ಹಂಪಿ ವಿವಿ ತಂಡದಿಂದ ಪ್ರವಾಹೋತ್ತರ ವಿದ್ಯಮಾನಗಳ ವರದಿ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು. ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ [...]

ಕನ್ನಡ ಚಿತ್ರರಂಗ 75 – ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿ

ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ. ಲೇಖಕ ಕೆ. ಪುಟ್ಟಸ್ವಾಮಿಯವರು “ವಿಕ್ರಾಂತ ಕರ್ನಾಟಕ“ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ [...]