ಕರ್ನಾಟಕ ಪ್ರಜಾ ಮಂಡಲ – ಸಂವಿಧಾನದ ಮೇಲಾಣೆ

ಸ್ನೇಹಿತರೆ, ನಾವು ಒಂದಿಷ್ಟು ಸಮಾನಮನಸ್ಕರು (ಸುಜಾತ ಕುಮಟ, ಸೂರ್ಯ ಮುಕುಂದರಾಜ್, ಶಾಂತವೇರಿ ರಾಮಮನೋಹರ್, ಮುಕುಂದರಾಜ್, ನಾನು, ಮತ್ತು ಇನ್ನೂ ಹಲವರು) “ಕರ್ನಾಟಕ ಪ್ರಜಾ ಮಂಡಲ” ಎಂಬ ವೇದಿಕೆಯೊಂದನ್ನು ಹುಟ್ಟುಹಾಕಿದ್ದೇವೆ. (ಇದರ ಹುಟ್ಟು ಹೇಗಾಯಿತು ಎಂದು ಮುಂದೊಮ್ಮೆ ಬರೆಯುತ್ತೇನೆ.) ಈ ಸಂಘಟನೆಯ ಮೂಲ ಉದ್ದೇಶ, ’ಕರ್ನಾಟಕದ ಸಮಾಜ, ಸಂಸ್ಕೃತಿ, ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ’ ಕಾರ್ಯಕ್ರಮಗಳನ್ನು ರೂಪಿಸುವುದು. ಕರ್ನಾಟಕ ರಾಜಕಾರಣದ ಇತ್ತೀಚಿನ ಕ್ಷುದ್ರ ಪ್ರಹಸನವಾದ ಆಣೆ-ಪ್ರಮಾಣದ ವಿರುದ್ಧವಾಗಿ “ಸಂವಿಧಾನದ ಮೇಲಾಣೆ” ಎಂಬ ಪ್ರತಿಭಟನಾ ಕಾರ್ಯಕ್ರಮ (27/6/2011)ಮಾಡುವುದರ ಮೂಲಕ ನಾವು [...]

ಮಾಧ್ಯಮ ಕರ್ನಾಟಕ : ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ…

ಕಳೆದ ಶನಿವಾರ ಮತ್ತು ಭಾನುವಾರ (ಜೂನ್ 25-26, 2011) ಚಿತ್ರದುರ್ಗದಲ್ಲಿ ’ಮಾಧ್ಯಮ ಕರ್ನಾಟಕ” ಎಂಬ ವಿಚಾರ ಸಂಕಿರಣ ನಡೆಯಿತು. ’ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು’, ಮತ್ತು ’ಗೆಳೆಯರ ಬಳಗ, ಚಿತ್ರದುರ್ಗ’, ’ನಾವು-ನಮ್ಮಲ್ಲಿ’ ಸಹಯೋಗದೊಂದಿಗೆ ಆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದಕ್ಕೆ ಹೆಚ್ಚಾಗಿ ಕನ್ನಡದ ಕೆಲವು ಪ್ರಮುಖ ಪ್ರಗತಿಪರ ವಿಚಾರಧಾರೆಯ ಪತ್ರಕರ್ತರು, ಬರಹಗಾರರು, ಆಸಕ್ತರು ಬಂದಿದ್ದರು. ಆಯೋಜಕರಲ್ಲಿ ಬಹುಪಾಲಿನವರು ಚಿತ್ರದುರ್ಗದ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಯುವಕರೇ ಇದ್ದರು. (ಯುವಕರೇ ಅಂದರೆ ಯುವಕ ಮತ್ತು ಯುವತಿಯರು ಎಂದು ಭಾವಿಸಬೇಕಾಗಿ ವಿನಂತಿ.) [...]

ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು

ಕಳೆದ ವಾರ (19/6/11) ನಡೆದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು ಇವು. ಬಿಡುಗಡೆಯಾದ ಪುಸ್ತಕಗಳ ಮುಖಪುಟ ಸಹ ಈ ಪೋಸ್ಟ್‌ಗೆ ಸೇರಿಸಿದ್ದೇನೆ. ಅಂದು ಬಂದಿದ್ದ ಗೆಳೆಯರಿಗೆ, ಹಿತೈಷಿಗಳಿಗೆ, ನೆರವಾದ ಮಿತ್ರರಿಗೆ, ಕವಿಗಳಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು.

ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ : ದಿ. 19-6-2011

ಸ್ನೇಹಿತರೆ, “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ”, ಮತ್ತು “ದೇಶ-ಕಾಲ-ಶ್ರಮ,” ಎಂಬ ನನ್ನ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಭಾನುವಾರದಂದು (19/6/11) ಬೆಳಗ್ಗೆ 10:30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತಿದ್ದೇನೆ. “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ,” ಇಂಗ್ಲಿಷ್‍ನ “Anyway” ಕೃತಿಯ ಅನುವಾದ. ಮೂಲ ಲೇಖಕರು ಕೆಂಟ್ ಎಂ. ಕೀತ್. “ದೇಶ-ಕಾಲ-ಶ್ರಮ” ನಾನು “Outliers” ಬಗ್ಗೆ [...]