ದಲಿತರ ಬಲವರ್ಧನೆ: ಬೇಕಿದೆ ಪೂನಾ ಒಪ್ಪಂದದ ಮರುಚಿಂತನೆ
ಇಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಲೇಖನದ ಕೊಂಡಿ… http://vijaykarnatakaepaper.com/pdf/2011/01/22/20110122a_008101002.pdf
ಇಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಲೇಖನದ ಕೊಂಡಿ… http://vijaykarnatakaepaper.com/pdf/2011/01/22/20110122a_008101002.pdf
ಕಳೆದ ಡಿಸೆಂಬರ್ 26 ರಂದು ನಮ್ಮ ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆದಿದ್ದು. ಅಂದು ಬೆಳಗ್ಗೆಯೇ ಹೋಗಿ ಓಟು ಹಾಕಿದೆ. ನಾನು ಓಟು ಹಾಕಿದ ಇಬ್ಬರೂ ಗೆಲ್ಲುವುದಿಲ್ಲ ಎಂದು ಗೊತ್ತಿತ್ತು. ತಾಲ್ಲೂಕು ಪಂಚಾಯಿತಿಗೆ ನಿಂತಿದ್ದ ಅಭ್ಯರ್ಥಿಯೊಬ್ಬರು ಯಾವುದೇ ಕಾರಣಕ್ಕೂ ತನ್ನ ಚುನಾವಣೆಯ ಖರ್ಚಿನ ಮಿತಿ ದಾಟುವುದಿಲ್ಲ ಎಂದು ಗೊತ್ತಿತ್ತು. ಅವರಿಗೆ ನನ್ನ ಪರವಾಗಿ ರೂ.1000 ನೀಡಿ ಅವರ ಪರವಾಗಿ ಒಂದು ಸಣ್ಣ ಸಭೆಯಲ್ಲಿ ಭಾಷಣ ಸಹ ಮಾಡಿದ್ದೆ. ಇನ್ನು ಜಿಲ್ಲಾ ಪಂಚಾಯಿತಿಯಲ್ಲಿ ಕಡಿಮೆ ಕೆಟ್ಟ [...]