ಕನ್ನಡ ಚಿತ್ರರಂಗ 75 – ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿ

This post was written by admin on January 19, 2010
Posted Under: Uncategorized

ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ.

ಲೇಖಕ ಕೆ. ಪುಟ್ಟಸ್ವಾಮಿಯವರು “ವಿಕ್ರಾಂತ ಕರ್ನಾಟಕ“ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ ಚಿತ್ರರಂಗದ ಇತಿಹಾಸವನ್ನು ಅಭ್ಯಸಿಸುವವರಿಗೆ ಇನ್ನು ಮುಂದಕ್ಕೆ ಎಲ್ಲಾ ರೀತಿಯಿಂದಲೂ ಆಕರ ಮೂಲವಾಗುವ ಬರಹಗಳು ಅವು. ಇತ್ತೀಚೆಗೆ ತಾನೆ ಈ ಲೇಖನಗಳು “ಸಿನಿಮಾ ಯಾನ (ಕನ್ನಡ ಚಿತ್ರರಂಗ 75 : ಒಂದು ಫ್ಲಾಷ್‌ಬ್ಯಾಕ್)” ಎಂಬ ಪುಸ್ತಕ ರೂಪದಲ್ಲಿ ಬಂದಿದೆ.

ಈ ಪುಸ್ತಕಕ್ಕೆ ಎನ್.ಎಸ್. ಶಂಕರ್ ಬರೆದಿರುವ ಮುನ್ನುಡಿ ಇಲ್ಲಿದೆ.

“ಸಿನೆಮಾ ಯಾನ” ಬಿಡುಗಡೆಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಈ ಪುಸ್ತಕದ ಹಿನ್ನೆಲೆಯಲ್ಲಿ, ಪುಟ್ಟಸ್ವಾಮಿಯವರೊಂದಿಗೆ ನೇರಪ್ರಸಾರದ ಸಂದರ್ಶನ ಮತ್ತು ಮಾತುಕತೆಯನ್ನು ಮಧುಕಾಂತ್ ತಮ್ಮ ನಾಳೆಯ ರೇಡಿಯೊ ಕಾರ್ಯಕ್ರಮದಲ್ಲಿ ನಡೆಸಿಕೊಡುತ್ತಿದ್ದಾರೆ. ಬೇ ಏರಿಯಾದಲ್ಲಿರುವ ಕೇಳುಗರು ಈ ಕಾರ್ಯಕ್ರಮವನ್ನು 90.1 FM ತರಂಗಾಂತರದಲ್ಲಿ ಕೇಳಬಹುದು. ಜೊತೆಗೆ, ಇಂಟರ್ನೆಟ್ ಸೌಲಭ್ಯ ಇರುವ ಎಲ್ಲರೂ ಎಲ್ಲಿಂದಲಾದರೂ ತಮ್ಮ ಕಂಪ್ಯೂಟರ್ ಮೂಲಕ ಆಲಿಸಬಹುದು. ತಮ್ಮ ಅಭಿಪ್ರಾಯಗಳನ್ನೂ ಈ ನೇರಪ್ರಸಾರದಲ್ಲಿ ಹಂಚಿಕೊಳ್ಳಬಹುದು.
ದಿನಾಂಕ: ಜನವರಿ 20, 2010 – ಬುಧವಾರ
ಸಮಯ: 7.30 AM to 8.30 AM (PST) / ರಾತ್ರಿ 9 ರಿಂದ 10 (ಭಾರತೀಯ ಕಾಲಮಾನ)

ಹೆಚ್ಚಿನ ವಿವರಗಳು ಮಧುಕಾಂತ್‌ರ ಬ್ಲಾಗ್‌ನಲ್ಲಿ ಇವೆ.

ಅಂದ ಹಾಗೆ, ಇಲ್ಲಿಯವರೆಗೆ ಇಂತಹ 19 ಕನ್ನಡ ಕಾರ್ಯಕ್ರಮಗಳನ್ನು ಕೊಟ್ಟಿರುವ ಮಧುಕಾಂತರಿಗೆ ಇದು 20 ನೇ ಕಾರ್ಯಕ್ರಮ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳೂ ಈ ಕೆಳಗಿನ ಕೊಂಡಿಯಲ್ಲಿ ಕೇಳಲು ಲಭ್ಯವಿದೆ.
http://www.itsdiff.com/Kannada.html

ತಮ್ಮದೆ ನೆಲೆಯಲ್ಲಿ ಒಂದು ಒಳ್ಳೆಯ ಆರೋಗ್ಯವಂತ ಸಾಂಸ್ಕತಿಕ ಸಂದರ್ಭವನ್ನು ಸೃಷ್ಟಿಸಿಕೊಳ್ಳಲು ತವಕಿಸುವ ಮಧುಕಾಂತರಂತಹ ಪ್ರಯತ್ನಗಳು ಗಮನಾರ್ಹ ಮತ್ತು ಪ್ರಶಂಸನೀಯ.

Reader Comments

How come you stopped uploading video blogs on YouTube? Any plans to continue them? I hope you would.

#1 
Written By Krishna on January 20th, 2010 @ 1:54 pm

Add a Comment

required, use real name
required, will not be published
optional, your blog address