Invictus – ರಾಜಕಾರಣಿಗಳಿಗೆ, ಸಮಾಜ ಚಳವಳಿಗಾರರಿಗೆ ಒಂದು ಪಾಠ…

Invictus (ಅಜೇಯ) – ಸಿನಿಮಾವನ್ನು ನೋಡಿಬಂದ ನಂತರ ಈ ಚಿಕ್ಕ ಟಿಪ್ಪಣಿ ಬರೆಯಬೇಕೆನೆಸಿ ಬರೆಯುತ್ತಿದ್ದೇನೆ. ಕ್ಲಿಂಟ್ ಈಸ್ಟ್‌ವುಡ್ ಹಾಲಿವುಡ್ ಚಿತ್ರಜಗತ್ತಿನಲ್ಲಿ unbelievable ಎನ್ನಬಹುದಾದಷ್ಟು ಮಾರ್ಪಾಡುಗಳನ್ನು ಪಡೆದ ನಟ. Old West ಸಿನೆಮಾಗಳಲ್ಲಿ ಅನಾಮಿಕ gunslinger ಪಾತ್ರಗಳಲ್ಲಿ, Dirty Harry ಪೋಲಿಸ್ ಪಾತ್ರಗಳಲ್ಲಿ ನಟಿಸಿದ್ದ ಈತನಿಗೆ ಈಗ 79 ವರ್ಷ. ಆದರೂ ವರ್ಷಕ್ಕೆ ಒಂದಾದರೂ ಆಸ್ಕರ್ ಪ್ರಶಸ್ತಿಗೆ ಅರ್ಹವಾದ ಸಿನೆಮಾ ನಿರ್ದೇಶಿಸುತ್ತಿದ್ದಾನೆ; ನಟಿಸುತ್ತಿದ್ದಾನೆ. ಈ ವರ್ಷದ ಆತನ ಚಿತ್ರ Invictus. ಏಕಕಾಲದಲ್ಲಿ ಒಂದು ಉತ್ತಮ ಕ್ರೀಡಾ ಸಿನೆಮಾವೂ, ಚಾರಿತ್ರಿಕ [...]