ಉಡುಪಿಯಲ್ಲೊಂದು ಸಂವಾದ: ಕರ್ನಾಟಕದ ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ – ನಮ್ಮೆದುರಿನ ಸವಾಲುಗಳು

This post was written by admin on March 26, 2009
Posted Under: Uncategorized

ಸ್ನೇಹಿತರೆ,

ಮೊದಲಿಗೆ, ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು.

ಜನಪರ ವೇದಿಕೆ-ಉಡುಪಿ ಘಟಕ, ಇದರ ಸಹಯೋಗದೊಂದಿಗೆ www.vicharamantapa.net ಇದೇ ಭಾನುವಾರ (29-03-2009), ಮಧ್ಯಾಹ್ನ 3:00 ಗಂಟೆಗೆ “ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ: ನಮ್ಮೆದುರಿನ ಸವಾಲುಗಳು” ಈ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ವಿವರ ಹೀಗಿದೆ:

ಸ್ಥಳ: ಮಹಾಜನ ಸಭಾಂಗಣ, ಕಿದಿಯೂರು ಹೋಟೆಲ್, ಬಸ್ ನಿಲ್ದಾಣದ ಬಳಿ, ಉಡುಪಿ.

ದಿನ ಮತ್ತು ಸಮಯ: ಭಾನುವಾರ (29-03-2009), ಮಧ್ಯಾಹ್ನ 3:00

ಪ್ರಸ್ತಾವನೆ: ಡಿ.ಎಸ್. ನಾಗಭೂಷಣ್

ವಿಷಯದ ಕುರಿತು ಮಾತು: ರವಿ ಕೃಷ್ಣಾ ರೆಡ್ಡಿ

ಪ್ರತಿಕ್ರಿಯೆ: ಪಟ್ಟಾಭಿರಾಮ ಸೋಮಯಾಜಿ, ಶಾರದಾ ಭಟ್, ಜಯನ್ ಮಲ್ಪೆ, ಹಾಗೂ ಕಾರ್ಯಕ್ರಮಕ್ಕೆ ಬಂದವರು.

ಅಧ್ಯಕ್ಷತೆ: ಸಿ.ಎನ್. ಶೆಟ್ಟಿ


ಉಡುಪಿ ಮತ್ತು ಮಂಗಳೂರಿನ ಓದುಗರಿಗೆ ಮತ್ತು ಆಸಕ್ತರಿಗೆ, ಹಾಗೂ ಕಾರ್ಯಕ್ರಮಕ್ಕೆ ಬರುವ ಅನುಕೂಲತೆಗಳಿರುವ ಎಲ್ಲರಿಗೂ ಈ ಸಂವಾದಕ್ಕೆ ಬಂದು ಅದರಲ್ಲಿ ಪಾಲ್ಗೊಳ್ಳಬೇಕೆಂದು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ. ಕರ್ನಾಟಕದ ಇವತ್ತಿನ ಸ್ಥಿತಿ ಮತ್ತು ಮುಖ್ಯವಾಗಿ “ಗತಿ”ಯ ಬಗ್ಗೆ ಮಾತನಾಡೋಣ. ಹಾಗೆಯೆ, ಬಹುಶಃ, ಕರಾವಳಿಯ ಇವತ್ತಿನ “ವಾಸ್ತವ”ದ ಬಗ್ಗೆಯೂ.

ಮತ್ತೂ ಮುಖ್ಯವಾಗಿ, ಈ ಬ್ಲಾಗ್ ಓದುವ ಓದುಗರು ಈ ಸಂವಾದದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು, ಹಾಗೂ ತಾವು ಅಲ್ಲಿ ಇದ್ದಿದ್ದರೆ ಯಾವ ಪ್ರಶ್ನೆಗಳನ್ನು ಕೇಳುತ್ತಿದ್ದಿರೊ, ಅಥವ ಯಾವ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಿರೊ ಅದನ್ನೂ ಸಹ, ಇಲ್ಲಿ ಹಂಚಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಹೋಗುವ ಮೊದಲು ನಾನು ಅವೆಲ್ಲವನ್ನೂ ಓದಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಮುಖ್ಯವೆನಿಸಿದ್ದನ್ನು ಪ್ರಸ್ತಾಪಿಸುವ ಆಥವ ಸಂವಾದದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನೂ ನನ್ನ ಕಡೆಯಿಂದ ಮಾಡುತ್ತೇನೆ.

ನಮಸ್ಕಾರ,
ರವಿ…

Add a Comment

required, use real name
required, will not be published
optional, your blog address