"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

This post was written by admin on February 29, 2008
Posted Under: Uncategorized

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಇಲ್ಲಿಗೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು.

ಈಗ ಈ ಲೇಖನಗಳನ್ನು ಮತ್ತೆ ನೋಡುತ್ತಿದ್ದಾಗ ತೇಜಸ್ವಿ ಮತ್ತು ಭೈರಪ್ಪನವರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಅವಧಿಯಲ್ಲಿ (ಅಂದರೆ 2007 ರ ಪೂರ್ವಾರ್ಧದಲ್ಲಿ) ನನಗೆ ಪ್ರಸ್ತುತರಾಗಿದ್ದು ಕಾಣಿಸುತ್ತದೆ. ತೇಜಸ್ವಿಯವರು ಸಾಯುವ ನಾಲ್ಕೈದು ದಿನಗಳ ಹಿಂದೆ ಬರೆದಿದ್ದ “ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ…” ಲೇಖನದಲ್ಲೂ ಅವರಿದ್ದಾರೆ. ಅವರು ತೀರಿಕೊಂಡ ಸಂದರ್ಭದಲ್ಲಿ ಬರೆದದ್ದು “ಜೀವಂತ ರೋಲ್ ಮಾಡೆಲ್ ಇನ್ನಿಲ್ಲ…“. ಹಾಗೆಯೆ, ರಾಮದಾಸರು ತೀರಿಕೊಂಡ ಸಂದರ್ಭದಲ್ಲಿ ಬರೆದ “ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು…” ಲೇಖನದಲ್ಲೂ ನೆನಪಾಗಿದ್ದಾರೆ.

ಇನ್ನು ಭೈರಪ್ಪನವರೂ ಮೂರ್ನಾಲ್ಕು ಕಡೆ ಕಾಣಿಸಿಕೊಂಡಿರುವುದನ್ನು ಕಂಡಾಗ ನನಗೇನಾದರೂ ಭೈರಪ್ಪ-ಫೋಬಿಯ ಇತ್ತೆ ಎನ್ನುವ ಸಂದೇಹ ಬರುತ್ತದೆ. ಆದರೆ ಅದು ನನ್ನೊಬ್ಬನದೆ ಕತೆಯಲ್ಲ, ಹಾಗೂ ಆ ಸಮಯದಲ್ಲಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಬರಹಗಾರರು ಈ ವಿಚಾರದಲ್ಲಿ ಪದೆಪದೆ ಭೈರಪ್ಪನವರನ್ನು (ಪರ-ವಿರೋಧ) ಚರ್ಚಿಸಿದ್ದಾರೆ ಎನ್ನಿಸುತ್ತದೆ. ಯಾಕೆಂದರೆ, ಅದು ಆವರಣದ ಮಾಯೆ ಆವರಿಸಿಕೊಂಡಿದ್ದ ಕಾಲ. ಭೈರಪ್ಪನವರನ್ನು ಪ್ರತ್ಯಕ್ಷ-ಪರೋಕ್ಷವಾಗಿ ನೆನಪಿಸಿಕೊಂಡಿರುವ ಲೇಖನಗಳು:

ಎಂದಿನಂತೆ, ಪ್ರತಿಕ್ರಿಯೆಗಳಿಗೆ ಮತ್ತು ವಿಮರ್ಶೆಗಳಿಗೆ ಮುಕ್ತ ಸ್ವಾಗತವಿದೆ.

ನಮಸ್ಕಾರ,
ರವಿ…

Add a Comment

required, use real name
required, will not be published
optional, your blog address