ಮಾಯವಾಗುವುದೆ ಗೋಮುಖ? ಗಂಗೆ ಮತ್ತು ಭವಿಷ್ಯದ ಬಗ್ಗೆ PBS ಡಾಕ್ಯುಮೆಂಟರಿ

Watch the full episode. See more NOW on PBS.

ಕೈಗಾರಿಕೆಗಳಿಗೆ ಕೃಷಿಜಮೀನು ಕೊಟ್ಟ ಹಳ್ಳಿಯ ಆರಂಭದ ದಿನಗಳು…

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.] ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, [...]

ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ…

ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್‌ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ. ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: “ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. [...]