವರ್ಷಗಳ ಸ್ನೇಹ. 1999 ರ ಇಂತಹುದೇ ದಿನಗಳಲ್ಲಿ ಹತ್ತಿರವಾಗಿದ್ದು. ರಕ್ತಸಂಬಂಧಿಕನಲ್ಲ. ಆಸ್ತಿಪಾಸ್ತಿ ವಿಷಯ ಬಿಟ್ಟು ಮಿಕ್ಕೆಲ್ಲದರಲ್ಲೂ ಅಣ್ಣನಂತಿದ್ದ. ಮೂರ್ನಾಲ್ಕು ದಿನಗಳ ಹಿಂದೆ ಕಣ್ಮರೆಯಾಗಿ ಹೋದ. ಲೋಕಕ್ಕೆ ವಿಷಯ ಇಂದು ಗೊತ್ತಾಯಿತು. ಆತನ ಕೊಲೆಯಾಗಿದೆ. ನಮ್ಮ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ತನ್ನದೆ ನೆಲೆಯಲ್ಲಿ ಮಾಡುತ್ತಿದ್ದ ಹೋರಾಟ ಆತನ ಬಲಿ ತೆಗೆದುಕೊಂಡಿತು. ಆದರೆ ಅದು ಹಾಗೆ ದಾಖಲಾಗುವುದಿಲ್ಲ. ಈಗ ನಾನು ಮಾಡದ ಹೊರತು. ಮಂತ್ರಿ ಮತ್ತು ಅತನ ಹಿಂಬಾಲಕರು ದುಷ್ಟನೊಬ್ಬನ ಬಳಿ ಹಣ ತೆಗೆದುಕೊಂಡು ದಾಖಲೆಗಳನ್ನು ಬದಲಾಯಿಸಿ [...]

ನೆರೆ ಮತ್ತು ಪರಿಹಾರದ ರೀತಿ-ನೀತಿಯ ಕುರಿತಾಗಿ ಮಾತುಕತೆ…

ನೆರೆ ಬಂತು. ಅದರ ಹಿಂದೆಯೆ ಲಕ್ಷಾಂತರ ಜನರ ಬಾಳು ಬೀದಿಗೆ ಬಂತು. ನಾಡು ಮರುಗಿತು. ಹಲವರು ಪ್ರಾಮಾಣಿಕವಾಗಿಯೆ ತನು-ಮನ-ಧನದ ಸಹಾಯ ನೀಡಿದರು. ಸರ್ಕಾರವೆ ದೇಣಿಗೆ ಕೇಳಿಕೊಂಡು ಬೀದಿಗೆ ಬಂತು. ಪರಿಹಾರ ಕಾರ್ಯ ನಡೆಸಲು ಮತ್ತು ಆ ಮೂಲಕ ಪ್ರತಿಷ್ಠೆ ಬೆಳೆಸಿಕೊಳ್ಳಲು ಪೈಪೋಟಿ ಆರಂಭವಾಯಿತು. ನೆರೆ ಮತ್ತು ಇನ್ನೊಬ್ಬರ ನೋವು-ಅಸಹಾಯಕತೆ ಸಹ ದುರುಳರ ಆಟದಲ್ಲಿ ದಾಳವಾಯಿತು. ಪಣವಾಯಿತು. ಇದು ಸಾಮಾಜಿಕ ಮತ್ತು ರಾಜಕೀಯ ನೆಲೆಯಲ್ಲಿ ಕರ್ನಾಟಕಕ್ಕೆ ನಾಚಿಕೆಗೇಡಿನ ಸಂದರ್ಭ. ಸದ್ಯದ ಸ್ಥಿತಿಗೆ ರಾಜಕಾರಣಿಗಳನ್ನು ದೂರುವುದು ಬಹಳ ಸುಲಭ. ಆದರೆ [...]