ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ…

ಈ ಕೆಳಗಿನದನ್ನು ಈಗ ಚಾಲ್ತಿಯಲ್ಲಿರುವ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬರೆದದ್ದು. ಈಗ ಮತ್ತೊಮ್ಮೆ ಸೂಕ್ತ ಎಂದು ಇಲ್ಲಿ ಹಾಕುತ್ತಿದ್ದೇನೆ. ರವಿ… ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ. ಇಂತಹ [...]

ಸಹನಾಗರೀಕರೆ, ಬೇವು ಬಿತ್ತಿ ಮಾವು ಬೆಳೆಯಲಾಗದು…

ಕರ್ನಾಟಕದ ರಾಜಕಾರಣದ ಬಗ್ಗೆ ಇಂತಹುದೊಂದು ಮಾತನ್ನು ಈಗಾಗಲೆ ಹಲವರು ಬಳಸಿರಬಹುದು. ಹಾಗೆಯೇ ಇದೂ ಸಹ ಕ್ಲೀಷೆ ಆಗಿಬಿಡಬಹುದು. ಅದು ದೇಶದ ದುರಂತ… ಯಾಕೆ ಹೀಗಾಯಿತು? ಕೇವಲ ಜನರೇ ಕಾರಣರೆ? ಅವರಿಗೆ ಆಯ್ಕೆಗಳೇ ಇರಲಿಲ್ಲವೇ? ನಾಯಕರು ಅವರಾಗಿಯೇ ಬರುತ್ತಾರಾ ಅಥವ ಜನ ಮುಂದಕ್ಕೆ ತರುತ್ತಾರಾ? ಪ್ರಜಾರಾಜ್ಯದಲ್ಲಿ ಯಥಾ ಪ್ರಜಾ ತಥಾ ಪ್ರತಿನಿಧಿ. ಅಲ್ಲವೇ? ಉತ್ತಮ ಸಮಾಜದ ಕನಸು ಕಾಣುವುದಕ್ಕೆ ಮತ್ತು ಕ್ರಿಯಾಶೀಲರಾಗುವುದಕ್ಕೆ ಸಮಯ ಬಂದಿದೆಯೇ?