ಇಟಲಿಯ ‘ಲಾಕ್ವಿಲಾ’ ಪಟ್ಟಣದ ಕೆಲವು ಚಿತ್ರಗಳು…

This post was written by admin on July 30, 2008
Posted Under: Uncategorized

ರೋಮ್‍ನಿಂದ ೧೨೦ ಕಿ.ಮಿ. ದೂರದಲ್ಲಿರುವ “ಲಾಕ್ವಿಲಾ” ಎಂಬ ಕಾಲೇಜು ಪಟ್ಟಣದಲ್ಲಿ ಎರಡು ವಾರದ ಹಿಂದೆ ನಾಲ್ಕು ದಿನ ಇದ್ದೆ. ಸುಮಾರು 70000 ಜನಸಂಖ್ಯೆಯ ಸುಂದರ, ಪ್ರಶಾಂತ ಪಟ್ಟಣ ಇದು. ಮಹಾನಗರಗಳಲ್ಲಿ ಕಾಣುವ ಯಾವುದೇ ಧಾವಂತ ಇಲ್ಲಿಲ್ಲ.

13 ನೇ ಶತಮಾನದ ‘ಸಂತೆ ಮೇರಿಯ ಕಾಲ್ಲೆಮಾಜಿಯೊ’, ಅದೇ ಶತಮಾನದ ’99 ಚಿಲುಮೆಗಳು’, 15 ನೇ ಶತಮಾನದ ‘ಸ್ಯಾನ್ ಬರ್ನಾರ್ಡಿನೊ ಚರ್ಚು’, 16 ನೇ ಶತಮಾನದ ‘ಸ್ಪ್ಯಾನಿಷ್ ಕೋಟೆ’, ಮುಸ್ಸೊಲಿನಿ ಕಾಲದ ‘ಫಾಂಟಾನಾ ಲೂಮಿನೋಸ’, ಹಿನ್ನೆಲೆಯಲ್ಲಿ ಎದ್ದು ಕಾಣುವ ಅಪಿನೈನ್ಸ್ ಪರ್ವತಶ್ರೇಣಿಯ ಅತಿದೊಡ್ಡ ಪರ್ವತ ‘ಗ್ರ್ಯಾನ್ ಸ್ಯಾಸ್ಸೊ’, ಮುಂತಾದ ಅನೇಕ ಚಾರಿತ್ರಿಕ ಮತ್ತು ನಿಸರ್ಗ ಪ್ರಾಮುಖ್ಯತೆಯ ಊರಿದು. ಕೋಟೆಯೊಳಗೆಯ ಮ್ಯೂಸಿಯಮ್‍ನಲ್ಲಿ ಇದೇ ಊರಿನ ಹತ್ತಿರ 1954 ರಲ್ಲಿ ಸಿಕ್ಕ ಬಹುಶಃ ಜುರಾಸಿಕ್ ಕಾಲದ ಆನೆ ‘ಮ್ಯಾಮೆತ್’ನ ಅಸ್ಥಿಪಂಜರವೂ ಇದೆ. ಇವೆಲ್ಲವುಗಳ ಕೆಲವು ಚಿತ್ರಗಳು ಇಲ್ಲಿ.



























Add a Comment

required, use real name
required, will not be published
optional, your blog address