ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 29, 2008 ರ ಸಂಚಿಕೆಯಲ್ಲಿನ ಲೇಖನ.) ಈ ಬಾರಿಯೂ ಭಾರತ ಏನಾದರೂ ಒಂದು ಪದಕ ಗೆದ್ದರೆ ಅದು ಪವಾಡವೆ ಎನ್ನುವಂತಹ ಸ್ಥಿತಿ ೨೦೦೮-ಒಲಿಂಪಿಕ್ಸ್ ಆರಂಭವಾದಾಗಲೆ ಇತ್ತು. ಬಹುಶಃ ಕೆಲವೆ ಕೆಲವರನ್ನು ಬಿಟ್ಟರೆ ಇಡೀ ದೇಶ ಅಂತಹ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಹುದರಲ್ಲಿ ಅಭಿನವ್ ಬಿಂದ್ರಾ ಹತ್ತು ಮೀಟರ್‌ಗಳ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದದ್ದು ಒಂದು ಚಾರಿತ್ರಿಕ ಘಟನೆ. ಅಷ್ಟೆ ಮುಖ್ಯವಾದದ್ದು ಆ ಪೈಪೋಟಿಯ ಸಮಯದಲ್ಲಿ ಆತ ತೋರಿಸಿದ ಪ್ರಬುದ್ಧ [...]

"ಕನ್ನಡ, ಪೂರ್ವದ ಇಟಾಲಿಯನ್" ಮತ್ತು "ಪಂಪೆ, ಹಾಳುಕೊಂಪೆ"

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 22, 2008 ರ ಸಂಚಿಕೆಯಲ್ಲಿನ ಲೇಖನ.) ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಹೆಚ್ಚೂಕಮ್ಮಿ ಒಂದೇ ರೀತಿ ಇರುವುದರಿಂದ ಮತ್ತು ಕರ್ನಾಟಕ ಮತ್ತು ಆಂಧ್ರ ನೂರಾರು ಮೈಲು ಉದ್ದದ ಗಡಿ ಹಂಚಿಕೊಂಡಿರುವುದರಿಂದ ಆಗಾಗ್ಗೆ ಕನ್ನಡದ ಪತ್ರಿಕೆಗಳಲ್ಲಿ ತೆಲುಗಿನ ಅಥವ ಆಂಧ್ರದ ಸುದ್ದಿಗಳು ಬರುವುದು ಸಹಜ. ಅಂತಹ ಲೇಖನಗಳಲ್ಲಿ ಅನೇಕ ಸಲ ಬರುವ ಕ್ಲಿಷೆ, ತೆಲುಗು, ಪೂರ್ವದ ಇಟಾಲಿಯನ್. ಎಂದು. ಇದನ್ನು ಮೆಚ್ಚುಗೆಯ ರೂಪದಲ್ಲಿಯೊ ಅಥವ ಹೆಮ್ಮೆಯ ರೂಪದಲ್ಲಿಯೋ ಬಳಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ [...]

ಗಾಂಧಿ ಜಯಂತಿ ಕಥಾಸ್ಪರ್ಧೆ…

[ಈ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಅದು ಇಲ್ಲಿದೆ.] ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತ ಬಂದಿದೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮತ್ತೆ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ! ಬಹುಶಃ ಇನ್ನು ಏಳೆಂಟು ತಿಂಗಳಿನಲ್ಲಿ ಇಡೀ ದೇಶವೆ ಲೋಕಸಭೆಗೆ ತನ್ನ ಪ್ರತಿನಿಧಿಗಳನ್ನು ಚುನಾಯಿಸಲಿದೆ. ಈ ಚುನಾವಣೆಗಳಲ್ಲಿ ನಿಜವಾಗಲೂ ಆಗುವುದು ಏನು, ಜನರ ಮನಸ್ಥಿತಿ ಹೇಗೆ ವರ್ತಿಸುತ್ತದೆ, ಪ್ರಜಾಪ್ರಭುತ್ವ ಯಾವಯಾವ ಹಂತದಲ್ಲಿ ಹೇಗೆ ಬದಲಾಗುತ್ತದೆ, ಇತ್ಯಾದಿಗಳೆಲ್ಲ ಚುನಾವಣಾ ರಾಜಕೀಯವನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೆ. ಆದರೆ ಮಿಕ್ಕ ಬಹುಪಾಲು [...]

ಭಾರತೀಯ ಮೂಲದ ಜನಾಂಗವೊಂದರ ವಿರುದ್ಧ ಯೂರೋಪಿನಲ್ಲಿ ತಾರತಮ್ಯ…

ಅದು ೧೭ ನೇ ಶತಮಾನದ ಇಂಗ್ಲೆಂಡ್. ಅಂತರ್ಯುದ್ಧದ ಮುಖಾಂತರ ಅರೆಬರೆ ಪ್ರಜಾತಂತ್ರದಿಂದ ಪೂರ್ಣಮಟ್ಟದ ಪ್ರಜಾಪ್ರಭುತ್ವದತ್ತ ಇಂಗ್ಲೆಂಡ್ ಹೊರಳಿದ ಸಮಯ. ಕೆಲವು ಮತೀಯ ಮತ್ತು ರಾಜಕೀಯ ಕಾರಣಗಳಿಂದಾಗಿ ಆರಂಭವಾದ ಆ ಯುದ್ಧ ಆಗಿನ ದೊರೆ ಮೊದಲ ಚಾರ್ಲ್ಸ್‌ನ ಬಹಿರಂಗ ಶಿರಚ್ಚೇದನವನ್ನೇ ಕೇಳಿತು. ದೊರೆಗೆ ಎದುರಾಗಿ ನಿಂತವನು ಆಲಿವರ್ ಕ್ರಾಮ್‌ವೆಲ್ ಎಂಬ ಪ್ರಜಾತಂತ್ರ ಮತ್ತು ಪ್ರಜಾಹಕ್ಕುಗಳ ಪರ ಇದ್ದ ಶ್ರೀಮಂತ ಜಮೀನುದಾರ. ಎಲ್ಲಾ ಅಂತರ್ಯುದ್ಧಗಳಲ್ಲಿ ಆಗುವಂತೆ ಆ ಸಮಯದಲ್ಲಿಯೂ ದೇಶದಲ್ಲಿನ ಎಲ್ಲಾ ತರಹದ ಪ್ರಜೆಗಳು ಅಪಾರವಾದ ಕಷ್ಟನಷ್ಟಗಳಿಗೆ ಈಡಾದರು. ವಿಶೇಷವಾಗಿ, [...]