ಗಾಂಜಾ ಬೆಳೆಯುವ ಲಿವರ್‌ಮೋರ್ ಮನೆಯ ಮೇಲೆ ದಾಳಿ
[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.] ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್‌ಲ್ಯಾಂಡ್‌ನಿಂದ ಲಿವರ್‌ಮೋರ್‌ಗೆ ಹೊರಟರು. ಕೊರಾನ್‌ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್‌ರೂಮ್‌ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ [...]