ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಪ್ರಣಾಳಿಕೆ

ಬಂಧುಗಳೇ,

ಇದೇ ಜೂನ್ 11, 2018 ರಂದು ನಡೆಯಲಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು, ಕ್ಷೇತ್ರದ ಅಭಿವೃಧ್ಧಿಗೆ ನನ್ನ ಕನಸು ಮತ್ತು ಯೋಜನೆಗಳೇನು, ಹಾಗೂ ಶಾಸಕನಾಗಿ ನನ್ನ ಕರ್ತವ್ಯ ಮತ್ತು ನಡತೆ ಹೇಗಿರುತ್ತದೆ ಎಂಬ ವಿವರಗಳನ್ನು ನೆನ್ನೆ (02-06-2018) ಬಿಡುಗಡೆ ಮಾಡಲಾದ ಈ ಪ್ರಣಾಳಿಕೆಯ ಮೂಲಕ ಜನರ ಮುಂದಿಡುತ್ತಿದ್ದೇನೆ. ಜಯನಗರ ಕ್ಷೇತ್ರದ ಜನತೆ ಇದನ್ನು ಗಮನಿಸಿ, ಪ್ರಜಾಪ್ರಭುತ್ವವನ್ನು ಕಟ್ಟುವ ನಮ್ಮೆಲ್ಲರ ನೈತಿಕ ಜವಾಬ್ದಾರಿಯನ್ನು ಮನಗಂಡು, ವಿಷಯಾಧಾರಿತವಾಗಿ, ದುಷ್ಟ-ಭ್ರಷ್ಟ ರಾಜಕಾರಣದ ವಿರುದ್ಧವಾಗಿ ಮತ್ತು ಸ್ವಚ್ಚ ಹಾಗೂ ಯೋಗ್ಯ ರಾಜಕಾರಣದ ಪರವಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಬೇಕೆಂದು ಈ ಮೂಲಕ ಕೋರುತ್ತೇನೆ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ಪಕ್ಷೇತರ ಅಭ್ಯರ್ಥಿ, ಜಯನಗರ ವಿಧಾನಸಭಾ ಕ್ಷೇತ್ರ

ಕನ್ನಡ ಪಿಡಿಎಫ಼್
English PDF

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ

ಬಂಧುಗಳೇ,

ಇವು ನಮ್ಮ “ಒಂದು ವೋಟು, ಒಂದು ನೋಟು” ಅಭಿಯಾನದ ಕುರಿತ ಇಂದು ಮತ್ತು ನೆನ್ನೆಯ ಕೆಲವು ಪತ್ರಿಕಾ ವರದಿಗಳು. ದಯವಿಟ್ಟು ಇದನ್ನು ಹಂಚಿಕೊಳ್ಳಿ ಮತ್ತು ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಇದನ್ನೇ ಅನುಸರಿಸಲು ಹೇಳಿ. ಅವರ ಕಳ್ಳ, ಲೂಟಿಯ, ಅಥವಾ ಜಮೀನು/ಸೈಟು ಮಾರಿದ ಹಣವನ್ನು ಚುನಾವಣೆ ಕೊಳ್ಳಲು ಬಳಸುವುದು ಬೇಡ. ಜನರ ಮತ ಮಾರಾಟಕ್ಕಿರಬಾರದು, ಮತ್ತು ಅವರ ಭವಿಷ್ಯ ಜೂಜಿನ ವಸ್ತು ಆಗಕೂಡದು..

ನಮ್ಮ ಈ ಅಭಿಯಾನ ಚುನಾವಣೆಯ ಹಿಂದಿನ ದಿನದವರೆಗೂ ಮುಂದುವರೆಯುತ್ತಿರುತ್ತದೆ. ಚುನಾವಣೆಗೆಂದೇ ತೆರೆದಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ದೇಣಿಗೆ ನೀಡಿ. ಎಲ್ಲಾ ದೇಣಿಗೆ/ಖರ್ಚಿನ ವಿವರಗಳನ್ನು ಇಲ್ಲಿ ಮತ್ತು ವೆಬ್’ಸೈಟ್ ನಲ್ಲಿ ಪ್ರಕಟಿಸಲಾಗುವುದು.

Account Details:
Name: Ravi Krishna Reddy
Number: 45511841508
Type: SB Account
IFSC Code: SCBL0036073
(Standard Chartered Bank, Cunningham Road Branch)

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
05-04-2018

Powered by WordPress