"ವಿಚಾರ ಮಂಟಪ"ಕ್ಕೆ ಸಹಾಯ ಬೇಕಿದೆ…

This post was written by admin on December 20, 2008
Posted Under: Uncategorized

ವಿಚಾರ ಮಂಟಪ ವನ್ನು ಯೂನಿಕೋಡ್‌ಗೆ ಬದಲಾಯಿಸಿ ಹೊಸರೂಪ ನೀಡಬೇಕೆಂದುಕೊಂಡಿದ್ದ ಕೆಲಸ ಅಂದುಕೊಂಡದ್ದಕ್ಕಿಂತ ನಿಧಾನವಾಗುತ್ತಿದೆ. ಈಗಾಗಲೆ ಅರ್ಧ ಕೆಲಸ ಮಾಡಿದ್ದೇನೆ. ಅದಕ್ಕೆ Drupal ವ್ಯವಸ್ಥೆ ಏರಿಸಿ ಆಗಿದೆ. ಹಾಗೆಯೆ “ವಚನಗಳು” ಮತ್ತು “ಕುವೆಂಪು” ವಿಭಾಗವನ್ನೂ ಪೂರ್ಣಗೊಳಿಸಿದ್ದೇನೆ.

http://www.vicharamantapa.net/drupal

ಇನ್ನೂ ಡಾ. ಹೆಚ್. ನರಸಿಂಹಯ್ಯನವರ ‘ಹೋರಾಟ ಹಾದಿ”ಯ ಲೇಖನಗಳು, ಬಿ.ವಿ. ವೀರಭದ್ರಪ್ಪನವರ “ವೇದಾಂತ ರೆಜಿಮೆಂಟ್” ಲೇಖನಗಳು, ಸಿದ್ದಲಿಂಗಯ್ಯನವರ “ಆಯ್ದ ಪದ್ಯಗಳು” ಅನ್ನು ಬದಲಿಸಬೇಕಿದೆ. ಇತ್ತೀಚಿನ ವ್ಯಸ್ತ ವೇಳೆಯಿಂದಾಗಿ ಅದಕ್ಕೆ ಬೇಕಾದ ದಿನಂಪ್ರತಿ ಒಂದೆರಡು ಗಂಟೆಗಳ ಸಮಯ ಸಿಗುತ್ತಿಲ್ಲ. ಸಿಕ್ಕರೂ ಮನಸ್ಥಿತಿ ಹೊಂದುತ್ತಿಲ್ಲ. ಹಾಗಾಗಿ, ಈ ಮನವಿ.

ಇನ್ನೂ ಬಾಕಿಯಿರುವ ಲೇಖನ/ಪದ್ಯಗಳನ್ನು ಬರಹ-ANSI ಯಿಂದ ಯೂನಿಕೋಡ್‌ಗೆ ಕನ್ವರ್ಟ್ ಮಾಡಿ ವೆಬ್‍ಸೈಟ್‌ಗೆ ಏರಿಸಲು ಸುಮಾರು ಐದಾರು+ ಗಂಟೆಗಳ ಸಹಾಯ ಬೇಕಾಗಬಹುದು. ಯಾರಾದರೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಮುಂದೆ ಬಂದರೆ ನಿಜಕ್ಕೂ ಸಹಾಯವಾಗುತ್ತದೆ.

ಇದು ತುಂಬ ಸುಲಭದ ಕೆಲಸ. ಬ್ಲಾಗ್ ಪೋಸ್ಟ್ ಮಾಡುವುದಕ್ಕೂ ಇದಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಅದೇ interface. ನಾನು ಒಂದು ಯೂಸರ್ ಐಡಿಗೆ content ಏರಿಸುವ ಅನುಮತಿ ನೀಡಬೇಕಷ್ಟೆ. ನಂತರ ನೀವು ಬ್ಲಾಗ್‍ಗೆ ಲೇಖನ ಪೋಸ್ಟ್ ಮಾಡುವ ಹಾಗೆ ಇಲ್ಲಿಯೂ ಲೇಖನವನ್ನು ಪೋಸ್ಟ್ ಮಾಡಬೇಕು. ಮೂಲಲೇಖನ vicharamantapa.net ನಲ್ಲಿ ಇದೆ. ಅದನ್ನು “Baraha Convert” ಬಳಸಿ ಕಾಪಿ-ಪೇಸ್ಟ್ ಮಾಡಬೇಕಷ್ಟೆ. (ಅಪ್‍ಲೋಡ್ ಆದ ಲೇಖನಕ್ಕೆ ಮೆನು ಕೂಡಿಸುವುದನ್ನು ನಾನು ಮಾಡುತ್ತೇನೆ.)

ಈ ಹಿಂದೆ ಹಲವಾರು ಜನ ಈ ತರಹದ ಸಹಾಯ ಮಾಡುತ್ತೇವೆ ಎಂದು ಮುಂದೆ ಬಂದಿದ್ದರು. ಆದರೆ ಆಗ ಏನು ಕೇಳುವುದು ಎಂದು ಗೊತ್ತಿರಲಿಲ್ಲ. ಈಗ ಎಲ್ಲವೂ ಸ್ವತಂತ್ರವಾಗಿ ಮಾಡುವ ಸಾಧ್ಯತೆ ಇರುವುದರಿಂದ ಅವರಿಗೂ ಪತ್ರ ಬರೆಯುತ್ತೇನೆ. ಬ್ಲಾಗಿನಲ್ಲಿ ಓದಿ ಯಾರಾದರೂ ಸ್ಪಂದಿಸಬಹುದು ಎಂದು ಇಲ್ಲಿಯೂ ಬರೆದಿದ್ದೇನೆ. ನೀವು ಈ ಸಹಾಯ ಮಾಡಬಲ್ಲಿರಾದರೆ ದಯವಿಟ್ಟು vicharamantapa@vicharamantapa.net ಗೆ ಮೇಯ್ಲ್ ಮಾಡಿ. ಯೂಸರ್ ಐಡಿ ವಿವರಗಳನ್ನು ಕಳುಹಿಸುತ್ತೇನೆ.

(ಎಲ್ಲವನ್ನೂ ಕನ್ವರ್ಟ್ ಮಾಡಿದ ಬಳಿಕ Drupal ನಲ್ಲಿರುವ ಮುಖಪುಟವೆ Default ಮುಖಪುಟವಾಗುತ್ತದೆ.)

Add a Comment

required, use real name
required, will not be published
optional, your blog address