ಕೈಗಾರಿಕೆಗಳಿಗೆ ಕೃಷಿಜಮೀನು ಕೊಟ್ಟ ಹಳ್ಳಿಯ ಆರಂಭದ ದಿನಗಳು…

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.] ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, [...]

ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ…

ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್‌ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ. ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: “ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. [...]

ಗಾಂಜಾ ಬೆಳೆಯುವ ಲಿವರ್‌ಮೋರ್ ಮನೆಯ ಮೇಲೆ ದಾಳಿ

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.] ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್‌ಲ್ಯಾಂಡ್‌ನಿಂದ ಲಿವರ್‌ಮೋರ್‌ಗೆ ಹೊರಟರು. ಕೊರಾನ್‌ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್‌ರೂಮ್‌ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ [...]

ಲಿಂಗಾಯತ ಸಮಾವೇಶದಲ್ಲಿ ಆನು “ಹೊರಗಣವನು”

ನನ್ನ ಇನ್ನಿತರೆ ವ್ಯವಹಾರಗಳಲ್ಲಿ ವ್ಯಸ್ತನಾಗುವುದಕ್ಕಿಂತ ಮುಂಚೆ ಇದನ್ನು ಇಲ್ಲಿ ದಾಖಲಿಸೋಣ ಎಂದು ಬರೆಯುತ್ತಿದ್ದೇನೆ. ಕಳೆದ ವಾರ (ಜುಲೈ 3-4, 2010) ಕೆನಡಾದ ಟೊರಾಂಟೋದಲ್ಲಿ ಲಿಂಗಾಯತ (ಮತ್ತು/ಅಥವ ವೀರಶೈವ) ಸಮುದಾಯದ ಸಮಾವೇಶ ನಡೆಯಿತು. “ಉತ್ತರ ಅಮೆರಿಕದ ವೀರಶೈವ ಸಮಾಜ” ವರ್ಷಕ್ಕೊಮ್ಮೆ ನಡೆಸುವ ಸಮಾವೇಶ ಅದು. ಯಾವುದೇ ಜಾತಿಯ ಸಮಾವೇಶ ಅಥವ ಸಭೆಗಳಲ್ಲಿ ಪಾಲ್ಗೊಳ್ಳುವುದು ಜಾತ್ಯತೀತ ಮತ್ತು ಪ್ರಗತಿಪರ ನಿಲುವಿನ ಮತ್ತು ಬದ್ಧತೆಯ ಯಾರೊಬ್ಬರಿಗೂ ಕಷ್ಟ. ಅದು ತಪ್ಪೂ ಕೂಡ. ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡುತ್ತ, 12ನೇ ಶತಮಾನದಲ್ಲಿಯೆ ಜಾತ್ಯತೀತವಾದ [...]

ಎದೆಯ ಕೂಗನು ಮೀರಿ… ಬಿಡುಗಡೆಯ ಚಿತ್ರಗಳು

ಒಂದಷ್ಟು ಸಂವಾದ, ಚರ್ಚೆ, ತಮಾಷೆ ಮತ್ತು ಖುಷಿಯ ನಡುವೆ “ಎದೆಯ ಕೂಗನು ಮೀರಿ” ಕಳೆದ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮ ನಡೆಸಲು ಸಹಾಯ ಮಾಡಿದ ಮತ್ತು ನಡೆಸಿಕೊಟ್ಟ ಗೆಳೆಯ ಪೃಥ್ವಿ, ಅವರ ಮನೆಯವರು, ಪೃಥ್ವಿಯ ಬಾಲ್ಯದ ಗೆಳೆಯ ರಾಮಚಂದ್ರ ಗಂಗ, ಅಸಿತ ಮತ್ತು ಪ್ರಭುಶಂಕರ್‌ರವರಿಗೆ ನನ್ನ ಕೃತಜ್ಞತೆಗಳು. ಅಂದ ಹಾಗೆ ಪುಸ್ತಕದ ಮುಖಪುಟ ವಿನ್ಯಾಸ ಬಸವರಾಜುರವರದು. ಬೆಂಗಳೂರಿನಲ್ಲಿಯ ಅವರ ಕೆಲಸದ ಒತ್ತಡದಿಂದ ಅವರಿಗೆ ಬರಲಾಗಿರಲಿಲ್ಲ. ಅವರಿಗೂ ನನ್ನ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಕಾರ್ಯಕ್ರಮದ ಕೆಲವು ಚಿತ್ರಗಳು [...]

ಎದೆಯ ಕೂಗನು ಮೀರಿ…: ಮೈಸೂರಿನಲ್ಲಿ ಬಿಡುಗಡೆ

ಸ್ನೇಹಿತರೆ, ಮೊದಲು ದಟ್ಸ್‌ಕನ್ನಡದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ನಂತರ ವಿಕ್ರಾಂತ ಕರ್ನಾಟಕದಲ್ಲೂ ಧಾರಾವಾಹಿಯಾಗಿ ಪ್ರಕಟವಾಗಿದ್ದ ಅನುವಾದಿತ ಕಾದಂಬರಿ “ಎದೆಯ ಕೂಗನು ಮೀರಿ…” ಇದೇ ಭಾನುವಾರ ಸಂಜೆ ೫ ಗಂಟೆಗೆ ಮೈಸೂರಿನಲ್ಲಿ ಪುಸ್ತಕರೂಪದಲ್ಲಿ ಬಿಡುಗಡೆಯಾಗಲಿದೆ. ಕಾದಂಬರಿಯ ಮೂಲಕರ್ತೃ ಅಸಿತ ಪ್ರಭುಶಂಕರ ಸಹ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ವಿವರಗಳು ಹೀಗಿವೆ: ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ: ಡಾ. ಇ. ರತಿರಾವ್ (ನಿವೃತ್ತ ವಿಜ್ಞಾನಿ) ಪುಸ್ತಕದ ಕುರಿತು: ಡಾ. ಆರ್. ಇಂದಿರಾ (ಸಮಾಜಶಾಸ್ತ್ರಜ್ಞೆ) ಉಪಸ್ಥಿತಿ: ಅಸಿತ ಪ್ರಭುಶಂಕರ (ಕಾದಂಬರಿಯ ಮೂಲಕರ್ತೃ) ರವಿ [...]